ತುಂಬು ಗರ್ಭಿಣಿ ಹೊಟ್ಟೆ ಮೇಲೆ ವಾಹನ ಹರಿದು ಸ್ಥಳದಲ್ಲೇ ನವಜಾತಶಿಶು-ತಾಯಿ ಸಾವು!

accident
Published on

ರಾಜಸ್ತಾನ: ಗಂಗರಾರ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಬೈಕ್​ ಮತ್ತು ಅಪರಿಚಿತ ವಾಹನದ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಗರ್ಭಿಣಿಯೊಬ್ಬಳ ಹೊಟ್ಟೆ ಮೇಲೆ ವಾಹನ ಹರಿದು ಸ್ಥಳದಲ್ಲೇ ಮಗು ಸಹಿತ ತಾಯಿ ದುರ್ಮರಣಕ್ಕೀಡಾಗಿದ್ದಾರೆ. ಜತೆಗಿದ್ದ ಗಂಡ ಮತ್ತು 7 ವರ್ಷದ ಮಗನ ಸ್ಥಿತಿ ಗಂಭೀರವಾಗಿದೆ.

ಧೋಲಿ ಮೊಹಲ್ಲಾ ನಿವಾಸಿ ಬಾಲರಾಜ್​ ಎಂಬುವರ ಪತ್ನಿ, ತುಂಬುಗರ್ಭಿಣಿ ಹೇಮಲತಾ ಮತ್ತು ಈಕೆಯ ಹೊಟ್ಟೆಯಲ್ಲಿದ್ದ ಮಗು ಮೃತ ದುರ್ದೈವಿಗಳು. ಈ ದಂಪತಿಗೆ 7 ವರ್ಷದ ಮಗನಿದ್ದು, ಅವನೊಂದಿಗೆ ಬೈಕ್​ನಲ್ಲಿ ಗಂಗರಾರ್​ನಿಂದ ಚಿತ್ತೋರಗಢದತ್ತ ಸೋಮವಾರ ಸಂಜೆ ಬೈಕ್​ನಲ್ಲಿ ಬರುತ್ತಿದ್ದರು. ಇದನ್ನೂ ಓದಿರಿಸತ್ತು ಮಲಗಿದ್ದವ ಕರುಳ ಕೂಗಿಗೆ ಓಗೊಟ್ಟು ಮತ್ತೆ ಬದುಕಿದ! ಅಂತ್ಯಸಂಸ್ಕಾರ ವೇಳೆ ನಡೆದ ಪವಾಡ ಕೇಳಿದ್ರೆ ಶಾಕ್​ ಆಗ್ತೀರಿ 

ಈ ವೇಳೆ ಹಿಂಬದಿಯಿಂದ ಬಂದ ವಾಹನವೊಂದು ಬೈಕ್​ಗೆ ಡಿಕ್ಕಿಹೊಡೆದಿದ್ದು, ರಸ್ತೆಗೆ ಬಿದ್ದ ಗರ್ಭಿಣಿ ಮೇಲೆ ವಾಹನ ಹರಿದಿದೆ. ಮಹಿಳೆ ಮೃತಪಟ್ಟಿದ್ದು, ಆಕೆಯ ಹೊಟ್ಟೆಯಿಂದ ಹೊರ ಬಂದ ಮಗುವನ್ನ ಉಳಿಸಲು ಸ್ಥಳಕ್ಕೆ ವೈದ್ಯರು ದೌಡಾಯಿಸಿದ್ದರಾದರೂ ಮಗು ಬದುಕಲಿಲ್ಲ. ಬೈಕ್​ ಸವಾರ ಬಾಲರಾಜ್​ ಬೈಕ್​ ಸಹಿತ ರಸ್ತೆಬದಿಗೆ ಬಿದ್ದಿದ್ದು, ಗಂಭೀರ ಗಾಯಗೊಂಡಿದ್ದಾರೆ. 7 ವರ್ಷದ ಮಗನ ಸ್ಥಿತಿಯೂ ಚಿಂತಾಜನಕವಾಗಿದೆ. ಅಪ್ಪ-ಮಗ ಇಬ್ಬರನ್ನೂ ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ. ನಡುರಸ್ತೆಯಲ್ಲಿ ವಾಹನಕ್ಕೆ ಗರ್ಭಿಣಿ ಬಲಿಯಾದ ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net