ಕ್ಯಾಮೆರಾ ಬಳಿ ಬಂದು ಕಣ್ಣೀರಿಟ್ಟ ಖಲಿ! ಕಾರಣ ಗೊತ್ತಾಗದೇ ಪಾಪರಾಜಿಗಳು ಗಲಿಬಿಲಿ, ಫ್ಯಾನ್ಸ್​ಗೆ ಶಾಕ್​

Great Khali
Published on

ಚಂಡೀಗಢ: ಡಬ್ಲ್ಯುಡಬ್ಲ್ಯುಇ ಮನರಂಜನಾ ಕ್ರೀಡೆಯ ಇತಿಹಾಸದಲ್ಲೇ ಇದುವರೆಗಿನ ಅತಿದೊಡ್ಡ ಭಾರತೀಯ ಹೆಸರು ಯಾವುದೆಂದರೆ ಅದು ದಿ ಗ್ರೇಟ್​ ಖಲಿ. ಇವರ ನಿಜವಾದ ಹೆಸರು ದಿಲಿಪ್​ ಸಿಂಗ್​ ರಾಣಾ. ಹಿಮಾಚಲ ಪ್ರದೇಶದ ಸಿರ್ಮೌರ್​ ಜಿಲ್ಲೆಯ ಧಿರೈನಾ ಗ್ರಾಮದಲ್ಲಿ ಜನಿಸಿದ ಖಲಿ ತಮ್ಮ ದೈತ್ಯ ದೇಹದಿಂದಲೇ ಡಬ್ಲ್ಯುಡಬ್ಲ್ಯುಇ ಮನರಂಜನಾ ಅಖಾಡದಲ್ಲಿ ಭಾರತದ ಮಿಂಚು ಹರಿಸಿ ಬಂದಿದ್ದಾರೆ.

ಬಾಲಿವುಡ್​ ಮತ್ತು ಹಾಲಿವುಡ್​ ಸಿನಿಮಾಗಳಲ್ಲಿಯು ನಟಿಸಿರುವ ಖಲಿ, ಪಾಪರಾಜಿಗಳ ಫೇವರಿಟ್​ ಸಹ ಹೌದು. ಮಾಜಿ ಡಬ್ಲ್ಯುಡಬ್ಲ್ಯುಇ ಸ್ಟಾರ್​ ಆಗಿರುವ ಖಲಿ ಶುಕ್ರವಾರ ತಮ್ಮ ಅಭಿಮಾನಿಗಳಿಗೆ ಒಂದು ಸರ್ಪ್ರೈಸ್​ ನೀಡಿದರು. ಆ ಸರ್ಪ್ರೈಸ್​ಗೆ ಉತ್ತರ ಕಂಡುಕೊಳ್ಳುವ ಪ್ರಯತ್ನವನ್ನು ಅವರ ಅಭಿಮಾನಿಗಳು ಇಂದಿಗೂ ಮಾಡುತ್ತಿದ್ದಾರೆ. ಹಾಗಾದರೆ ಆ ಸರ್ಪ್ರೈಸ್​ ಏನು ಅಂತಾ ನೋಡುವ ಆಸಕ್ತಿ ನಿಮ್ಮಲ್ಲಿದ್ದರೆ, ಮುಂದೆ ಓದಿ...

ಫೋಟೋಗೆ ಪೋಸ್​ ನೀಡುವಂತೆ ಪಾಪರಾಜಿಗಳು ಖಲಿ ಅವರನ್ನು ಶುಕ್ರವಾರ ಕೇಳಿದರು. ನಗುತ್ತಲೇ ಪಾಪರಾಜಿಗಳ ಮುಂದೆ ಬಂದ ಖಲಿ, ಕ್ಯಾಮೆರಾಗೆ ಪೋಸ್​ ನೀಡಿದರು. ಆದರೆ, ಇದ್ದಕ್ಕಿದ್ದಂತೆ ಅದೇನಾಯಿತೋ ಕಾಣೆ ನಗುತ್ತಿದ್ದ ಖಲಿ ಭಾವುಕರಾಗಿ ಕಣ್ಣೀರು ಹಾಕಿದರು ಮತ್ತು ಅದನ್ನು ಒರೆಸಿಕೊಳ್ಳುತ್ತಾ ಅಲ್ಲಿಂದ ಜಾಗ ಖಾಲಿ ಮಾಡಿದರು.

ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, 1 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಕಾಮೆಂಟ್​ಗಳ ಮಹಾಪೂರವೇ ಹರಿದುಬಂದಿದ್ದು, ಖಲಿ ಕಣ್ಣೀರು ಹಾಕಲು ಹಿಂದಿರುವ ಕಾರಣವನ್ನು ಹುಡುಕುವ ಪ್ರಯತ್ನವನ್ನು ಅಭಿಮಾನಿಗಳು ಮಾಡುತ್ತಿದ್ದಾರೆ. ಖಲಿ ಅವರಿಗೆ ಏನಾಯಿತು? ಅವರು ಕಣ್ಣೀರು ಹಾಕಿದ್ದೇಕೆ? ಅವರನ್ನು ಭಾವುಕರನ್ನಾಗಿಸಿದ ಸನ್ನಿವೇಶ ಯಾವುದು? ಎಂಬಿತ್ಯಾದಿ ಪ್ರಶ್ನೆಗಳನ್ನು ನೆಟ್ಟಿಗರು ಕೇಳುತ್ತಿದ್ದಾರೆ. ಆದರೆ, ಖಲಿ ಯಾಕೆ ಕಣ್ಣೀರು ಹಾಕಿದರು ಎಂಬುದು ಅವರಿಗೆ ಬಿಟ್ಟು, ಬೇರೆ ಯಾರಿಗೂ ಗೊತ್ತಿಲ್ಲ. ಖಲಿ ಕಣ್ಣೀರು ಹಾಕಿದ್ದನ್ನು ನೋಡಿ ಪಾಪರಾಜಿಗಳೇ ಒಂದು ಕ್ಷಣ ಗಲಿಬಿಲಿಗೊಂಡಿದ್ದಂತೂ ಸತ್ಯ.

ಖಲಿ ಅವರು ಕೆಲವು ವರ್ಷಗಳ ಹಿಂದೆ WWE ತೊರೆದು ಭಾರತಕ್ಕೆ ಮರಳಿದರು. ಅವರು ಈಗ ಜಲಂಧರ್‌ನಲ್ಲಿ ಕಾಂಟಿನೆಂಟಲ್ ಕುಸ್ತಿ ಅಕಾಡೆಮಿ ಎಂದು ಕರೆಯಲ್ಪಡುವ ತಮ್ಮದೇ ಆದ ಅಕಾಡೆಮಿಯನ್ನು ನಡೆಸುತ್ತಾರೆ, ಅಲ್ಲಿ ಅವರು ಹೊಸ ಕುಸ್ತಿಪಟುಗಳನ್ನು ಸಿದ್ಧಪಡಿಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net