ಕಾಂಗ್ರೆಸ್​ ಹಿರಿಯ ನಾಯಕ ಪಿ. ಚಿದಂಬರಂಗೆ ಸೇರಿದ ಏಳು ಸ್ಥಳಗಳ ಮೇಲೆ ಸಿಬಿಐ ದಾಳಿ

P Chidambaram
Published on

ನವದೆಹಲಿ: ಹಿರಿಯ ಕಾಂಗ್ರೆಸ್​ ನಾಯಕ ಪಿ. ಚಿದಂಬರಂ ಅವರಿಗೆ ಸಂಬಂಧಿಸಿದ ಬಹು ವಸತಿ ಮತ್ತು ಕಚೇರಿಗಳ ಮೇಲೆ ಕೇಂದ್ರೀಯ ತನಿಖಾ ದಳ (ಸಿಬಿಐ) ಮಂಗಳವಾರ ದಾಳಿ ನಡೆಸಿದೆ. ದೆಹಲಿ, ಮುಂಬೈ ಹಾಗೂ ತಮಿಳುನಾಡಿನ ಚೆನ್ನೈ ಮತ್ತು ಶಿವಗಂಗೈನಲ್ಲಿ ಸಿಬಿಐ ದಾಳಿ ಮಾಡಿದೆ.

ಪಿ. ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಅವರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಈ ಮೇಲಿನ ನಗರಗಳ ಏಳು ಕಡೆಗಳಲ್ಲಿ ಸಿಬಿಐ ಶೋಧ ಕಾರ್ಯಾಚರಣೆಯನ್ನು ನಡೆಸುತ್ತಿದೆ. 2010 ಮತ್ತು 14ರ ನಡುವಿನ ವಿದೇಶಿ ವ್ಯವಹಾರಗಳ ಸಂಬಂಧ ಕಾರ್ತಿ ಚಿದಂಬರಂ ವಿರುದ್ಧ ಸಿಬಿಐ ಹೊಸ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಇದಕ್ಕೆ ಸಂಬಂಧಿಸಿದಂತೆ ದಾಳಿ ಮಾಡಿದೆ.

ಇನ್ನು ಕಾರ್ತಿ ವಿರುದ್ಧ ಇರುವುದು ಇದೊಂದು ಪ್ರಕರಣವಲ್ಲ. ಹಲವು ಪ್ರಕರಣಗಳಲ್ಲಿ ಇವರ ವಿರುದ್ಧ ತನಿಖೆ ನಡೆಯುತ್ತಿದೆ. ಕಾರ್ತಿ ತಂದೆ ಚಿದಂಬರಂ ಅವರು ಹಣಕಾಸು ಸಚಿವರಾಗಿದ್ದ ಸಮಯದಲ್ಲಿ 305 ಕೋಟಿ ರೂ. ಮೊತ್ತದ ವಿದೇಶಿ ಹಣವನ್ನು ಸ್ವೀಕರಿಸುವುದಕ್ಕಾಗಿ ಐಎನ್‌ಎಕ್ಸ್ ಮೀಡಿಯಾಗೆ ವಿದೇಶಿ ಹೂಡಿಕೆ ಉತ್ತೇಜನಾ ಮಂಡಳಿ (ಎಫ್‌ಐಪಿಬಿ) ಅನುಮತಿ ನೀಡಿದ ಪ್ರಕರಣವು ಸೇರಿದೆ. ಇದೇ ಪ್ರಕರಣದಲ್ಲಿ ಹಿಂದೊಮ್ಮೆ ಕಾರ್ತಿ ಬಂಧನವಾಗಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net