More

    ಸಾಮಾಜಿಕ ಜಾಲತಾಣದಲ್ಲಿ ಪತಿಯ ಸರ್​ನೇಮ್​ ಕೈಬಿಟ್ಟಿದ್ದಕ್ಕೆ ಪ್ರಿಯಾಂಕಾ ಚೋಪ್ರಾ ಕೊಟ್ಟ ಕಾರಣ ಹೀಗಿದೆ…

    ನವದೆಹಲಿ: ಗ್ಲೋಬಲ್​ ಐಕಾನ್​ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್​ ಜೋನಾಸ್ ಬಾಲಿವುಡ್​ನ ಅತ್ಯಂ​ತ ಪ್ರೀತಿಯ ಜೋಡಿ. ಸಾಮಾಜಿಕ ಜಾಲತಾಣದಲ್ಲಿ ಫ್ಯಾಮಿಲಿ ಫೋಟೋಗಳ ಮೂಲಕ ಸದಾ ಸಂಚಲನ ಮೂಡಿಸುವ ತಾರಾದಂಪತಿ. ಇದೇ ಕ್ಯೂಟ್​ ದಂಪತಿ ಆರಂಭದಲ್ಲಿ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದು ಎಲ್ಲರಿಗೂ ತಿಳಿದಿರುವ ಸಂಗತಿ.

    ಪ್ರಿಯಾಂಕಾ ಅವರಿಗಿಂತಲೂ ನಿಕ್​ ಜೋನಸ್​ 11 ವರ್ಷ ಕಿರಿಯರು. ಇದೇ ವಿಚಾರ ಮದುವೆ ಸಮಯದಲ್ಲಿ ಪರ-ವಿರೋಧದ ಚರ್ಚೆಗೆ ಗ್ರಾಸವಾಗಿತ್ತು. ಆದರೆ, ಯಾವುದೇ ಟೀಕೆಗೂ ಚಿಂತಿಸದ ಪಿಗ್ಗಿ, 2018ರ ಡಿಸೆಂಬರ್​ 1ರಂದು ಅಮೆರಿಕ ಪಾಪ್​ ಗಾಯಕ ನಿಕ್ ಜೋನಾಸ್​​ರನ್ನು ಮದುವೆ ಆಗುವ ಮೂಲಕ ಪ್ರೀತಿಗೆ ವಯಸ್ಸಿನ ಅಂತರ ಮುಖ್ಯವಲ್ಲ ಎಂದು ತೋರಿಸಿದ್ದರು. ಅಲ್ಲದೆ, ಇಬ್ಬರು ಅನೋನ್ಯವಾಗಿ ಜೀವನ ಸಹ ಸಾಗಿಸುವ ಮೂಲಕ ಟೀಕಾಕಾರರಿಗೆ ತಿರುಗೇಟು ನೀಡುತ್ತಾ ಬಂದಿದ್ದಾರೆ.

    ಆದರೆ, ಕೆಲವು ದಿನಗಳ ಹಿಂದಷ್ಟೇ ಪಿಗ್ಗಿ ಮಾಡಿದ ಕೆಲಸವೊಂದು ಅಭಿಮಾನಿಗಳಿಗೆ ಶಾಕ್​ ನೀಡಿದೆ. ಇಂದಿಗೂ ಆ ಪ್ರಶ್ನೆಗೆ ಉತ್ತರ ಕಂಡುಕೊಂಡಳ್ಳಲು ಅಭಿಮಾನಿಗಳು ಪ್ರಯತ್ನಿಸುತ್ತಿದ್ದಾರೆ. ಅಷ್ಟಕ್ಕೂ ಪಿಗ್ಗಿ ಮಾಡಿ ಕೆಲಸವೇನೆಂದು ನೋಡುವುದಾದರೆ, ತಮ್ಮ ಇನ್​ಸ್ಟಾಗ್ರಾಂ ಹಾಗೂ ಟ್ವಿಟರ್​ ಪೇಜ್​ನಲ್ಲಿ ತಮ್ಮ ಪತಿಯ ಜೋನಾಸ್​ ಎಂಬ ಸರ್​ನೇಮ್​ ಅನ್ನು ತೆಗೆದು ಹಾಕಿದ್ದಾರೆ. ಇದು ಹಲವು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿತ್ತು. ಪಿಗ್ಗಿ ಮತ್ತು ನಿಕ್ ವೈವಾಹಿಕ ಜೀವನದಲ್ಲಿ ಬಿರುಕು ಉಂಟಾಗಿದೆಯೇ ಎಂಬ ಅನುಮಾನ ವ್ಯಕ್ತವಾಗಿತ್ತು.

    ಇದೀಗ ಪಿಗ್ಗಿ ಎಲ್ಲರ ಅನುಮಾನಗಳನ್ನು ಬಗೆಹರಿಸಿದ್ದಾರೆ. ಇತ್ತೀಚೆಗಷ್ಟೇ ಅವರು ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದರು. ಅದರಲ್ಲಿ ಹೆಸರು ಬದಲಾವಣೆ ಕುರಿತಾದ ಪ್ರಶ್ನೆಗೆ ಉತ್ತರ ನೀಡಿದ್ದರು. ಆ ಉತ್ತರ ಹೀಗಿತ್ತು… ನನ್ನ ಟ್ವಿಟರ್​ಗೆ ಸರಿಹೊಂದುವ ಹೆಸರನ್ನು ನಾನು ಬಯಸುತ್ತಿದೆ. ಆದರೆ, ಹೆಸರು ತೆಗೆದು ಹಾಕಿದ್ದು ಕೂಡ ಒಂದು ದೊಡ್ಡ ಸುದ್ದಿಯಾಗುತ್ತದೆ ಎಂದು ಗೊತ್ತಾದಾಗ ನಿಜಕ್ಕೂ ಹಾಸ್ಯಾಸ್ಪದ ಅನಿಸಿತು. ಇದು ಕೇವಲ ಸಾಮಾಜಿಕ ಜಾಲತಾಣವಷ್ಟೇ ಗಯ್ಸ್​, ಜಸ್ಟ್​ ಚಿಲ್​ ಔಟ್​ ಎಂದು ಹೇಳುವ ಮೂಲಕ ಎಲ್ಲ ಅನುಮಾನುಗಳಿಗೆ ಮೂಟೆ ಕಟ್ಟಿದ್ದಾರೆ.

    ಪಿಗ್ಗಿ ಇದ್ದಕ್ಕಿದ್ದಂತೆ ತಮ್ಮ ಹೆಸರಿನ ಮುಂದೆ ಇದ್ದ ಜೋನಾಸ್​ ಸರ್​ ತೆಗೆದ ಕೂಡಲೇ ತಾರಾದಂಪತಿಯ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಮಾತುಗಳು ಕೇಳಿಬರತೊಡಗಿದವು. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚರ್ಚೆ ಬಹಳ ಜೋರಾಗಿಯೇ ನಡೆಯುತ್ತಿತ್ತು. ಪಿಗ್ಗಿ ಕೂಡ ಸಮಂತಾರ ಹಾದಿಯನ್ನು ಹಿಡಿದಿರಾ ಎಂದು ತಳುಕು ಹಾಕಿ ಮಾತನಾಡಲು ಆರಂಭಿಸಿದರು. ಏಕೆಂದರೆ, ಸಮಂತಾ ಕೂಡ ಆರಂಭದಲ್ಲಿ ತಮ್ಮ ಸಾಮಾಜಿಕ ಜಾಲತಾಣದಿಂದ ಅಕ್ಕಿನೇನಿ ಸರ್​ನೇಮ್​ ತೆಗೆದು ಹಾಕಿದ್ದರು. ಬಳಿಕ ಸಮಂತಾ ಮತ್ತು ನಾಗಚೈತನ್ಯ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಅದಕ್ಕೆ ಪುಷ್ಠಿ ನೀಡುವಂತಹ ಒಂದಷ್ಟು ಘಟನೆಗಳು ಸಹ ನಡೆದಿತ್ತು. ಕೊನೆಗೆ ಅಕ್ಟೋಬರ್​ 2ರಂದು ಸಮಂತಾ ಮತ್ತು ನಾಗಚೈತನ್ಯ ಅಧಿಕೃತವಾಗಿ ಡಿವೋರ್ಸ್​ ಘೋಷಣೆ ಮಾಡಿಯೇ ಬಿಟ್ಟರು. ಪಿಗ್ಗಿ ವಿಚಾರದಲ್ಲೂ ಇದೇ ನಡೆಯುತ್ತಾ ಎಂಬ ಅನುಮಾನವನ್ನು ಅಭಿಮಾನಿಗಳು ವ್ಯಕ್ತಪಡಿಸಿದ್ದರು. ಆದರೆ, ಹಾಗೆಲ್ಲ ನಡೆಯುವುದಿಲ್ಲ. ನಾನು ಮತ್ತು ನಿಕ್​ ತುಂಬಾ ಅನ್ನೋನ್ಯವಾಗಿದ್ದೇವೆ ಎಂಬ ಸಂದೇಶವನ್ನು ಪಿಗ್ಗಿ ರವಾನಿಸಿದ್ದಾರೆ. (ಏಜೆನ್ಸೀಸ್​)

    ಸಮಂತಾರ ಹಾದಿಯನ್ನೇ ಹಿಡಿದ ಪ್ರಿಯಾಂಕಾ ಚೋಪ್ರಾ! ಜಾಲತಾಣದಲ್ಲಿ ಸಿಡಿಯಿತು ಬಾಂಬ್​

    ನಿಕ್​ ಜೋನಾಸ್​ ಜತೆ ಡಿವೋರ್ಸ್! ಅನುಮಾನಗಳನ್ನು ಬಗೆಹರಿಸಿದ ನಟಿ ಪ್ರಿಯಾಂಕಾ ಚೋಪ್ರಾ

    ‘ಘೋಸ್ಟ್’ನಲ್ಲಿ ಮತ್ತೊಮ್ಮೆ ಬದಲಾವಣೆ; ಅಮಲಾ ಪಾಲ್ ಬದಲು ಸೋನಲ್ ಚೌಹಾನ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts