

ನವದೆಹಲಿ: ಡಿಸೆಂಬರ್ 26ರಿಂದ ಆರಂಭವಾಗವ ಮೂರು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಪ್ರವಾಸಿ ಭಾರತ ಮತ್ತು ಆತಿಥೇಯ ದಕ್ಷಿಣ ಆಫ್ರಿಕಾ ಗೆಲುವಿಗಾಗಿ ಸೆಣಸಾಡಲಿವೆ. ಕಳೆದ ವಾರವೇ ದಕ್ಷಿಣ ಆಫ್ರಿಕಾಗೆ ಹಾರಿರುವ ಟೀಮ್ ಇಂಡಿಯಾ ಅಭ್ಯಾಸದಲ್ಲಿ ನಿರತವಾಗಿದೆ. ಇದರ ನಡುವೆ ಟೀಮ್ ಇಂಡಿಯಾದ ಮಾಜಿ ಆಟಗಾರ ಹಾಗೂ 2006ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ತಂಡದ ಭಾಗವಾಗಿದ್ದ ವಾಸಿಂ ಜಾಫರ್, ಟೆಸ್ಟ್ ಸರಣಿಯಲ್ಲಿ ಭಾರತ ತಂಡವನ್ನು ಕಾಡುವ ಬೌಲರ್ ಯಾರೆಂಬುದನ್ನು ಹೆಸರಿಸಿದ್ದಾರೆ.
ಭಾರತದ ಬೌಲರ್ಗಳನು ತಮ್ಮ ತಂಡವನ್ನು ಆಟದಲ್ಲಿ ಉಳಿಸಿಕೊಳ್ಳಲಿದ್ದಾರೆ. ಭಾರತ ವೇಗಿಗಳು ಇದೀಗ ತುಂಬಾ ಅನುಭವಿಗಳಾಗಿದ್ದಾರೆ. ಜಸ್ಪ್ರಿತ್ ಬೂಮ್ರಾ ಮತ್ತು ಮೊಹಮ್ಮದ್ ಶಮಿ ಸಾಕಷ್ಟು ಅನುಭವ ಹೊಂದಿದ್ದಾರೆ. ಅಲ್ಲದೆ, ಟೀಮ್ ಇಂಡಿಯಾ ಆಲ್ರೌಂಡರ್ ದಾಳಿಯನ್ನು ಹೊಂದಿದೆ. ಭಾರತ 400ಕ್ಕೂ ಅಧಿಕ ಸ್ಕೋರ್ ಮಾಡಿದರೆ, ಪಂದ್ಯವನ್ನು ಗೆಲ್ಲಲಿದ್ದಾರೆ. ನಮ್ಮ ಬೌಲಿಂಗ್ ದಾಳಿ ಉತ್ತಮವಾಗಿದೆ. ಆದರೆ, ಸವಾಲು ಎದುರಾಗಿರುವುದು ಬ್ಯಾಟಿಂಗ್ ವಿಭಾಗದಲ್ಲಿ ಎಂದು ಜಾಫರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿರಾಟ್ ಕೊಹ್ಲಿ ಬ್ಯಾಟಿಂಗ್ಗೆ ಇತರೆ ಆಟಗಾರರು ಸಾಥ್ ನೀಡಬೇಕೆಂದು ಜಾಫರ್ ಬಯಸಿದ್ದಾರೆ. 2018ರ ಪ್ರವಾಸದಲ್ಲಿ ಆಫ್ರಿಕಾ ವಿರುದ್ಧ ಕೊಹ್ಲಿ ಮಾತ್ರ ಉತ್ತಮ ರನ್ ಗಳಿಸಿದ್ದರು. ಇತರೆ ಬ್ಯಾಟ್ಸ್ಮನ್ಗಳು ಕೂಡ ಉತ್ತಮವಾಗಿ ಆಡಬೇಕಿದೆ. ಮೊದಲ ಆರು ಬ್ಯಾಟಿಂಗ್ ಕ್ರಮಾಂಕದಲ್ಲಿ ಭಾರತ ತಂಡ ಹೆಚ್ಚು ಸಮತೋಲನ ಹೊಂದಿದೆ. ರಿಷಬ್ ಪಂತ್ ಅರ್ಧ ಅಥವಾ ಒಂದು ಗಂಟೆಗಳ ಕಾಲ ಕ್ರೀಸ್ನಲ್ಲಿ ನಿಂತರೆ ಆಟವನ್ನು ಬದಲಿಸಲಿದ್ದಾರೆ. ತಂಡದಲ್ಲಿ ಉತ್ತಮ ಆಟಗಾರರಿದ್ದು, ವಿರಾಟ್ಗೆ ಸಾಥ್ ನೀಡುವಂತೆ ಕೊಡುಗೆ ನೀಡಬೇಕೆಂದು ಜಾಫರ್ ಸಲಹೆ ನೀಡಿದ್ದಾರೆ. (ಏಜೆನ್ಸೀಸ್)