More

    ಕಪಿಲ್​​ ದೇವ್​ ಮತ್ತು 1983 ವಿಶ್ವಕಪ್​ ವಿಜೇತ ತಂಡಕ್ಕೆ 83 ಸಿನಿಮಾ ತಂಡ ಕೊಟ್ಟ ಗೌರವಧನ ಎಷ್ಟು?

    ಮುಂಬೈ: ಭಾರತೀಯ ಸಿನಿಮಾ ರಂಗದ ಬಹುನಿರೀಕ್ಷಿತ ಹಾಗೂ ಹೆಮ್ಮೆಯ ಸಿನಿಮಾ “83” ಇನ್ನೆರೆಡು ದಿನಗಳಲ್ಲಿ ವಿಶ್ವದಾದ್ಯಂತ ತೆರೆಗೆ ಅಪ್ಪಳಿಸಲಿದೆ. 1983ರಲ್ಲಿ ಮೊಟ್ಟಮೊದಲ ಬಾರಿಗೆ ಭಾರತ ವಿಶ್ವಕಪ್​ ಗೆದ್ದ ಕ್ಷಣವನ್ನು ತೆರೆಯ ಮೇಲೆ ಕಣ್ತುಂಬಿಕೊಳ್ಳಲು ಕ್ರೀಡಾಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಆಗಿನ ವಿಶ್ವಕಪ್​ ತಂಡದ ನಾಯಕರಾಗಿದ್ದ ಕಪಿಲ್​ ದೇವ್​ ಅವರ ಪಾತ್ರಕ್ಕೆ ರಣವೀರ್​ ಸಿಂಗ್​ ಬಣ್ಣ ಹಚ್ಚಿದ್ದಾರೆ.

    83 ಚಿತ್ರವು ಪ್ಯಾನ್​ ಇಂಡಿಯಾ ಸಿನಿಮಾ ಆಗಿದ್ದು, ಕನ್ನಡದಲ್ಲಿ ನಟ ಸುದೀಪ್​ ಚಿತ್ರವನ್ನು ರಾಜ್ಯದ ಜನತೆಗೆ ಅರ್ಪಿಸುತ್ತಿದ್ದಾರೆ. ಚಿತ್ರವನ್ನು ಭಜರಂಗಿ ಭಾಯಿಜಾನ್​ ಖ್ಯಾತಿಯ ಕಬೀರ್​ ಖಾನ್​ ನಿರ್ದೇಶನ ಮಾಡಿದ್ದು, ದೀಪಿಕಾ ಪಡುಕೋಣೆ, ಕಬೀರ್ ಖಾನ್, ವಿಷ್ಣುವರ್ಧನ್ ಇಂದೂರಿ, ಸಾಜಿದ್ ನಾಡಿಯಾಡ್ವಾಲಾ, ಮಧು ಮಂಟೆನಾ ವರ್ಮಾ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. 1983ರ ವಿಶ್ವಕಪ್​ ತಂಡದಲ್ಲಿದ್ದ ಆಟಗಾರರಿಗೆ 83 ಸಿನಿಮಾ ತಂಡವೂ ಗೌರವ ಧನ ನೀಡಿ ಗೌರವಿಸಿದೆ ಎಂಬ ಸುದ್ದಿ ಇದೀಗ ಕೇಳಿಬಂದಿದೆ.

    ಸಿನಿಮಾ ಮೂಲಗಳ ಪ್ರಕಾರ 1983ರ ವಿಶ್ವಕಪ್​ ತಂಡದ ಆಟಗಾರರಿಗೆ 15 ಕೋಟಿ ರೂ. ನೀಡಿದೆ ಎಂಬ ಮಾಹಿತಿ ಇದೆ. ಅದರಲ್ಲಿ ಕಪಿಲ್​ ದೇವ್​ ಅವರಿಗೆ ಹೆಚ್ಚಿನ ಪಾಲು ದೊರಕಿದೆ. ಕಪಿಲ್​ ಅವರಿಗೆ 5 ಕೋಟಿ ರೂ. ನೀಡಲಾಗಿದ್ದು, ಇನ್ನುಳಿದವರಿಗೆ ಉಳಿದ ಹಣವನ್ನು ಸಮವಾಗಿ ಹಂಚಲಾಗಿದೆ. ಸಿನಿಮಾ ನಿರ್ಮಾಣಕ್ಕೂ ಮುನ್ನ ಪ್ರತಿಯೊಬ್ಬ ಆಟಗಾರರನ ವೈಯಕ್ತಿಕ ಕತೆಗಳನ್ನು ಕೇಳಿ ಅವರ ಒಪ್ಪಿಗೆಯನ್ನು ಚಿತ್ರತಂಡ ಪಡೆದುಕೊಂಡಿದೆ. ಇದನ್ನು ಗಮನದಲ್ಲಿಟ್ಟುಕೊಂಡೇ ಚಿತ್ರತಂಡ ಪ್ರತಿಯೊಬ್ಬ ಆಟಗಾರನಿಗೆ ಗೌರವಧನವನ್ನು ನೀಡಿದೆ.

