ಕ್ವಾರಂಟೈನಲ್ಲಿದ್ದವ ವೃದ್ಧೆಯನ್ನು ಕಚ್ಚಿ ಕೊಂದ!

corona new
Published on

ಚೆನ್ನೈ: ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಕ್ವಾರಂಟೈನ್​ಗೆ ಒಳಗಾಗಿದ್ದ ವ್ಯಕ್ತಿಯೊಬ್ಬ ಮನೆಯಿಂದ ಪರಾರಿಯಾಗಿ ವೃದ್ಧೆಯೊಬ್ಬರನ್ನು ಕಚ್ಚಿ ಕೊಂದ ಪ್ರಕರಣ ತಮಿಳುನಾಡಿನಲ್ಲಿ ನಡೆದಿದೆ.

ಶ್ರೀಲಂಕಾದಿಂದ ಬಂದಿದ್ದ ಮಣಿಕಂಠನ್ (35) ತಮಿಳುನಾಡಿನ ಹಳ್ಳಿಯೊಂದರಲ್ಲಿ ಗೃಹ ನಿರ್ಬಂಧಕ್ಕೆ ಒಳಪಡಿಸಲಾಗಿತ್ತು. ಮನೆಯಿಂದ ನಗ್ನವಾಗಿ ಹೊರಗೆ ಬಂದ ಆತ, 80 ವರ್ಷದ ಮಹಿಳೆಯೊಬ್ಬರನ್ನು ತೀವ್ರವಾಗಿ ಕಚ್ಚಿ ಗಾಯಗೊಳಿಸಿದ್ದ. ಆಸ್ಪತ್ರೆಗೆ ಸೇರಿಸಲಾಗಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮನೆಯಿಂದ ಸುಮಾರು ನೂರು ಮೀಟರ್ ಓಡಿ ಬಂದಿದ್ದ ಮಣಿಕಂಠನ್, ಹೊರಗೆ ಕುಳಿತಿದ್ದ ವೃದ್ಧೆ ಮೇಲೆ ಹಲ್ಲೆ ಮಾಡಿ, ಕಚ್ಚಿದ ಎಂದು ಪೊಲೀಸರು ಹೇಳಿದ್ದಾರೆ.

ಶ್ರೀಲಂಕಾದಿಂದ ವಾಪಸಾಗಿದ್ದ ಮಣಿಕಂಠನ್, ವ್ಯಾಪಾರದಲ್ಲಾದ ನಷ್ಟದ ಬಗ್ಗೆ ಖಿನ್ನನಾಗಿದ್ದ. ಆತನ ಮಾನಸಿಕ ಸ್ಥಿತಿ ಬಿಗಡಾಯಿಸಿತ್ತು. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಮಣಿಕಂಠನ್ 2010ರಲ್ಲೇ ಮಧುರೆಯಲ್ಲಿ ಚಿಕಿತ್ಸೆ ಪಡೆದಿದ್ದ ಎಂದು ತಿಳಿದು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net