ಈ ಸಿನಿಮಾ ಖಂಡಿತ ಟ್ರೆಂಡ್‌ಸೆಟ್ಟರ್​ ಆಗಲಿದೆ; ನಟ ವೆಂಕಟ್​ ಹೇಳಿದ ಚಿತ್ರ ಯಾರದ್ದು?

ವಿಜಯವಾಣಿ - 2024-01-07T194246.584
Published on

ಆಂಧ್ರಪ್ರದೇಶ: ಕಳೆದ ವರ್ಷ ಚಿತ್ರರಸಿಕರಿಗೆ ಭರಪೂರ ಮನರಂಜನೆಯನ್ನು ಕೊಟ್ಟು, ಶಿಳ್ಳೆ, ಚಪ್ಪಾಳೆ ಪಡೆದುಕೊಂಡ ಭಾರತೀಯ ಸಿನಿಮಾಗಳು ಇದೀಗ 2024ರಲ್ಲಿ ಅದನ್ನು ಮೀರಿ ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ನೀಡಲು ಸಕಲ ತಯಾರಿಗಳನ್ನು ಮಾಡಿಕೊಂಡಿದೆ. ಈ ಸಾಲಿನಲ್ಲಿ ಟಾಲಿವುಡ್​ ಚಿತ್ರಗಳು ಮುಂಚೂಣಿಯಲ್ಲಿದ್ದು, ಸಂಕ್ರಾಂತಿ ಹಬ್ಬಕ್ಕೆ ತಮ್ಮ ಚಿತ್ರರಂಗದಿಂದಲೇ ಸಾಲು ಸಾಲು ಸಿನಿಮಾಗಳನ್ನು ತೆರೆಗೆ ತರಲು ಯೋಜನೆ ನಡೆಸಿದೆ. ಈ ಕುರಿತಂತೆ ತೆಲುಗು ಚಿತ್ರರಂಗದ ಸ್ಟಾರ್​ ಹೀರೋ ಫಿಲಂ ಟ್ರೆಂಡ್​ಸೆಟ್ಟರ್​ ಆಗಿ ಹೊರಹೊಮ್ಮಲಿದೆ ಎಂದು ನಟ ವೆಂಕಟ್​​ ಭವಿಷ್ಯ ನುಡಿದಿದ್ದಾರೆ.

ಟಾಲಿವುಡ್​ನ ಪವರ್​ಸ್ಟಾರ್​ ಪವನ್​ ಕಲ್ಯಾಣ್​ ಅಭಿನಯದ ಬಹುನಿರೀಕ್ಷಿತ 'ಓಜಿ' ಚಿತ್ರವು 2024ಕ್ಕೆ ತೆರೆ ಕಾಣಲಿದೆ ಎಂಬ ಸುದ್ದಿ ಸದ್ಯ ಪವನ್​ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿದ್ದು, ಬಿಡುಗಡೆಗೂ ಮುನ್ನವೇ ಒಂದಲ್ಲ ಒಂದು ವಿಚಾರಗಳಿಂದ ಸಿನಿಮಾ ಸುದ್ದಿಯಾಗುತ್ತಲೇ ಇದೆ. ಈ ಹಿಂದೆಯಷ್ಟೇ ಚಿತ್ರದ ನಿರ್ದೇಶಕರು ಓಜಿ ಕೆಲವು ಸಮಸ್ಯೆಗಳಿಂದ ಮಂದಗತಿಯಲ್ಲಿ ಸಾಗುತ್ತಿದೆ ಎಂದು ಅಭಿಮಾನಿಗಳಿಗೆ ತಿಳಿಸಿದ್ದರು. ಇದೀಗ ವೆಂಕಟ್ ನೀಡಿದ ಹೇಳಿಕೆಯಿಂದ ಚಿತ್ರ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.

ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿರುವ ನಟ ವೆಂಕಟ್ ಇತ್ತೀಚೆಗೆ ನಡೆದ ಸಂವಾದದಲ್ಲಿ ಚಿತ್ರದ ಕುರಿತು ಮಾತನಾಡಿ, "ತೆಲುಗು ಚಲನಚಿತ್ರೋದ್ಯಮದಲ್ಲಿ ಪವನ್ ಕಲ್ಯಾಣ್ ನಟನೆಯ ಸಿನಿಮಾ ಮುಂದಿನ ದೊಡ್ಡ ವಿಷಯವಾಗಲಿದ್ದು, ಈ ಚಿತ್ರ ಖಂಡಿತವಾಗಿಯೂ ಟ್ರೆಂಡ್‌ಸೆಟ್ಟರ್ ಆಗಲಿದೆ" ಎಂದು ಹೇಳಿದ್ದಾರೆ.

ಚಿತ್ರದಲ್ಲಿ ಪವನ್ ಕಲ್ಯಾಣ್, ಪ್ರಿಯಾಂಕಾ ಮೋಹನ್, ವೆಂಕಟ್, ಇಮ್ರಾನ್ ಹಶ್ಮಿ ಪ್ರಕಾಶ್ ರಾಜ್, ಶ್ರೀಯಾ ರೆಡ್ಡಿ, ಅರ್ಜುನ್ ದಾಸ್, ಹರೀಶ್ ಉತ್ತಮನ್, ಅಭಿಮನ್ಯು ಸಿಂಗ್ ಮುಂತಾದವರ ತಾರಾಗಣವಿದೆ. ಡಿವಿವಿ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಡಿವಿವಿ ದಾನಯ್ಯ ಈ ಗ್ಯಾಂಗ್‌ಸ್ಟರ್ ಆಕ್ಷನ್ ಡ್ರಾಮಾವನ್ನು ನಿರ್ಮಿಸುತ್ತಿದ್ದು, ಚಿತ್ರಕ್ಕೆ ಥಮನ್ ಅವರ ಸಂಗೀತವಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net