    ಇನ್ನು ಸಿನಿಮಾದ ಟ್ರೈಲರ್​ ಬಿಡುಗಡೆಯಾದಾಗಿನಿಂದ ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ. ಇತ್ತೀಚೆಗೆ ಚಿತ್ರದ ಟ್ರೈಲರ್​ ಅನ್ನು ವಿಶ್ವದ ಅತ್ಯಂತ ಎತ್ತರದ ಕಟ್ಟಡ ಬುರ್ಜ್​ ಖಲೀಫಾದ ಮೇಲೂ ಪ್ರದರ್ಶಿಸಲಾಗಿತ್ತು. ಈ ವೇಳೆ ಕಪಿಲ್​ ದೇವ್​ ಸೇರಿದಂತೆ ಎಲ್ಲರೂ ಆ ಕ್ಷಣಕ್ಕೆ ಸಾಕ್ಷಿಯಾಗಿದ್ದರು. ಟ್ರೈಲರ್​ ನೋಡಿ ದೀಪಿಕಾ ಪಡುಕೋಣೆ ತುಂಬಾ ಭಾವುಕರಾಗಿದ್ದರು.

    ಇನ್ನು ಸಿನಿಮಾದಲ್ಲಿ ರಣವೀರ್​ ಸಿಂಗ್​ ಕಪಿಲ್​ ದೇವ್​ ಪಾತ್ರಕ್ಕೆ ಬಣ್ಣ ಹಚ್ಚಿದ್ದರೆ, ಸುನೀಲ್​ ಗವಾಸ್ಕರ್​ ಪಾತ್ರಕ್ಕೆ ತಾಹಿತ್​ ರಾಜ್​ ಭಾಸಿನ್​, ಯಶ್ಪಾಲ್​ ಶರ್ಮಾ ಪಾತ್ರಕ್ಕೆ ಜತಿನ್​ ಸರ್ಣ, ಮಹೀಂದರ್​ ಅಮರ್​ನಾಥ್​ ಪಾತ್ರಕ್ಕೆ ಸಖಿಬ್​ ಸಲೀಮ್​, ರವಿಶಾಸ್ತ್ರಿ ಪಾತ್ರಕ್ಕೆ ಧೈರ್ಯ ಕರ್ವಾ, ಕೃಷ್ಣಮಾಚಾರಿ ಶ್ರೀಕಾಂತ್​ ಪಾತ್ರಕ್ಕೆ ಜೀವಾ, ಮದನ್​ ಲಾಲ್​ ಪಾತ್ರಕ್ಕೆ ಹಾರ್ಡಿ ಸಂಧು, ಬಲ್ವಿಂಧರ್​ ಸಂಧು ಪಾತ್ರಕ್ಕೆ ಅಮ್ಮಿ ವಿರ್ಕ್​, ಸೈಯದ್​ ಕಿರ್ಮಾನಿ ಪಾತ್ರಕ್ಕೆ ಸಾಹಿಲ್​ ಖಟ್ಟರ್​, ಸಂದೀಪ್​ ಪಾಟೀಲ್​ ಪಾತ್ರಕ್ಕೆ ಚಿರಾಗ್​ ಪಾಟೀಲ್​ ಹಾಗೂ ಟೀಮ್​ ಮ್ಯಾನೇಜರ್​ ಪಿ ಆರ್​ ಮ್ಯಾನ್​ ಸಿಂಗ್​ ಪಾತ್ರಕ್ಕೆ ಪಂಕಜ್​ ತ್ರಿಪಾಠಿ ಬಣ್ಣ ಹಚ್ಚಿದ್ದಾರೆ.

    83 ಸಿನಿಮಾವೂ 2021ರ ಡಿಸೆಂಬರ್​ 24ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. (ಏಜೆನ್ಸೀಸ್​)

    ಕಾವಿಧಾರಿಗಳಿಬ್ಬರ ಬೇಡಿಕೆ ಕೇಳಿ ಗೃಹ ಸಚಿವರೇ ತಬ್ಬಿಬ್ಬು! ಒಪ್ಪಲೂ ಆಗದೆ, ನಿರಾಕರಿಸಲೂ ಆಗದೆ ಪರದಾಡಿದ್ರು…

    ನಾಲ್ಕೇ ದಿನದಲ್ಲಿ 2003 ಕೋಟಿ ರೂ.! ಇಲ್ಲಿದೆ ಅಸಲಿಯತ್ತು, ಸಿಕ್ಕಾಪಟ್ಟೆ ಟ್ರೋಲ್​ ಆದ ಅಲ್ಲು ಅರ್ಜುನ್​

    ಡಿವೋರ್ಸ್​ ಪರಿಹಾರ ನೀಡಲು ದುಬೈ ಪ್ರಧಾನಿಗೆ ಕೋರ್ಟ್​ ಆದೇಶ: ಪರಿಹಾರ ಮೊತ್ತ ಕೇಳಿದ್ರೆ ಬೆರಗಾಗೋದು ಖಂಡಿತ!

    ಬೀದಿ ನಾಯಿಗಳಿಗೆ ಊಟ ಹಾಕಲು ಬಂದ ಮಹಿಳೆಗೆ ಮರ್ಮಾಂಗ ತೋರಿದ ಕಾನ್ಸ್​ಟೇಬಲ್: ಸ್ಥಳದಲ್ಲೇ ಹೈಡ್ರಾಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts