More

    ಜೆಡಿಯು ಕೈಕೊಟ್ಟರೂ ಬಿಜೆಪಿಗೆ ಬಹುಮತ: ಸಮೀಕ್ಷೆಯಿಂದ ಬಹಿರಂಗ

    ನವದೆಹಲಿ: ಕರೊನಾ ಮಹಾಮಾರಿ, ನಿರುದ್ಯೋಗ ಹಾಗೂ ಆರ್ಥಿಕ ಬಿಕ್ಕಟ್ಟುಗಳ ಮಧ್ಯೆಯೂ ಸದ್ಯ ಲೋಕಸಭೆ ಚುನಾವಣೆ ನಡೆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಮೈತ್ರಿಕೂಟ 286 ಸೀಟುಗಳನ್ನು ಗೆದ್ದು ಅಧಿಕಾರಕ್ಕೇರಲಿದೆ ಎಂದು ಸಿ&ವೋಟರ್​ ಸಮೀೆ ಹೇಳಿದೆ. ಬಿಹಾರದ ಜೆಡಿಯು ಪ ಎನ್​ಡಿಎ ಮೈತ್ರಿಕೂಟದಿಂದ ನಿರ್ಗಮಿಸಿದ ಪರಿಣಾಮ ಈಗಿರುವ 307 ಲೋಕಸಭೆ ಸೀಟುಗಳಲ್ಲಿ 21ರಷ್ಟು ಸೀಟುಗಳು ಕಡಿಮೆಯಾಗಲಿವೆ ಎಂದು ಸಮೀಕ್ಷೆ ತಿಳಿಸಿದೆ.

    ಫೆಬ್ರವರಿ ಮತ್ತು ಆಗಸ್ಟ್​ ತಿಂಗಳ ಮಧ್ಯೆ ನಡೆಸಲಾದ ಈ ಸಮೀೆಯಲ್ಲಿ ಮತ್ತೆ ನರೇಂದ್ರ ಮೋದಿ ನಾಯಕತ್ವವನ್ನೇ ಜನರು ನೆಚ್ಚಿಕೊಂಡಿದ್ದಾರೆ ಎಂದು ತಿಳಿಸಲಾಗಿದ್ದು, ಸಮೀೆಯಲ್ಲಿ ಪಾಲ್ಗೊಂಡ 122016 ಮಂದಿಯಲ್ಲಿ ಶೇ.53ರಷ್ಟು ಜನರು ಈಗಲೂ ಪ್ರಧಾನಿ ಹುದ್ದೆಗೆ ಮೋದಿಯೇ ಸೂಕ್ತ ಎಂದಿದ್ದಾರೆ. ಶೇ.9ರಷ್ಟು ಮಂದಿ ರಾಹುಲ್​ ಗಾಂಧಿ ಪರ ಒಲವು ವ್ಯಕ್ತಪಡಿಸಿದ್ದರೆ, ಶೇ.7ರಷ್ಟು ಮಂದಿ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್​ ಪ್ರಧಾನಿಯಾಗಬೇಕು ಎಂದ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

    ನಿತೀಶ್​ ಪ್ರಧಾನಿ, ನಿಲ್ಲದ ಚರ್ಚೆ
    ನಾನು ಪ್ರಧಾನಿ ಹುದ್ದೆಗೆ ಆಕಾಂಯಲ್ಲ ಎಂದು 2 ದಿನಗಳ ಹಿಂದೆ ಬಿಹಾರ ಸಿಎಂ ನಿತೀಶ್​ ಕುಮಾರ್​ ಹೇಳಿದ್ದರೂ, ಪ್ರಧಾನಿಯಾಗುವ ಎಲ್ಲಾ ಗುಣಗಳು ನಿತೀಶ್​ರಲ್ಲಿದೆ ಎಂದು ಜೆಡಿಯು ಅಧ್ಯ ರಾಜೀವ್​ ರಂಜನ್​ ಸಿಂಗ್​ ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ನಿತೀಶ್​ ಪ್ರಧಾನಿ ಅಭ್ಯರ್ಥಿಯಾಗುತ್ತಾರಾ ಎಂಬ ಚರ್ಚೆಗೆ ಜೆಡಿಯು ದನಿಗೂಡಿಸಿದೆ. ರಾಜ್ಯದಲ್ಲಿ ಹೊಸ ಸರ್ಕಾರ ಕಾರ್ಯಾರಂಭ ಮಾಡಿದ ತಣ ನಾವು ದೆಹಲಿಗೆ ಹೋಗಿ ಎಲ್ಲಾ ವಿಪಗಳೊಂದಿಗೆ ಸಭೆ ನಡೆಸಲಿದ್ದೇವೆ. ಈ ಮೂಲಕ ಬಿಜೆಪಿ ವಿರುದ್ಧ ದೇಶಾದ್ಯಂತ ಹೋರಾಟ ನಡೆಸಲು ತಯಾರಿ ನಡೆಸಲಿದ್ದೇವೆ ಎಂದು ರಾಜೀವ್​ ರಂಜನ್​ ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts