ಶಾಲೆ ಪ್ರವೇಶಿಸ್ತಿದ್ದಂತೆಯೇ ವಿದ್ಯಾರ್ಥಿನಿಯರ ಮೈಮೇಲೆ ಬರ್ತಿದೆ 'ದೆವ್ವ'! ಕಿರುಚುತ್ತಾ, ಕೂದಲು ಕೆದರಿಕೊಳ್ತಿರೋ ಮಕ್ಕಳು

students
Published on

ರೇಖೌಲಿ (ಉತ್ತರಾಖಂಡ): ಕೆಲವೊಮ್ಮೆ ಯಾರೂ ಅರಿಯದ ನಿಗೂಢ ಘಟನೆಗಳು ನಡೆಯುತ್ತಲೇ ಇರುತ್ತವೆ. ಅಂಥದ್ದೇ ಒಂದು ನಿಗೂಢ ಘಟನೆ ಇದೀಗ ಉತ್ತರಾಖಂಡದ ಬಾಗೇಶ್ವರ ಜಿಲ್ಲೆಯ ರೇಖೌಲಿಯಲ್ಲಿ ನಡೆದಿದೆ. ಇಲ್ಲಿಯ ಜೂನಿಯರ್ ಹೈಸ್ಕೂಲ್​ನಲ್ಲಿ ವಿದ್ಯಾರ್ಥಿನಿಯರು ಶಾಲೆಯನ್ನು ಪ್ರವೇಶಿಸುತ್ತಿದ್ದಂತೆಯೇ ಮೈಮೇಲೆ ದೆವ್ವ ಬರುತ್ತಿದೆ ಎಂದು ಹೇಳಲಾಗುತ್ತಿದೆ!

ಎರಡು ದಿನಗಳಿಂದ ಈ ಘಟನೆ ನಡೆಯುತ್ತಿದೆ. ವಿದ್ಯಾರ್ಥಿನಿಯರು ಶಾಲೆಗೆ ಬರುವ ಮುನ್ನ ಚೆನ್ನಾಗಿಯೇ ಇರುತ್ತಾರೆ. ಶಾಲೆಯನ್ನು ಪ್ರವೇಶಿಸುತ್ತಿದ್ದಂತೆಯೇ ಅವರು ವಿಚಿತ್ರವಾಗಿ ವರ್ತಿಸಿ ಪ್ರಜ್ಞೆ ತಪ್ಪಿ ಬೀಳುತ್ತಿದ್ದಾರೆ. ಶಾಲೆ ಪ್ರವೇಶಿಸುತ್ತಿದ್ದಂತೆ ಕಿರುಚಲು ಶುರು ಮಾಡುವುದು, ತಮ್ಮ ಕೂದಲು ಕೆದರಿ ನಡುಗುವುದು, ಇದಲ್ಲದೇ ಏಕಾಏಕಿ ಡ್ಯಾನ್ಸ್ ಮಾಡಲು ಶುರು ಮಾಡುತ್ತಿದ್ದಾರೆ. ಸುಮಾರು 15 ವಿದ್ಯಾರ್ಥಿನಿಯರಿಗೆ ಇದೇ ರೀತಿ ಆಗಿದ್ದು, ಎಲ್ಲೆಡೆ ಆತಂಕದ ವಾತಾವರಣ ಸೃಷ್ಟಿಸಿಯಾಗಿದೆ.

ಶಾಲಾ ಸಿಬ್ಬಂದಿ ಹಾಗೂ ಮಕ್ಕಳ ಪಾಲಕರಲ್ಲಿ ಭೀತಿ ಆವರಿಸಿದ್ದು, ಮಕ್ಕಳನ್ನು ಶಾಲೆಗೆ ಕಳುಹಿಸುವುದನ್ನು ನಿಲ್ಲಿಸುತ್ತಿದ್ದಾರೆ. ಇದಾಗಲೇ ಶಾಲಾ ಆಡಳಿತ ಮಂಡಳಿಯು ಈ ವಿಚಿತ್ರ ಘಟನೆಯ ಕುರಿತು ಶಿಕ್ಷಣ ಇಲಾಖೆಗೆ ಮಾಹಿತಿ ನೀಡಿದೆ.

ಶಿಕ್ಷಣ ಇಲಾಖೆ ಉನ್ನತಾಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಇದು ದೆವ್ವ ಪಿಶಾಚಿ ಕಾಟವೆಂದು ಅಂದುಕೊಂಡಿರುವ ಗ್ರಾಮಸ್ಥರು ಬಾಬಾನೋರ್ವನ ಕರೆತಂದು, ಶಾಂತಿ ಮಂತ್ರ ಪಠಿಸಿದ್ದಾರೆ. ಅಚ್ಚರಿಯ ಸಂಗತಿ ಎಂದರೆ ಶಾಂತಿ ಮಂತ್ರದ ಪಠಣದ ನಂತರ ವಿಚಿತ್ರವಾಗಿ ವರ್ತಿಸುತ್ತಿರುವ ವಿದ್ಯಾರ್ಥಿನಿಯರು ತಣ್ಣಗಾಗಿದ್ದಾರೆ. ಅವರ ಆರೋಗ್ಯ ತಪಾಸಣೆಗಾಗಿ ಆರೋಗ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.

ಆದರೆ ಇದೇ ರೀತಿ ಉಳಿದ ವಿದ್ಯಾರ್ಥಿನಿಯರಿಗೂ ಆದರೆ ಏನು ಎಂಬ ಆತಂಕ ಪಾಲಕರದ್ದು. ಘಟನೆಗೆ ಸಂಬಂಧಿಸಿದಂತೆ ಮುಖ್ಯ ಶಿಕ್ಷಣಾಧಿಕಾರಿ ಗಜೇಂದ್ರ ಅವರಿಗೆ ಮಾಹಿತಿ ನೀಡಲಾಗಿದ್ದು, ಗ್ರಾಮಸ್ಥರಿಂದ ಮತ್ತಷ್ಟು ಮಾಹಿತಿ ಪಡೆದುಕೊಳ್ಳಲಾಗುವುದು ಎಂದು ಸಿಇಒ ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಡಿಯೋ ಇಲ್ಲಿದೆ ನೋಡಿ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net