ಡೀಸೆಲ್​ ಬೆಲೆ ನೂರರ ಗಡಿ ಸಮೀಪಿಸುತ್ತಿದ್ರೆ ಬೀದರ್​ನಲ್ಲಿ ಮಾತ್ರ ಕೇವಲ 70 ರೂಪಾಯಿಗೆ ಸಿಗ್ತಿದೆ..!

Petrol
Petrol Bunk
Published on

ಬೀದರ್​: ದೇಶಾದ್ಯಂತ ಡೀಸೆಲ್​ ಬೆಲೆ ನೂರರ ಗಡಿ ಸಮೀಪಿಸುತ್ತಿದ್ದರೆ, ಬೀದರ್​ನಲ್ಲಿ ಮಾತ್ರ ಕೇವಲ 70 ರೂಪಾಯಿಗೆ ದೊರೆಯುತ್ತಿದೆ. ಎಲ್ಲರಿಗೂ ಆಶ್ಚರ್ಯವಾಗಬಹುದು. ಅದಕ್ಕೆ ಕಾರಣ ಏನೆಂಬುದು ಇಲ್ಲಿದೆ ನೋಡಿ.

ಬೀದರ್​ನ ಹುಮನಾಬಾದ್​ ಮತ್ತು ಬಸವಕಲ್ಯಾಣದಲ್ಲಿ ಬಯೋ ಡೀಸೆಲ್​ ದಂಧೆ ನಡೆಯುತ್ತಿದೆ. ಕೈಗಾರಿಕೆ ಪ್ರದೇಶಗಳಲ್ಲಿ ಬಳಸುವ ಬಯೋ ಡೀಸೆಲ್​ ಅಕ್ರಮ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಹೈದರಾಬಾದ್​-ಮುಂಬೈ ಹೆದ್ದಾರಿಯಲ್ಲಿ ಅಕ್ರಮ ಮಾರಾಟ ಮಾಡುತ್ತಿರುವ ಜಾಲವೊಂದು ಪತ್ತೆಯಾಗಿದೆ.

ಪೆಟ್ರೋಲ್​ ಬಂಕ್​ಗಳಲ್ಲಿ ಡೀಸೆಲ್​ 95 ರೂಪಾಯಿಗೆ ಲಭ್ಯವಾಗುತ್ತಿದೆ. ಆದರೆ, ಇಲ್ಲಿ 70 ರೂಪಾಯಿಗೆ ದೊರೆಯುತ್ತಿದೆ. ಬಂಕ್​ಗಳಲ್ಲಿ ಹೆಚ್ಚಿನ ಹಣ ಕೊಡಬೇಕಾಗಿರುವುದರಿಂದ ಜನರೀಗ ಬಯೋ ಡೀಸೆಲ್​ ಕಡೆ ಮುಖ ಮಾಡಿದ್ದಾರೆ. ಕೆಲ ಕಂಪನಿಗಳೇ ಇದರಲ್ಲಿ ಒಳಗೊಂಡಿರುವುದಾಗಿ ತಿಳಿದುಬಂದಿದೆ.

ಈ ಬಗ್ಗೆ ದಿಗ್ವಿಜಯ ನ್ಯೂಸ್​ ಜತೆ ಮಾತನಾಡಿರುವ ಬೀದರ್​ ಜಿಲ್ಲಾಧಿಕಾರಿ ರಾಮಚಂದ್ರನ್​ ಆರ್​ ಅನಧಿಕೃತವಾಗಿ ಡೀಸೆಲ್​ ಮಾರಾಟ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ಬಗ್ಗೆ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಗಳ ಜತೆ ಚರ್ಚಿಸಿದ್ದೇನೆ. ಈಗಾಗಲೇ ಎಫ್​ಐಆರ್​ ದಾಖಲಾಗಿದೆ. ಶೀಘ್ರದಲ್ಲೇ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net