ಮಗಳ ಮುಂದಿನ ಭವಿಷ್ಯದ ಬಗ್ಗೆ ಹೆದರಿ ತಾಯಿ ಆತ್ಮಹತ್ಯೆ: ಅಳಿಯ ಮಾಡಿದ ತಪ್ಪಿಗೆ ಸಾವನ್ನಪ್ಪಿದ ಅತ್ತೆ!

Son in law
Published on

ಖಾನಾಪುರ್​: ಮಗಳ ಭವಿಷ್ಯದ ಬಗ್ಗೆ ಹೆದರಿ ತಾಯಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದ ಖಾನಾಪುರ್​ನಲ್ಲಿ ನಡೆದಿದೆ. ತನ್ನ ಮಗಳನ್ನು ಅಂತರ್ಜಾತಿ ವಿವಾಹವಾದ ಅಳಿಯ ಮಗಳನ್ನು ತನ್ನ ಜತೆಗೆ ಕರೆದೊಯ್ಯದಿದ್ದರಿಂದ ಮಗಳ ಮುಂದಿನ ಭವಿಷ್ಯದ ಬಗ್ಗೆ ಚಿಂತಿಸಿ, ಮನನೊಂದು ಸಾವಿನ ಹಾದಿ ಹಿಡಿದಿದ್ದಾರೆ.

ಈ ಘಟನೆ ಖಾನಪುರ್​ ವಲಯದ ಲಿಂಗಯ್ಯಪಲ್ಲಿ ಗ್ರಾಮದಲ್ಲಿ ನಡೆದಿದೆ. ಈ ಬಗ್ಗೆ ಮಾಹಿತಿ ನೀಡಿರುವ ಸಬ್​ ಇನ್ಸ್​ಪೆಕ್ಟರ್​ ತಾನಾಜಿ ನಾಯಕ್​, ಸತ್ತಯ್ಯ ಮತ್ತು ವರಲಕ್ಷಿ ದಂಪತಿಗೆ ಓರ್ವ ಮಗ ಮತ್ತು ಮಗಳಿದ್ದಾಳೆ. ಆರು ತಿಂಗಳ ಹಿಂದೆ ಮಗಳು ನಾಗಲಕ್ಷ್ಮಿ ಪ್ರೇಮಾ ರೊಟಿಗುಡ ಮೂಲದ ವೆಂಕಟೇಶ್​ ಎಂಬಾತನನ್ನು ಪ್ರೀತಿಸಿ ಮದುವೆ ಆಗಿದ್ದಾಳೆ ಎಂದು ಹೇಳಿದರು.

ಕಳೆದ ಕೆಲವು ದಿನಗಳ ಹಿಂದೆ ಮಗಳನ್ನು ಮನೆಗೆ ಕರೆತಂದು ಬಿಟ್ಟು ಹೋದ ವರಲಕ್ಷ್ಮಿ ಅಳಿಯ ಮತ್ತೆ ಕರೆದುಕೊಂಡು ಹೋಗಲು ಬರಲೇ ಇಲ್ಲ. ಇದರಿಂದ ತೀವ್ರ ವಿಚಲಿತಗೊಂಡಿದ್ದ ವರಲಕ್ಷ್ಮಿ, ಮಗಳ ಮುಂದಿನ ಭವಿಷ್ಯ ಏನು ಎಂಬ ನೋವಿನಿಂದಲೇ ಭಾನುವಾರ ರಾತ್ರಿ ಮನೆಯಲ್ಲಿ ಯಾರು ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಎಸ್​ಐ ಮಾಹಿತಿ ನೀಡಿದರು.

ಘಟನೆ ಬೆನ್ನಲ್ಲೇ ವರಲಕ್ಷ್ಮಿ ಪತಿ ಸತ್ತಯ್ಯ ನೀಡಿರುವ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಎಸ್​ಐ ಹೇಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net