ಉಪ್ಪಾಡ ಬೀಚ್​ನಲ್ಲಿ ತೇಲಿಬರುತ್ತಿದೆ ರಾಶಿಗಟ್ಟಲೇ ಚಿನ್ನ! ಮೀನು ಬಿಟ್ಟು ಚಿನ್ನದ ಬೇಟೆಗಿಳಿದ ಮೀನುಗಾರರು

Gold
Published on

ವಿಜಯವಾಡ: ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಉಪ್ಪಾಡ ಕರಾವಳಿಯಲ್ಲಿ ಸ್ಥಳೀಯ ಜನರ ಚಿನ್ನದ ಬೇಟೆ ಭಾರೀ ಜೋರಾಗಿ ಸಾಗಿದೆ. ಮೀನುಗಾರರು ಕೂಡ ತಮ್ಮ ದಿನನಿತ್ಯದ ಕಾಯಕವನ್ನು ಬದಿಗಿಟ್ಟು ಚಿನ್ನದ ಬೇಟೆಯಲ್ಲಿ ಮುಳುಗಿದ್ದಾರೆ.

ಬಾಲಕಿಯರು ಕೂಡ ಶಾಲೆಗೆ ಚಕ್ಕರ್​ ಹೊಡೆದು ಚಿನ್ನದ ಹುಡುಕಾಟದಲ್ಲಿ ತೊಡಗಿದ್ದಾರೆ. ಕೆಲವರು ಚಿನ್ನದ ಕಣಗಳನ್ನು ಪತ್ತೆಹಚ್ಚಿದ್ದರೆ, ಇನ್ನು ಕೆಲವರಿಗೆ ರಿಂಗ್ಸ್​ ಮತ್ತು ಚಿನ್ನದ ಹೊಳ್ಳೆಗಳು ಸಿಗುತ್ತಿವೆ, ಇದೇ ಕರಾವಳಿಯಲ್ಲಿ ಈ ಹಿಂದೆ ಬೆಳ್ಳಿಯ ನಾಣ್ಯಗಳು ಪತ್ತೆಯಾಗಿದ್ದವು.

ಈ ಬಾರಿ ಚಿನ್ನ ಕಾಣಿಸಿಕೊಂಡಿರುವುದರಿಂದ ಜನರ ದಂಡೇ ಕರಾವಳಿ ಪ್ರದೇಶದತ್ತ ಹರಿದು ಬರುತ್ತಿದೆ. ಇತಿಹಾಸದಲ್ಲಿ ರಾಜರ ಕೋಟೆಗಳು ಮತ್ತು ಅನೇಕ ದೇವಾಲಯಗಳು ಸಮುದ್ರದ ಗರ್ಭದಲ್ಲಿ ವಿಲೀನಗೊಂಡಿದ್ದು, ಇದಕ್ಕೆ ಸಂಬಂಧಿಸಿದ ವಸ್ತುಗಳು ಚಂಡಮಾರುತಗಳಿಗೆ ಸಿಲುಕಿ ಹೊರ ಜಗತ್ತಿಗೆ ತೇಲಿ ಬರುತ್ತಿವೆ ಎಂದು ಮೀನುಗಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net