More

  11,656 ಸೋನಾಲಿಕಾ ಟ್ರಾಕ್ಟರ್ ಮಾರಾಟ

  ಹೊಸದಿಲ್ಲಿ:
  2024 ರಲ್ಲಿ ಅಭೂತಪೂರ್ವ ಯಶಸ್ಸಿನ ನಂತರ ಅತ್ಯಧಿಕ ವಾರ್ಷಿಕ ಮಾರುಕಟ್ಟೆ ಪಾಲನ್ನು ಭಾರತದ ನಂ. 1 ಟ್ರಾಕ್ಟರ್ ರಫ್ತು ಬ್ರ್ಯಾಂಡ್ ಸೋನಾಲಿಕಾ ಟ್ರಾಕ್ಟರ್ಸ್ ಪಡೆದಿದೆ. ಅಲ್ಲದೆ, ಭಾರತದಲ್ಲಿ 3ನೇ ಅತಿ ದೊಡ್ಡ ಟ್ರಾಕ್ಟರ್ ಬ್ರಾಂಡ್ ಸ್ಥಾನವನ್ನು ಗಳಿಸಿದೆ.
  ಕಂಪನಿಯು ವರ್ಷದಿಂದ ವರ್ಷಕ್ಕೆ ಟ್ರ್ಯಾಕ್ಟರ್ ಮಾರಾಟವನ್ನು ಹೆಚ್ಚಿಸಿಕೊಂಡಿದ್ದು, ಈಗಾಗಲೇ 11,656 ಟ್ರ್ಯಾಕ್ಟರ್ ಮಾರಾಟವನ್ನು ಮಾಡಿದೆ. ನಿರಂತರ ಶ್ರದ್ಧೆಯ ಪ್ರಯತ್ನಗಳು ಮತ್ತು ಪರಿಶ್ರಮದಿಂದ ಮಾರುಕಟ್ಟೆ ಪಾಲು ಪಡೆಯುವುದನ್ನು ಮುಂದುವರೆಸಿದೆ.
  ಸೋನಾಲಿಕಾ ಹೊರತಂದಿರುವ ಪ್ರತಿಯೊಂದು ನವೀನ ಟ್ರಾಕ್ಟರ್ ,ಹೋಶಿಯಾರ್‌ಪುರದಲ್ಲಿರುವ ಟ್ರಾಕ್ಟರ್ ಸ್ಥಾವರದ ವಿತರಣಾ ವಿಷಯದಲ್ಲಿ ಶ್ರೇಷ್ಠತೆಯನ್ನು ಪ್ರದರ್ಶಿಸುತ್ತದೆ. ಉತ್ಪಾದಕತೆ ಮತ್ತು ರೈತರಿಗೆ ಲಾಭದಾಯಕತೆಯನ್ನು ತಂದುಕೊಟ್ಟಿರುವ ಸೋನಾಲಿಕಾ, ಪರಿಪೂರ್ಣತೆಯನ್ನು ನೀಡುವಲ್ಲಿಯೂ ಯಶಸ್ವಿಯಾಗಿದೆ. ಹೆವಿ ಟ್ರಾಕ್ಟರ್ ಶ್ರೇಣಿಯಲ್ಲಿ ಗುಣಮಟ್ಟ ಮತ್ತು ಕಾರ್ಯಕ್ಷಮತೆಯ ಮಿಶ್ರಣವು ಸಕ್ರಿಯಗೊಂಡಿದೆ.
  ವಿಶ್ವದ ಅತಿದೊಡ್ಡ ಟ್ರಾಕ್ಟರ್ ಮಾರುಕಟ್ಟೆ ಕಂಪನಿಯಾಗಿದ್ದು, ವಾರಂಟಿ ಮತ್ತು ಅದರ ವೆಬ್‌ಸೈಟ್‌ನಲ್ಲಿ ಟ್ರ್ಯಾಕ್ಟರ್ ಬೆಲೆಗಳನ್ನು ಪ್ರದರ್ಶಿಸಲಾಗಿದೆ. ವ್ಯವಸಾಯದಲ್ಲಿ ಸೋನಾಲಿಕಾ ಒಬ್ಬ ವಿಶ್ವಾಸಾರ್ಹ ಪಾಲುದಾರಳಾಗಿರುವುದು ವಿಶೇಷ.
  ಇಂಟರ್‌ನ್ಯಾಷನಲ್ ಟ್ರಾಕ್ಟರ್ಸ್ ಲಿಮಿಟೆಡ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕರಾದ ರಾಮನ್ ಮಿತ್ತಲ್ ಮಾತನಾಡಿ, ಹೊಸ ಮಾನದಂಡದ ಕಾರ್ಯಕ್ಷಮತೆಯ ಬಗ್ಗೆ ಹರ್ಷ ವ್ಯಕ್ತಪಡಿಸಿದರು.
  11,656 ಟ್ರ್ಯಾಕ್ಟರ್ ಅತ್ಯಾಕರ್ಷಕ ಪ್ರದರ್ಶನದೊಂದಿಗೆ ನಮ್ಮ ಸಾಮರ್ಥ್ಯವನ್ನು ಲಾಭದೊಂದಿಗೆ ನಿರೂಪಿಸಿದ್ದೇವೆ. ಡ್ಯೂಟಿ ಟ್ರಾಕ್ಟರ್ ಸರಣಿಗಳು ರೈತರನ್ನು ಹೊಸ ಪ್ರಪಂಚದತ್ತ ನಿರಂತರವಾಗಿ ಮುನ್ನಡೆಸಿದೆ. ಅದಕ್ಕಾಗಿಯೇ ನಾವು ಇಂದು ಹೆಮ್ಮೆಯಿಂದ 15 ಲಕ್ಷ ರೈತರ ಕುಟುಂಬದ ಭಾಗವಾಗಿದ್ದೇವೆ ಎಂದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts