ನಡುರಸ್ತೆಯಲ್ಲೇ ಜುಟ್ಟು ಹಿಡಿದು ಕಿತ್ತಾಡಿಕೊಂಡ ಇಬ್ಬರು ಯುವತಿಯರು: ಕಾರಣ ತಿಳಿದವರಿಗೆ ಕಾದಿತ್ತು ಶಾಕ್​​!

Girls
Published on

ವಿಶಾಖಪಟ್ಟಣಂ: ಓರ್ವ ಯುವಕನಿಗಾಗಿ ಯುವತಿಯರಿಬ್ಬರು ನಡು ರಸ್ತೆಯಲ್ಲೇ ಪರಸ್ಪರ ಕೂದಲು ಹಿಡಿದು ಎಳೆದಾಡಿ, ಕಿತ್ತಾಡಿಕೊಂಡಿರುವ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಈ ಘಟನೆ ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದಿದೆ. ಬುಧವಾರ ಬೆಳಗ್ಗೆ ಕಾಲೇಜು ವಿದ್ಯಾರ್ಥಿಗಳು ವಿಶಾಖಪಟ್ಟಣದ ಆರ್​ಟಿಸಿ ಬಸ್​ ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ಯುವತಿಯರಿಬ್ಬರು ಇದ್ದಕ್ಕಿದ್ದಂತೆ ಒಬ್ಬರನೊಬ್ಬರು ನಿಂದಿಸಲು ಶುರು ಮಾಡಿದ್ದಾರೆ. ನೋಡ ನೋಡುತ್ತಿದ್ದಂತೆ ಇಬ್ಬರ ಕೂಗಾಟ ಜೋರಾಗಿದೆ. ಈ ವೇಳೆ ಅಲ್ಲಿದ್ದವರೆಲ್ಲ ಏನಾಗುತ್ತಿದೆ ಎಂದು ಇತ್ತ ತಿರುಗಿ ನೋಡಿದಾಗ ಇಬ್ಬರು ಯುವತಿಯರು ಪರಸ್ಪರ ಜುಟ್ಟು ಹಿಡಿದು ಕಿತ್ತಾಡಿಕೊಂಡಿದ್ದಾರೆ. ಈ ವೇಳೆ ಇಬ್ಬರ ಪಕ್ಕದಲ್ಲಿ ಓರ್ವ ಯುವಕನು ಕೂಡ ನಿಂತಿದ್ದನು.

ಯಾವ ವಿಚಾರಕ್ಕೆ ಇಬ್ಬರು ಜಗಳು ಆಡುತ್ತಿದ್ದಾರೆ ಎಂಬುದನ್ನು ತಿಳಿದ ಬಳಿಕ ಅಲ್ಲಿದ್ದವರೆಲ್ಲ ಒಂದು ಕ್ಷಣ ದಂಗಾದರು. ಒಂದೇ ಯುವಕನ್ನು ಇಬ್ಬರು ಯುವತಿಯರು ಪ್ರೀತಿಸುತ್ತಿದ್ದರು. ಅದೇ ವಿಚಾರಕ್ಕೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳ ಆಗಿದೆ. ಈ ವೇಳೆ ಯುವಕನು ಕೂಡ ಅಲ್ಲಿಯೇ ಇದ್ದ. ಪೊಲೀಸರಿಗೆ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಬಂದು ಪೊಲೀಸರು ಇಬ್ಬರು ಯುವತಿಯರು ಮತ್ತು ಯುವಕನನ್ನು ಕರೆದುಕೊಂಡು ಹೋಗಿ ಸಮಾಲೋಚನೆ ಕೊಟ್ಟು ಕಳುಹಿಸಿದ್ದಾರೆ.

ಇನ್ನು ಸ್ಥಳೀಯರು ಜಗಳ ಆಡುತ್ತಿದ್ದ ಕ್ಷಣವನ್ನು ಮೊಬೈಲ್​ನಲ್ಲಿ ಸೆರೆಹಿಡಿದು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಸಿಕ್ಕಾಪಟ್ಟೆ ವೈರಲ್​ ಆಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net