

ಬೆಂಗಳೂರು: ನಮ್ಮ ಮೆಟ್ರೋ ಬಹುನಿರೀತ ಹಳದಿ ಮಾರ್ಗದಲ್ಲಿ ಮೆಟ್ರೋ ರೈಲಿನ ಪರೀಕ್ಷಾರ್ಥ ಸಂಚಾರ ಮಾ.7ರಿಂದ ಆರಂಭವಾಗಿದ್ದು, ಏಪ್ರಿಲ್ ಅಂತ್ಯಕ್ಕೆ ಮೊದಲ ಹಂತ ಬಹುತೇಕ ಪೂರ್ಣಗೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.
ಕಳೆದ ಒಂದೂವರೆ ತಿಂಗಳಿನಿಂದ ಬೊಮ್ಮಸಂದ್ರ&ಬೊಮ್ಮನಹಳ್ಳಿ ನಿಲ್ದಾಣಗಳ ನಡುವೆ ರೈಲು ಪರೀಕ್ಷಾರ್ಥವಾಗಿ ಓಡಾಡುತ್ತಿದೆ. ನುರಿತ ಅಧಿಕಾರಿಗಳ ತಂಡ ವಿವಿಧ ಆಯಾಮಗಳಲ್ಲಿ ಪರಿಶೀಲನೆ ನಡೆಸುತ್ತಿದ್ದು, ಲೋಪದೋಷಗಳನ್ನು ಪಟ್ಟಿ ಮಾಡುತ್ತಿದ್ದಾರೆ ಎಂದು ಬಿಎಂಆರ್ಸಿಎಲ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಚೀನಾದ ಶಾಂಘೈ ಬಂದರಿನಿಂದ ಜ. 24ರಂದು ಕಳುಹಿಸಲಾಗಿದ್ದ 6 ಬೋಗಿಯುಳ್ಳ ಮೊದಲ ರೈಲು, ಫೆ. 6ರಂದು ಚೆನ್ನೆ$ ತಲುಪಿತ್ತು. ಬಳಿಕ ಬೋಗಿಗಳನ್ನು ರಸ್ತೆ ಮಾರ್ಗವಾಗಿ ಎಲೆಕ್ಟ್ರಾನಿಕ್ ಸಿಟಿ ಸಮೀಪವಿರುವ ಹೆಬ್ಬಗೋಡಿ ಡಿಪೋಗೆ ಸಾಗಿಸಲಾಗಿತ್ತು. ಈ ರೈಲು 18.82 ಕಿ.ಮೀ. ಉದ್ದದ ಹಳದಿ ಮಾರ್ಗದಲ್ಲಿ ವಿವಿಧ ವೇಗದಲ್ಲಿ ಸಂಚರಿಸುತ್ತಿದೆ. ಮುಂದಿನ ದಿನಗಳಲ್ಲಿ ರೈಲಿನ ವೇಗ, ಒಂದು ನಿಲ್ದಾಣದಿಂದ ಇನ್ನೊಂದು ನಿಲ್ದಾಣಕ್ಕೆ ತಲುಪುವ ಸಮಯ, ವಿದ್ಯುತ್ ಪ್ರವಹಿಸುವಿಕೆ, ಪ್ರಯಾಣಿಕರು ಭರ್ತಿಯಾಗಿದ್ದಾಗ ಹೇಗೆ ಸಂಚರಿಸುತ್ತದೆ ಮುಂತಾದವುಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ.
ಜುಲೈ ಅಂತ್ಯದೊಳಗೆ ಪಶ್ಚಿಮ ಬಂಗಾಳದ ತಿತಾರ್ ಕಂಪನಿಯಿಂದ ಎರಡು ರೈಲುಗಳು ಬರಲಿವೆ. ಬಳಿಕ ಪರೀಕ್ಷಾರ್ಥ ಸಂಚಾರ ಇನ್ನಷ್ಟು ವೇಗ ಪಡೆದುಕೊಳ್ಳುವ ಸಾಧ್ಯತೆಯಿದೆ. ಅಗತ್ಯ ಪರೀಕ್ಷೆ ಪೂರ್ಣಗೊಂಡ ಬಳಿಕ ಮೆಟ್ರೋ ರೈಲು ತಜ್ಞರ ಶಿಾರಸುಗಳನ್ನು ಆಧರಿಸಿ, ವಾಣಿಜ್ಯ ಸೇವೆ ಆರಂಭಿಸಲು ರೈಲ್ವೆ ಮಂಡಳಿಯ ಅನುಮೋದನೆ ಪಡೆಯಲಾಗುತ್ತದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಜೂನ್ ಅಂತ್ಯದವರೆಗೆ ಹಳದಿ ಮಾರ್ಗದಲ್ಲಿ 37 ಮಾದರಿಯ ವಿವಿಧ ಪರೀೆಗಳು ನಡೆಯಲಿವೆ. ನಂತರ 45 ದಿನಗಳವರೆಗೆ ಸಿಗ್ನಲಿಂಗ್, ದೂರಸಂಪರ್ಕ ವ್ಯವಸ್ಥೆ, ವಿದ್ಯುತ್ ಸರಬರಾಜು ವ್ಯವಸ್ಥೆ ಸೇರಿ ಸಿಸ್ಟಮ್ ಪರೀಕ್ಷೆಗಳು ನಡೆಯಲಿವೆ. ಬಳಿಕ ಸುರಕ್ಷತಾ ಪರೀಕ್ಷೆಗಳು, ರಿಸರ್ಚ್ ಡಿಸೈನ್ಸ್ ಮತ್ತು ಸ್ಟಾ$ಂಡರ್ಡ್ ಆರ್ಗನೈಸೇಶನ್ ಮೂಲಕ ಆಸಿಲೇಷನಲ್ ಟ್ರಯಲ್ಸ್, ಕಮಿಷನರ್ ಆ್ ಮೆಟ್ರೋ ರೈಲ್ ಸೇಫ್ಟಿ (ಸಿಎಮ್ಆರ್ಎಸ್) ಅವರಿಂದ ತಪಾಸಣೆ ನಡೆಯಲಿದೆ.
ವರ್ಷಾಂತ್ಯದಿಂದ ಹಳದಿ ಮಾರ್ಗದಲ್ಲಿ ಮೆಟ್ರೋ ವಾಣಿಜ್ಯ ಸೇವೆ ಆರಂಭಿಸಲಿದೆ ಎಂದು ಬಿಎಂಆರ್ಸಿಎಲ್ ಈಗಾಗಲೇ ತಿಳಿಸಿದೆ. ಸದ್ಯ ಈ ಮಾರ್ಗದಲ್ಲಿ ವಿವಿಧ ಪರೀಕ್ಷೆಗಳು ನಡೆಯುತ್ತಿದ್ದು, ಸೆಪ್ಟೆಂಬರ್ ನಂತರವಷ್ಟೇ ಮೆಟ್ರೋ ರೈಲು ಸುರಕ್ಷತಾ ಆಯುಕ್ತರಿಂದ (ಸಿಎಂಆರ್ಎಸ್) ಅನುಮೋದನೆ ಸಿಗಬೇಕಿದೆ. ಈ ಎಲ್ಲ ಪ್ರಕ್ರಿಯೆಗಳಿಗೆ ಸಾಕಷ್ಟು ಸಮಯ ಬೇಕಿದೆ. ಜತೆಗೆ ಚುನಾವಣೆಯೂ ನಡೆಯುತ್ತಿದೆ. ಹೀಗಾಗಿ ವರ್ಷಾಂತ್ಯಕ್ಕೆ ಹಳದಿ ಮಾರ್ಗ ವಾಣಿಜ್ಯ ಸೇವೆಗೆ ತೆರೆದುಕೊಳ್ಳುವುದು ಅನುಮಾನ ಎಂದು ಮೆಟ್ರೋ ರೈಲು ಪರಿಣಿತರು ವಿಶ್ಲೇಷಿಸಿದ್ದಾರೆ.