14ರ ಬಾಲಕನ ಜತೆ 30ರ ಮಹಿಳೆ ಎಸ್ಕೇಪ್: ಪ್ರಕರಣ ಭೇದಿಸಿದ ಪೊಲೀಸರಿಂದ ಆಘಾತಕಾರಿ ಸಂಗತಿ ಬಯಲು

Lady Arrest
Published on

ವಿಜಯವಾಡ: ಎಂಟನೇ ತರಗತಿ ವಿದ್ಯಾರ್ಥಿ ಜೊತೆ ಓಡಿ ಹೋಗಿದ್ದ 30 ವರ್ಷದ ಮಹಿಳೆಯನ್ನು ಬಂಧಿಸಿರುವ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ. ಪೊಲೀಸ್​ ವಿಚಾರಣೆ ವೇಳೆ ಆರೋಪಿ ಮಹಿಳೆಯ ಕುರಿತಾದ ಆಘಾತಕಾರಿ ಸಂಗತಿಗಳು ಬಯಲಾಗಿವೆ.

ಬಂಧಿತ ಮಹಿಳೆ ಆಂಧ್ರದ ಕೃಷ್ಣ ಜಿಲ್ಲೆಯ ಗುಡಿವಾಡ ಗ್ರಾಮದ ನಿವಾಸಿ. ವಿದ್ಯಾರ್ಥಿಯ ಪಾಲಕರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸಿದಾಗ, ಹೈದರಾಬಾದ್​ನ ಬಾಲನಗರದ ಬಾಡಿಗೆ ಮನೆಯೊಂದರಲ್ಲಿ 14 ವರ್ಷದ ಬಾಲಕನ ಜೊತೆ ಮಹಿಳೆ ವಾಸವಿರುವುದು ತಿಳಿದುಬಂದಿದೆ. ಬಳಿಕ ಮಹಿಳೆಯನ್ನು ಬಂಧಿಸಿದ್ದು, ಬಾಲಕನನ್ನು ರಕ್ಷಿಸಲಾಗಿದೆ.

ಪೊಲೀಸ್​ ಮೂಲಗಳ ಪ್ರಕಾರ, ಮಹಿಳೆ, ತನ್ನ ನೆರೆಮನೆಯ ಬಾಲಕನ ಜೊತೆ ವಿವಾಹೇತರ ಸಂಬಂಧವನ್ನು ಹೊಂದಿದ್ದಳು. ತನ್ನ ಮನೆಯಲ್ಲಿ ಬಾಲಕನ ಮೇಲೆ ಅನೇಕ ಬಾರಿ ಮಹಿಳೆ ಲೈಂಗಿಕ ದೌರ್ಜನ್ಯ ಎಸಗಿದ್ದಾಳೆ. ಆತನೊಂದಿಗೆ ವಾಸಿಸುವ ಮತ್ತು ನಿರಂತರ ದೈಹಿಕ ಸಂಬಂಧ ಹೊಂದುವ ಉದ್ದೇಶದೊಂದಿಗೆ ಆತನನ್ನು ತನ್ನ ಜೊತೆ ಕರೆದುಕೊಂಡು ಹೈದರಾಬಾದ್​ಗೆ ತೆರಳಿ ನೆಲೆಸಿದ್ದಳು.

ಮಹಿಳೆಗೆ ಈಗಾಗಲೇ ಮದುವೆ ಆಗಿದ್ದು, ಇಬ್ಬರು ಮಕ್ಕಳಿದ್ದಾರೆ. ನಾಲ್ಕು ಮಕ್ಕಳ ತಾಯಿಯಾಗಿರುವ ಮಹಿಳೆಯ ಗಂಡ ಅನಾರೋಗ್ಯದಿಂದ ಬಳಲುತ್ತಿದ್ದು, ಒಟ್ಟಿಗೆ ವಾಸವಾಗಿಲ್ಲವಂತೆ. ಹೀಗಾಗಿ ಅಕ್ಕಪಕ್ಕದ ಮಕ್ಕಳ ಜೊತೆ ಈಕೆ ತುಂಬಾ ಸಲುಗೆ ಬೆಳೆಸಿಕೊಳ್ಳುತ್ತಿದ್ದಳು. ಅದೇ ರೀತಿ ಎದುರು ಮನೆಯಲ್ಲಿ ವಾಸಗಿದ್ದ ಬಾಲಕನನ್ನು ಈಕೆ ಆಕರ್ಷಿಸಿದ್ದಳು. ಬಾಲಕ ಕೂಡ ಮರುಳಾಗಿದ್ದ. ಇಷ್ಟೇ ಅಲ್ಲದೆ, ಪೋರ್ನ್ ವಿಡಿಯೋಗಳನ್ನು ತೋರಿಸಿ ಆಮಿಷವೊಡ್ಡಿ, ಬಾಲಕನೊಂದಿಗೆ ಕಳೆದ ಒಂದು ತಿಂಗಳಿನಿಂದ ದೈಹಿಕ ಸಂಪರ್ಕ ಹೊಂದಿದ್ದರು ಎಂದು ಹೇಳಲಾಗಿದೆ.

ಸ್ನೇಹಿತನನ್ನು ಭೇಟಿ ಮಾಡುವುದಾಗಿ ಹೇಳಿ 14 ವರ್ಷದ ಬಾಲಕ ಮನೆಯಿಂದ ಹೊರ ಹೋಗಿದ್ದ. ಆದರೆ, ಮತ್ತೆ ಬರದಿರುವುದನ್ನು ನೋಡಿ ಪಾಲಕರು ಗಾಬರಿಗೊಂಡಿದ್ದರು. ಇದಾದ ಕೆಲವೇ ಸಮಯದಲ್ಲಿ ತಮ್ಮ ಪಕ್ಕದಲ್ಲೇ ಇದ್ದ ಮಹಿಳೆಯೊಬ್ಬಳು ನಾಪತ್ತೆಯಾಗಿರುವುದು ಪಾಲಕರಿಗೆ ತಿಳಿಯಿತು. ಅನುಮಾನಗೊಂಡ ಪಾಲಕರು ಪೊಲೀಸ್​ ದೂರು ದಾಖಲಿಸಿದರು. ತನಿಖೆ ನಡೆಸಿದ ಪೊಲೀಸರಿಗೆ ಮಹಿಳೆ ಮತ್ತು ಬಾಲಕ ಹೈದರಾಬಾದ್​ನಲ್ಲಿ ಪತ್ತೆಯಾಗಿದ್ದಾರೆ. ಮಹಿಳೆಯನ್ನು ಬಂಧಿಸಿ, ಬಾಲಕನನ್ನು ಮರಳಿ ಮನೆಗೆ ಕರೆತಂದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net