More

    ಕಿರಿಯರಿಗೆ ನಿವೃತ್ತ ನೌಕರರ ಮಾರ್ಗದರ್ಶನ ಅಗತ್ಯ

    ಶಿವಮೊಗ್ಗ: ಸರ್ಕಾರಿ ನೌಕರರ ಶ್ರಮದಿಂದ ಸರ್ಕಾರಿ ಯೋಜನೆಗಳನ್ನು ಜನರಿಗೆ ತಲುಪಿಸಲು ಸಾಧ್ಯ. ಅವರು ನಿವೃತ್ತರಾದ ಬಳಿಕವೂ ಅವರ ಅನುಭವವನ್ನು ಆಡಳಿತ ವ್ಯವಸ್ಥೆಗೆ ನೀಡಬೇಕೆಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.

    ಜಿಲ್ಲಾ ಸರ್ಕಾರಿ ನಿವೃತ್ತ ನೌಕರರ ಸಂಘದಲ್ಲಿ ನಿರ್ಮಿಸಿರುವ ನೂತನ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ನೌಕರರನ್ನು ನಿವೃತ್ತರು ಎಂದು ಹೇಳುವುದು ಸರಿಯಲ್ಲ. ವೃತ್ತಿಗೆ ನಿವೃತ್ತಿ ಎಂಬುದೇ ಇಲ್ಲ. ನಿವೃತ್ತರು ತಮ್ಮ ಜ್ಞಾನವನ್ನು ಕಿರಿಯರಿಗೆ ಹಂಚಬೇಕು. ಸಮರ್ಪಕ ಮಾರ್ಗದರ್ಶನ ನೀಡಬೇಕು ಎಂದರು.
    ಸರ್ಕಾರಿ ನೌಕರರ ಅಪಾರ ಅನುಭವ ಮತ್ತು ಮಾರ್ಗದರ್ಶನ ಪಡೆದ ಕಾರಣದಿಂದ ನಾನು ಸಚಿವನಾಗಿದ್ದಾಗ ಅನೇಕ ಉತ್ತಮ ಕಾರ್ಯಗಳನ್ನು ನಡೆಸಲು ಸಾಧ್ಯವಾಯಿತು. ನಿವೃತ್ತ ನೌಕರರ ಅನೇಕ ಬೇಡಿಕೆಗಳು ಇನ್ನೂ ಈಡೇರಿಲ್ಲ ಎಂಬುದರ ಅರಿವಿದೆ. ಅವುಗಳನ್ನು ಈಡೇರಿಸಿಕೊಳ್ಳುವ ನಿಟ್ಟಿನಲ್ಲಿ ನಿಮಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
    ಜಿಪಂ ಮಾಜಿ ಸದಸ್ಯ ಕೆ.ಇ.ಕಾಂತೇಶ್, ಸಂಘದ ಅಧ್ಯಕ್ಷ ಡಿ.ಎಂ.ಚಂದ್ರಶೇಖರ್, ಕಾರ್ಯದರ್ಶಿ ಷಣ್ಮುಖಪ್ಪ, ಪ್ರಮುಖರಾದ ಹನುಮಂತಪ್ಪ ಮುಂತಾದವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts