ನಮ್ಮ ಮೆಟ್ರೋದಲ್ಲಿ ಪೇಪರ್​ ಟಿಕೆಟ್​; ಎರಡು ನಿಲ್ದಾಣಗಳಲ್ಲಿ ಯಂತ್ರಗಳ ಅಳವಡಿಕೆ

Metrooo
Published on

ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನೇರಳೆ ಮಾರ್ಗದ ಕಬ್ಬನ್​ ಪಾರ್ಕ್​ ನಿಲ್ದಾಣ ಹಾಗೂ ಮಹಾತ್ಮ ಗಾಂಧಿ ರಸ್ತೆ ನಿಲ್ದಾಣದಲ್ಲಿ ಕ್ಯೂರ್​ ಆರ್​ ಕೋಡ್​ ಮೂಲಕ ಪೇಪರ್​ ಟಿಕೆಟ್​ ಖರೀದಿಸಲು ಬಿಎಂಆರ್​ಸಿಎಲ್​ ವ್ಯವಸ್ಥೆ ಕಲ್ಪಿಸಿದೆ. ಈ ಮೊದಲು ವಿಶೇಷ ಸಂದರ್ಭಗಳಲ್ಲಿ ಪೇಪರ್​ ಟಿಕೆಟ್​ಗಳನ್ನು ಕೌಂಟರ್​ ಮೂಲಕವೇ ನೀಡಲಾಗುತ್ತಿತ್ತು.

ಕಬ್ಬನ್​ಪಾರ್ಕ್​ ನಿಲ್ದಾಣದಲ್ಲಿ 8 ಹಾಗೂ ಎಂ.ಜಿ. ರಸ್ತೆ ನಿಲ್ದಾಣದಲ್ಲಿ 6 "ಕ್ಯೂಆರ್​ ಟಿಕೆಟ್​ ಯಂತ್ರ'ಗಳನ್ನು ಅಳವಡಿಸಲಾಗಿದೆ. ಇದರಿಂದಾಗಿ ಟೋಕನ್​ ಖರೀದಿಸಲು ಕೌಂಟರ್​ಗಳಲ್ಲಿ ಸರತಿಯಲ್ಲಿ ನಿಲ್ಲುವುದು ತಪ್ಪಲಿದೆ. ಸದ್ಯ ನಿತ್ಯ 70ರಿಂದ 80 ಪ್ರಯಾಣಿಕರು ಟಿಕೆಟ್​ ಖರೀದಿಸುತ್ತಿದ್ದಾರೆ ಎಂದು ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದ್ದಾರೆ.

ಪೇಪರ್​ ಟಿಕೆಟ್​ಗೆ ಶೇ.5 ರಿಯಾಯಿತಿ ಇದ್ದು, ಯುಪಿಐ ಮೂಲಕ ಹಣ ಪಾವತಿಸಬಹುದು. ಪ್ರಯಾಣದ ವಿವರಗಳನ್ನು ನೀಡಿದ ಬಳಿಕ ಕ್ಯೂ ಆರ್​ ಕೋಡ್​ ಮುದ್ರಿತ ಪ್ರತಿ ಲಭ್ಯವಾಗುತ್ತದೆ. ಬಳಿಕ ಶುಲ್ಕ ಸಂಗ್ರಹಣೆ ಗೇಟ್​ನಲ್ಲಿ ಸ್ಕ್ಯಾನ್ ಮಾಡಿ ಪ್ಲಾಟ್​ಫಾರಂ ತಲುಪಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net