

ಅಹಮದಾಬಾದ್: "ಚಿನ್ನದ ಮನುಷ್ಯ" ಎಂದೇ ಹೆಸರು ಪಡೆದಿದ್ದ ಕುಂಜಾಲ್ ಪಟೇಲ್ ಅಲಿಯಾಸ್ ಕೆ.ಪಿ. ಪಟೇಲ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಜರಾತಿನ ಅಹಮದಾಬಾದ್ನಲ್ಲಿ ಸೋಮವಾರ ನಡೆದಿದೆ.
ಕುಟುಂಬದ ಜತೆ ನಡೆದ ಗಲಾಟೆಯ ಬಳಿಕ ತಾನೇ ಕುತ್ತಿಗೆ ಹಿಸುಕಿಕೊಂಡು ಸಾವಿಗೀಡಾಗಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ. ರಾಜಕೀಯ ಪಕ್ಷವೊಂದರ ಅಭ್ಯರ್ಥಿಯಾಗಿ ಕುಂಜಾಲ್ ಪಟೇಲ್, ದರಿಯಾಪುರ್ ಕ್ಷೇತ್ರದಿಂದ ಈ ಮುಂಚೆ ಚುನಾವಣೆಗೆ ಸ್ಪರ್ಧಿಸಿ ಗಮನ ಸೆಳೆದಿದ್ದರು.
ಇನ್ನು ಆತ್ಮಹತ್ಯೆ ಸಂಬಂಧ ಅನುಮಾನವು ವ್ಯಕ್ತವಾಗಿದ್ದು, ಪ್ರಕರಣ ದಾಖಲಿಸಿರುವ ಮಧುಪುರ ಠಾಣಾ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕೆಜಿಗಟ್ಟಲೇ ಚಿನ್ನಾಭರಣ ಧರಿಸಿದ್ದ ಕುಂಜಾಲ್ ಪಟೇಲ್ ಫೋಟೋ ವೈರಲ್ ಆದ ಬಳಿಕ ಖ್ಯಾತಿಗಳಿಸಿದ್ದ.
ಕುಂಜಾಲ್ ಮಧುಪುರದ ಯೋಗೇಶ್ ಸೊಸೈಟಿಯಲ್ಲಿ ವಾಸವಿದ್ದ. ವಾಹನ ವಶಪಡಿಸಿಕೊಳ್ಳುವ ವ್ಯವಹಾರದಿಂದಲೂ ಕುಂಜಾಲ್ ಗುರುತಿಸಿಕೊಂಡಿದ್ದ. ಸದ್ಯ ಆಕಸ್ಮಿಕ ಸಾವು ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ. (ಏಜೆನ್ಸೀಸ್)