More

    ದೇಶದಲ್ಲಿ ಒಮಿಕ್ರಾನ್ ಅಲೆ ಫೆಬ್ರವರಿಯಲ್ಲಿ ಉತ್ತುಂಗಕ್ಕೆ?: ಭಾರತದಲ್ಲಿ ಈಗಾಗಲೇ ಆರಂಭವಾಗಿದೆ ಮೂರನೇ ಅಲೆ

    ನವದೆಹಲಿ: ಒಮಿಕ್ರಾನ್ ಪ್ರಭೇದದ ಆತಂಕ ಕಾಡುತ್ತಿರುವುದರ ನಡುವೆ ಯೇ ಭಾರತದಲ್ಲಿ ಈಗಾಗಲೇ ಕರೊನಾ 3ನೇ ಅಲೆ ಕಾಲಿಟ್ಟಿದ್ದು, ಮುಂದಿನ ವರ್ಷ ಫೆಬ್ರವರಿ ಯಲ್ಲಿ ಉತ್ತುಂಗ ತಲುಪಲಿದೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಡಿಸೆಂಬರ್ ಮಧ್ಯಭಾಗದಲ್ಲೇ 3ನೇ ಅಲೆ ಕಾಲಿಟ್ಟಿದೆ ಎಂದು ಸಂಶೋಧನೆ ನಡೆಸಿದ ಐಐಟಿ- ಕಾನ್ಪುರದ ಸಂಶೋಧಕರು ಹೇಳಿದ್ದಾರೆ. ಸಂಖ್ಯಾಶಾಸ್ತ್ರದ ವಿಧಾನವನ್ನು ಬಳಸಿ ಲೆಕ್ಕಾಚಾರ ಹಾಕಿರುವ ಸಂಶೋಧಕರ ತಂಡ, 3ನೇ ಅಲೆಯ ತೀವ್ರತೆಯನ್ನು ಅಂದಾಜು ಮಾಡಿದೆ. ಸಾಂಕ್ರಾಮಿಕತೆಯ ಮೊದಲೆರಡು ಅಲೆಗಳ ಅಂಕಿಸಂಖ್ಯೆಗಳನ್ನು ಆಧಾರ ವಾಗಿಟ್ಟು ಕೊಂಡು ಐಐಟಿ ತಜ್ಞರು ಈ ಲೆಕ್ಕಾಚಾರ ಹಾಕಿದ್ದಾರೆ. ಈಗಾಗಲೇ ಮೂರನೇ ಅಲೆ ಎದುರಿಸುತ್ತಿರುವ ಇತರ ಹಲವು ದೇಶಗಳ ದತ್ತಾಂಶಗಳನ್ನು ಕೂಡ ಸಂಶೋಧಕರು ವಿಶ್ಲೇಷಿಸಿದ್ದಾರೆ.

    ಇಂದು ಮೋದಿ ಮೀಟಿಂಗ್: ದೇಶದಲ್ಲಿ ಹೆಚ್ಚುತ್ತಿರುವ ಕರೊನಾ ವೈರಸ್​ನ ಒಮಿಕ್ರಾನ್ ಪ್ರಭೇದದಿಂದ ಉಂಟಾಗಿರುವ ಆತಂಕಕಾರಿ ಪರಿಸ್ಥಿತಿಯನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಗುರುವಾರ ಮಹತ್ವದ ಸಭೆ ನಡೆಸಲಿದ್ದಾರೆ. ಹೊಸ ತಳಿಯ ಸೋಂಕು ಹೆಚ್ಚಾಗದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಮೋದಿ ಸಭೆಯಲ್ಲಿ ನಿರ್ದೇಶನ ನೀಡುವ ಸಾಧ್ಯತೆಯಿದೆ. ದೆಹಲಿ ಮತ್ತು ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿದ್ದು ದೇಶದಲ್ಲಿ ಹೊಸ ತಳಿಯ ಕೇಸ್ ಸಂಖ್ಯೆ 231ಕ್ಕೆ ಏರಿದೆ. ದೆಹಲಿ ಮತ್ತು ಮಹಾರಾಷ್ಟ್ರ ಅಲ್ಲದೆ ತೆಲಂಗಾಣ, ಕರ್ನಾಟಕ, ರಾಜಸ್ಥಾನ, ಕೇರಳ, ಗುಜರಾತ್, ಜಮ್ಮು-ಕಾಶ್ಮೀರ, ಒಡಿಶಾ, ಉತ್ತರ ಪ್ರದೇಶ, ಆಂಧ್ರ ಪ್ರದೇಶ, ಚಂಡೀಗಢ, ಲಡಾಖ್, ತಮಿಳು ನಾಡು, ಬಂಗಾಳದಲ್ಲಿ ಕೂಡ ಒಮಿಕ್ರಾನ್ ಸೋಂಕು ಕಂಡು ಬಂದಿದೆ. ಒಮಿಕ್ರಾನ್ ಜೊತೆ ಡೆಲ್ಟಾ ರೂಪಾಂತರಿ ಕೂಡ ದೇಶದಲ್ಲಿ ಬಹುವಾಗಿ ಕಾಡುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. 

    ವ್ಯಾಕ್ಸಿನ್ ಪಡೆದರೆ ಮಾತ್ರ ಸಿಗುತ್ತೆ ವೇತನ: ರಾಜ್ಯ ಸರ್ಕಾರಿ ನೌಕರರು ಕೋವಿಡ್ ಲಸಿಕೆ ಸರ್ಟಿಫಿಕೆಟ್ ಸಲ್ಲಿಸದಿದ್ದರೆ ವೇತನ ನೀಡದಿರಲು ಪಂಜಾಬ್ ಸರ್ಕಾರ ನಿರ್ಧರಿಸಿದೆ.

    ದೇಶದಲ್ಲಿ ಒಮಿಕ್ರಾನ್ ಅಲೆ ಫೆಬ್ರವರಿಯಲ್ಲಿ ಉತ್ತುಂಗಕ್ಕೆ?: ಭಾರತದಲ್ಲಿ ಈಗಾಗಲೇ ಆರಂಭವಾಗಿದೆ ಮೂರನೇ ಅಲೆಯುಕೆಯಲ್ಲಿ ಹೆಚ್ಚಿದ ಒಮಿಕ್ರಾನ್ ಸೋಂಕು: ಬ್ರಿಟನ್​ನಲ್ಲಿ ಒಮಿಕ್ರಾನ್ ಕೋವಿಡ್ ಸೋಂಕು ತೀವ್ರಗೊಂಡಿದೆ. ದೈನಿಕ ಪ್ರಕರಣಗಳ ಸಂಖ್ಯೆಯಲ್ಲೂ ವಿಪರೀತ ಹೆಚ್ಚಳ ದಾಖಲಾಗಿದೆ. 10,000 ದಷ್ಟಿದ್ದ ಹೊಸ ಸೋಂಕಿತರ ಸಂಖ್ಯೆ ಈಗ 1 ಲಕ್ಷದ ಗಡಿದಾಟಿದೆ. ಅಲ್ಲದೆ ಒಟ್ಟು ಸೋಂಕಿತರ ಸಂಖ್ಯೆ 1.1 ಕೋಟಿ ಆಸುಪಾಸಿನಲ್ಲಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರ ಹೆಚ್ಚಿನ ಮುಂಜಾಗ್ರತಾ ಕ್ರಮವನ್ನು ತೆಗೆದುಕೊಂಡಿದೆ.

    ಕರೊನಾ ಮಹಾಮಾರಿಯಿಂದ ಕೆಲಸ ಕಳೆದು ಕೊಂಡವರು ಹಾಗೂ ಉದ್ಯಮಿಗಳಿಗೆ ನೆರವಾಗಲು ಸ್ಥಾಪಿಸಿದ್ದ ನಿಧಿಯಿಂದ ಕನಿಷ್ಠ 100 ಬಿಲಿಯ ಡಾಲರ್ ಹಣ ಕಳವಾಗಿದೆ ಎಂದು ಅಮೆರಿಕದ ಬೇಹುಗಾರಿಕೆ ದಳ ಸೀಕ್ರೆಟ್ ಸರ್ವೀಸ್ ಮಂಗಳವಾರ ತಿಳಿಸಿದೆ. ಸುಮಾರು 87 ಬಿಲಿಯ ಡಾಲರ್ ಮೊತ್ತವನ್ನು ಕಾರ್ವಿುಕ ಇಲಾಖೆ ಸರಿಯಾಗಿ ಅರ್ಹರಿಗೆ ವಿತರಿಸಿಲ್ಲ. ಇದರಲ್ಲಿ ದೊಡ್ಡ ಮೋಸ ನಡೆದಿದೆ ಎಂದು ಸೀಕ್ರೆಟ್ ಸರ್ವೀಸ್​ನ ರಾಷ್ಟ್ರೀಯ ಮಹಾಮಾರಿ ವಂಚನೆ ರಿಕವರಿ ಸಮನ್ವಯಕಾರ ರಾಯ್ ಡಾಟ್ಸನ್ ಹೇಳಿದ್ದಾರೆ. ಈ ವಿಚಾರದಲ್ಲಿ ನ್ಯಾಯ ಇಲಾಖೆ ಶಿಕ್ಷೆ ವಿಧಿಸಿರುವ ಪ್ರಕರಣಗಳನ್ನು ಸೀಕ್ರೆಟ್ ಸರ್ವೀಸ್ ಗಣನೆಗೆ ತೆಗೆದುಕೊಂಡಿಲ್ಲ.

