More

    ತಾಯಿಯಿಂದ ಬೇರ್ಪಟ್ಟ ಹುಲಿ ಮರಿಗಳನ್ನು ಸಲಹುತ್ತಿರುವ ಶ್ವಾನ: ವಿಡಿಯೋ ನೋಡಿದ್ರೆ ಫಿದಾ ಆಗೋದು ಗ್ಯಾರೆಂಟಿ!

    ಬೀಜಿಂಗ್​: ಪ್ರೀತಿ ಮತ್ತು ಮಾನವೀಯತೆ ಎಲ್ಲಾ ಗಡಿಗಳನ್ನು ಮೀರಿ ನಿಲ್ಲುತ್ತದೆ ಎಂದು ನಾವೆಲ್ಲರೂ ಕೇಳಿದ್ದೇವೆ. ಅದಕ್ಕೆ ಪುಷ್ಠಿ ನೀಡುವಂತಹ ನಾಯಿಯ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಈ ವಿಡಿಯೋ ನಿಮ್ಮ ಮನಸ್ಸು ಗೆಲ್ಲುವುದಂತು ಗ್ಯಾರೆಂಟಿ.

    ವೈರಲ್​ ಆಗಿರುವ ವಿಡಿಯೋದಲ್ಲಿ ಲಾಬ್ರಡರ್​ ತಳಿಯ ನಾಯಿಯು, ಮೃಗಾಲಯದಲ್ಲಿ ತಾಯಿಯಿಂದ ಬೇರೆಯಾಗಿರುವ ಮೂರು ಹುಲಿ ಮರಿಗಳನ್ನು ಪೋಷಿಸುತ್ತಿದೆ. ನಾಯಿ ಮತ್ತು ಹುಲಿ ಮರಿಗಳ ನಡುವಿನ ಬಾಂದವ್ಯವನ್ನು ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ.

    ಈ ವಿಡಿಯೋವನ್ನು ಚೀನಾದಲ್ಲಿ ಸೆರೆಹಿಡಿಯಲಾಗಿದೆ. ನಾಯಿಯ ಸುತ್ತಲೂ ಹುಲಿ ಮರಿಗಳು ಆಟವಾಡುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಈ ಮರಿಗಳು ಹುಟ್ಟಿದ ಕೂಡಲೇ ತಾಯಿ ಹುಲಿ ಅವುಗಳಿಗೆ ಆಹಾರವನ್ನು ನೀಡಲು ನಿರಾಕರಿಸಿತು ಎಂದು ಹೇಳಲಾಗಿದೆ.

    ವಿಡಿಯೋವನ್ನು ಎ ಪೀಸ್​ ಆಫ್​ ನೇಚರ್​ ಹೆಸರಿನ ಟ್ವಿಟರ್​ನಲ್ಲಿ ಭಾನುವಾರ ಪೋಸ್ಟ್​ ಮಾಡಲಾಗಿದೆ. ಈವರೆಗೂ 1 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ಸಾವಿರಾರು ಮಂದಿ ಲೈಕ್ಸ್​ ಮಾಡಿದ್ದಾರೆ. ಸಾಕಷ್ಟು ನೆಟ್ಟಿಗರು ವಿಡಿಯೋ ನೋಡಿ ಫಿದಾ ಆಗಿದ್ದು, ತಮ್ಮ ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್​ ಮೂಲಕ ತಿಳಿಸುತ್ತಿದ್ದಾರೆ.

    ಅಂದಹಾಗೆ ಹೆಣ್ಣು ಹುಲಿ ತನ್ನ ಮರಿಗಳನ್ನು ತ್ಯಜಿಸುವುದು ಕಂಡು ಕೇಳರಿಯದ ಸಂಗತಿಯೇನಲ್ಲ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (NTCA) ಎಲ್ಲಾ ಹುಲಿ ಸಂರಕ್ಷಿತ ಪ್ರದೇಶಗಳಿಗೆ ಅದರ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (SOP) ಕಿರುಪುಸ್ತಕದಲ್ಲಿ ಪಟ್ಟಿ ಮಾಡಿರುವಂತೆ ಹಲವು ಕಾರಣಗಳಿವೆ. ತಾಯಿ ಹುಲಿಯ ಸಾವಿನ ಹೊರತಾಗಿ, ಎನ್​ಟಿಎ ಮಾರ್ಗಸೂಚಿಗಳ ಪ್ರಕಾರ, ಮರಿಗಳು ದುರ್ಬಲವಾಗಿದ್ದರೆ, ಅಸಮರ್ಥವಾಗಿದ್ದರೆ, ಗಾಯಗೊಂಡರೆ ಅಥವಾ ಅನಾರೋಗ್ಯದಿಂದ ಕೂಡಿದ್ದರೆ ಅವುಗಳನ್ನು ತಾಯಿ ಹುಲಿ ತ್ಯಜಿಸುತ್ತದೆ. ಕೆಲವು ಹೆಣ್ಣು ಹುಲಿಗಳು ಗಾಯದಿಂದಾಗಿ ಆಹಾರ ನೀಡಲು ಅಸಮರ್ಥತೆಯಿಂದಾಗಿ ತಮ್ಮ ಮರಿಗಳನ್ನು ಬಿಡುತ್ತವೆ. (ಏಜೆನ್ಸೀಸ್​)

    ಲಿವಿಂಗ್‌ ಟುಗೆದರ್​ನಲ್ಲಿದ್ದ ಕಿರುತೆರೆ ಯುವನಟಿ ಪಲ್ಲವಿ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

    ಫ್ಯಾಟ್ ಸರ್ಜರಿಗೆ ಹೋಗಿದ್ದ ಕಿರುತೆರೆ ನಟಿ ಚೇತನಾ ರಾಜ್ ದುರಂತ​ ಸಾವು: ಪಾಲಕರ ಗಂಭೀರ ಆರೋಪ

    ಕಾಂಗ್ರೆಸ್ ಹೈಕಮಾಂಡ್ ತೀರ್ಮಾನದಿಂದ ಸಂಕಷ್ಟಕ್ಕೆ ಸಿಲುಕಿದ ಮಾಜಿ ಸಿಎಂ ಸಿದ್ದರಾಮಯ್ಯ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts