

ನವದೆಹಲಿ: ಮೊದಲನೇ ಅಲೆಗಿಂತ ಕರೊನಾ ಎರಡನೇ ಅಲೆ ಹೆಚ್ಚು ಅಪಾಯಕಾರಿಯಲ್ಲಿರುವಂತೆ ಗೋಚರವಾಗುತ್ತಿದೆ. ಯುವಕರಲ್ಲೇ ಹೆಚ್ಚು ಕರೊನಾ ಪ್ರಕರಣಗಳು ವರದಿಯಾಗುತ್ತಿರುವ ಜತೆಗೆ ಮಧ್ಯ ವಯಸ್ಕರು ಸಹ ಹೆಚ್ಚು ಬಲಿಯಾಗುತ್ತಿದ್ದಾರೆ.
ಇದರ ನಡುವೆ 29 ವರ್ಷದ ದೆಹಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಒಬ್ಬರು ಕೋವಿಡ್ ತೊಡಕಿನಿಂದ ಮೃತಪಟ್ಟಿರುವುದು ಯುವಕರ ಆತಂಕಕ್ಕೆ ಕಾರಣವಾಗಿದೆ. ಮೃತ ಎಸ್ಐ ಅನ್ನು ಅಂಕಿತ್ ಚೌಧರಿ ಎಂದು ಗುರುತಿಸಲಾಗಿದೆ. ಏಪ್ರಿಲ್ 15ರಂದು ಕರೊನಾ ಸೋಂಕು ಪಾಸಿಟಿವ್ ಆಗಿತ್ತು.
ಶುಕ್ರವಾರ ಘಾಜಿಯಾಬಾದ್ನಲ್ಲಿ ಅಂಕಿತ್ ಮೃತಪಟ್ಟಿದ್ದಾರೆ. ಬೆಡ್ಗಾಗಿ ಹುಡುಕಾಡಿದೆವು. ಎಲ್ಲಿಯೂ ಬೆಡ್ ಸಿಗಲಿಲ್ಲ. ಉಸಿರಾಟದ ತೊಂದರೆ ತೀವ್ರವಾಗಿರುವುದಾಗಿ ಅಂಕಿತ್ ಹೇಳಿದರು. ಆ ಬಳಿಕ ಆರೋಗ್ಯ ಸ್ಥಿತಿ ತೀವ್ರ ಹದಗೆಟ್ಟು ಮೃತಪಟ್ಟಿದ್ದಾರೆಂದು ಸಹೋದ್ಯೋಗಿಯೊಬ್ಬರು ತಿಳಿಸಿದ್ದಾರೆ.
ಶ್ವಾಸಕೋಶ ಆವರಿಸಿದ ಸೋಂಕು
ಕರೊನಾ ಸೋಂಕು ಅಂಕಿತ್ ಅವರ ಶ್ವಾಸಕೋಶವರೆಗೂ ಹರಡಿ ಮೃತಪಟ್ಟಿದ್ದಾರೆ ಎಂಬ ಶಾಕಿಂಗ್ ವಿಚಾರವನ್ನು ವೈದ್ಯರು ತಿಳಿಸಿದ್ದಾರೆ. ಯುವ ಎಸ್ಐ ಸಾವಿಗೆ ಸಹೋದ್ಯೋಗಿಳು ಕಂಬನಿ ಮಿಡಿದ್ದಿದ್ದಾರೆ. ಮನೆಗೆ ಆಧಾರವಾಗಿದ್ದ ಮಗನನ್ನು ಕಳೆದುಕೊಂಡ ಕುಟುಂಬ ಶೋಕ ಸಾಗರದಲ್ಲಿ ಮುಗಿಲು ಮುಟ್ಟಿದೆ. (ಏಜೆನ್ಸೀಸ್)