    ಬಿಲ್ ಗೇಟ್ಸ್ ಎಚ್ಚರಿಕೆ: ಒಮಿಕ್ರಾನ್ ತಳಿ ಜಗತ್ತಿನಲ್ಲಿ ವ್ಯಾಪಕವಾಗಿ ಹರಡುತ್ತಿರುವುದಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿರುವ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್, ತಮ್ಮ ಬಹುತೇಕ ರಜಾ ದಿನಗಳ ಯೋಜನೆಯನ್ನು ರದ್ದು ಪಡಿಸಿದ್ದಾರೆ. ಒಮಿಕ್ರಾನ್ ಅಲೆ ಏಳುತ್ತಿರುವುದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮಂಗಳವಾರ ಸರಣಿ ಟ್ವೀಟ್ ಮಾಡಿರುವ ಬಿಲಿಯಾಧಿಪತಿ ಗೇಟ್ಸ್, ಹಬ್ಬದ ಸೀಸನ್ ಸಮೀಪಿಸಿ ರುವುದರಿಂದ ಅಧಿಕ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ತನ್ನ ಆಪ್ತ ಮಿತ್ರರು ಕರೊನಾ ಸೋಂಕಿತ ರಾಗುತ್ತಿರುವುದು ಗೇಟ್ಸ್​ರ ಧೃತಿ ಕೆಡಿಸಿದೆ. ಇತಿಹಾಸದಲ್ಲೇ ಯಾವುದೇ ವೈರಸ್​ಗಿಂತ ವೇಗವಾಗಿ ಒಮಿಕ್ರಾನ್ ಹರಡುತ್ತಿದೆ. ಅದು ಶೀಘ್ರವೇ ಜಗತ್ತಿನ ಎಲ್ಲ ದೇಶಗಳಿಗೆ ವ್ಯಾಪಿಸಲಿದೆ ಎಂದಿದ್ದಾರೆ.

    ಸಂಭ್ರಮಕ್ಕೆ ಬ್ರೇಕ್: ಕರೊನಾ ಸಾಂಕ್ರಾಮಿಕತೆ ಹರಡುವುದನ್ನು ತಡೆಯಲು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಾರ್ವಜನಿಕವಾಗಿ ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆ ನಡೆಸುವುದನ್ನು ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ನಿಷೇಧಿಸಿದೆ. ಆಚರಣೆಗೆ ಜನರು ಗುಂಪುಗೂಡುವುದನ್ನು ತಡೆಯುವಂತೆ ಅದು ಜಿಲ್ಲಾ ಮ್ಯಾಜಿಸ್ಟ್ರೇಟರಿಗೆ ಆದೇಶಿಸಿದೆ. ಸೂಪರ್​ಸ್ಪ್ರೆಡರ್ ಪ್ರದೇಶಗಳನ್ನು ಗುರುತಿಸಿ ಕಟ್ಟುನಿಟ್ಟಿನ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವಂತೆಯೂ ಪ್ರಾಧಿಕಾರ ಸೂಚಿಸಿದೆ.

    ರಾತ್ರಿ ವೇಳೆ ಹೀಗಾದರೆ ಅದು ರೂಪಾಂತರಿ ವೈರಸ್​ ಒಮಿಕ್ರಾನ್​ನ ರೋಗಲಕ್ಷಣ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts