More

    ಕಿಡಿಗೇಡಿಗಳಿಗೆ ತಕ್ಕ ಪಾಠ ಕಲಿಸಿ

    ಕಲಬುರಗಿ: ಕೋಟನೂರ (ಡಿ) ಗ್ರಾಮದಲ್ಲಿ ವೀರಶೈವ ಲಿಂಗಾಯತರ ಮನೆ ಮೇಲೆ ದಾಳಿ ಮಾಡಿ, ಮಹಿಳೆಯರೂ ಎನ್ನದೆ ಹಲ್ಲೆ ಮಾಡಿದ ಕಿಡಿಗೇಡಿಗಳಿಗೆ ತಕ್ಕ ಪಾಠ ಕಲಿಸಬೇಕು ಎಂದು ಆಗ್ರಹಿಸಿ ವೀರಶೈವ ಲಿಂಗಾಯತ ಸಮುದಾಯದಿಂದ ನಗರದ ಚೆಕ್‌ಪೋಸ್ಟ್ ಬಳಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

    ಸಂವಿಧಾನದಂತೆ ಜಾಮೀನಿನ ಮೇಲೆ ಹೊರಬಂದ ಸಮುದಾಯದ ಸಂಗಮೇಶ ಕುಟುಂಬದ ಸದಸ್ಯರನ್ನು ಮಂಗಳವಾರ ತಡರಾತ್ರಿ ಗುಂಡಾಗಳು ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾರೆ. ಜೀವಹೋಗುವಂತ ವಾತಾವರಣ ಸೃಷ್ಟಿಯಾಗಿತ್ತು. ಅಕ್ಕಪಕ್ಕದ ಮನೆಯವರು ಇದ್ದಿದ್ದರಿಂದ ಜೀವ ಹೋಗಿಲ್ಲ. ಮಹಿಳೆಯರಿಗೆ, ಭಗವಾದಾರಿಗಳಿಗೆ, ಲಿಂಗಾಯತರಿಗೆ ಸುರಕ್ಷೆ ಇಲ್ಲದಂತಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

    ಗುಂಡಾಗಳಿಗೆ ತಕ್ಕ ಪಾಠ ಕಲಿಸಲು ಎಲ್ಲರೂ ಒಗ್ಗಟ್ಟಾಗಬೇಕು. ಆಗ ಮಾತ್ರ ವೀರಶೈವ ಸಮಾಜ ಉಳಿಯುತ್ತದೆ. ಕೋಟನೂರ ಡಿ ಘಟನೆ ಸಂವಿಧಾನಕ್ಕೆ ಅಪಮಾನ ಮಾಡಿದ ಕೃತ್ಯ. ಕಾಂಗ್ರೆಸ್ ಆಡಳಿತದಲ್ಲಿ ಲಿಂಗಾಯತರಿಗೆ ನಿರಂತರ ಅನ್ಯಾಯವಾಗುತ್ತಿದೆ. ಇದನ್ನು ವೀರಶೈವ ಲಿಂಗಾಯತ ಸಮಾಜ ಎಂದಿಗೂ ಸಹಿಸುವುದಿಲ್ಲ ಎಂದು ಬಿಜೆಪಿ ನಗರಾಧ್ಯಕ್ಷ ಚಂದು ಪಾಟೀಲ್, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಎಚ್ಚರಿಕೆ ನೀಡಿದರು.

    ಆಳಂದ ಚೆಕ್ ಪೋಸ್ಟ್ ವೃತ್ತದ ಬಳಿ ಟೈರ್‌ಗೆ ಬೆಂಕಿ ಹಚ್ಚಿ, ಮಾನವ ಸರಪಳಿ ನಿರ್ಮಿಸಿ, ಸಂಚಾರ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
    ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಮಾತನಾಡಿದರು. ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಶರಣು ಮೋದಿ, ಮುಖಂಡರಾದ ಶಿವಕಾಂತ ಮಹಾಜನ್, ಈರಣ್ಣ ಗುಳೇದ್, ಮಲ್ಲಿಕಾರ್ಜುನ ಖೇಮಜಿ, ಮಲ್ಲಿಕಾರ್ಜುನ ಓಕಳಿ, ಚನ್ನು ಡಿಗ್ಗಾಂವಿ, ಸಚಿನ ಕಡಗಂಚಿ, ಮಲ್ಲಿಕಾರ್ಜುನ ಸಾರವಾಡ್, ಲಕ್ಷ್ಮೀ ಕಾಂತ ಸ್ವಾದಿ, ಮಹೇಶ ಗೊಬ್ಬುರ, ಶರಣು ಅವರಾದಿ, ಜಗದೀಶ ಗುಳೇದ, ಗುರುರಾಜ ಚಿನ್ನಮಳ್ಳಿ, ಸಾವಿತ್ರಿ ಕುಳಗೇರಿ, ಸುವರ್ಣ ವಾಡೆ, ಇಂದಿರಾ ಬನಶೆಟ್ಟಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts