More

    ಪ್ರಿಯಾಂಕ್ ಖರ್ಗೆಗೆ ತೋರಿಸಬೇಕಂತ ಕೇಸ್ ಬುಕ್

    ಕಲಬುರಗಿ: ಕೋಟನೂರದಲ್ಲಿ ಜ.23ರಂದು ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿಗೆ ಅವಮಾನ ಆಗಿದ್ದಕ್ಕೆ ಒಂದೂ ಸಾಕ್ಷಿ ಇಲ್ಲ. ಜಿಲ್ಲಾಧಿಕಾರಿ ಮೇಡಂ ಕೇಳಿದ್ರೆ ನೀನು ಬರೋವರೆಗೂ ಹಾಗೇ ಇಡಬೇಕಾ? ಎಂದು ಪ್ರಶ್ನಿಸಿದ್ದರು. ನನ್ನ ಪತಿಯನ್ನು ಪೊಲೀಸರು ದೌರ್ಜನ್ಯ ಮಾಡಿ ಒಪ್ಪಿಸಿದ್ದಾರೆ ಎಂದು ಪ್ರಿಯಾಂಕಾ ಮಾಲಿ ಪಾಟೀಲ್ ಆರೋಪಿಸಿದರು.

    ಅಂಬೇಡ್ಕರ್ ಮೂರ್ತಿಗೆ ಅವಮಾನ ಮಾಡಿದ್ದಕ್ಕೆ ಸಾಕ್ಷಿ ಸಿಕ್ಕಿಲ್ಲ. ಪೊಲೀಸರು ನಮ್ಮ (ಆರೋಪಿ ಸಂಗಮೇಶ ಮಾ.ಪಾಟೀಲ್) ಪತಿಯನ್ನು ಹೊಡೆದು, ನನ್ನನ್ನು ಕರೆದುಕೊಂಡು ಹೋಗಿ ಬೆದರಿಸಿ ಏಳೇಳು ಪುಟದಲ್ಲಿ ಬರೆಸಿಕೊಂಡಿದ್ದಾರೆ. ಅವಮಾನ ಘಟನೆ ನಡೆದಿದ್ದಾಗ ನನ್ನ ಪತಿಯನ್ನು ರಾತ್ರಿ ಎರಡಕ್ಕೆ ಕರೆದುಕೊಂಡು ಹೋದರು. ಪ್ರಶ್ನಿಸಿದರೆ ಪ್ರಿಯಾಂಕ್ ಖರ್ಗೆ ಅವರಿಗೆ ತೋರಿಸಬೇಕು ಎಂದಿದ್ದರು. ತನಿಖೆ ನಡೆಯಲಿ ಎಂದು ನಾವೂ ಸುಮ್ಮನಿz್ದೆÃವು. ಆದರೆ ಇದೀಗ ಬೇಲ್ ಮೇಲೆ ಬಂದಾಗ ಪುನಃ ದಾಳಿ ಆಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ನನ್ನ ಪತಿ ಇದೀಗ ಸಂವಿಧಾನದ ಪ್ರಕಾರವೇ ಬೇಲ್ ತೆಗೆದುಕೊಂಡು ಹೊರಗೆ ಬಂದಿದ್ದಾರೆ. ಅದೇ ದಿನ ರಾತ್ರಿ ಸುಮಾರು ೪೦ ಜನ ಬಂದು ಮೈದುನ ಅನೀಲನನ್ನು ಎಳೆದಾಡಿ ಹೊಡೆದಿದ್ದಾರೆ. ಪ್ರಶ್ನಿಸಿದ ಸಹೋದರಿ, ಅತ್ತೆ, ನೆಂಟರ ಮೇಲೂ ಹಲ್ಲೆ ಮಾಡಿದ್ದಾರೆ. ಪೆಟ್ರೋಲ್ ಹಾಕಿ ಸುಡಲು ಪ್ರಯತ್ನಿಸಿದ್ದಾರೆ. ನಮಗೆ ರಕ್ಷಣೆಗೆ ಪೊಲೀಸರು ಬರಲಿಲ್ಲ ಎಂದು ಹೇಳಿದರು.
    ರಾಜೇಶ್ವರಿ ಮಾಲಿ ಪಾಟೀಲ್, ಸುರೇಖಾ ಪಾಟೀಲ್, ಸಂಗಮ್ಮ ಗಡೇದ್, ಅನಸುಬಾಯಿ ಇತರರಿದ್ದರು.

    ರಾತ್ರಿ ೧೦ಕ್ಕೆ ಬೀದಿಗೆ ಬಿಟ್ಟ ಪೊಲೀಸರು: ಮೂರ್ತಿಗೆ ಅವಮಾನ ಸಂಬಂಧಿಸಿದಂತೆ ನಮ್ಮ ಬಾಮೈದ ಸಂಗಮೇಶ ಪಾಟೀಲ್ ಅವರನ್ನು ಕರೆದುಕೊಂಡು ಹೋಗಿ ನಾಲ್ಕು ದಿನದವರೆಗೆ ಕೋರ್ಟ್ಗೆ ಹಾಜರು ಪಡಿಸಲಿಲ್ಲ. ೨೪ಗಂಟೆಯಲ್ಲಿ ಕೋರ್ಟ್ಗೆ ಹಾಜರು ಪಡಿಸಬೇಕಿತ್ತು. ಮಾಡದೇ ಇರುವ ಪ್ರಕರಣವನ್ನು ಒಪ್ಪಿಕೋ ಎಂದು ಹೊಡಿ ಬಡಿ ಮಾಡಿದ್ದಾರೆ ಎಂದು ಕವಿತಾ ಮಾಲಿ ಪಾಟೀಲ್ ಆರೋಪಿಸಿದರು. ಮನೆಯ ಮಹಿಳೆಯರನ್ನು ಸಂಜೆ ೪ಕ್ಕೆ ವಾಹನದಲ್ಲಿ ಕರೆದುಕೊಂಡು ಹೋಗಿದ್ದರು. ರಾತ್ರಿ ೧೦ಗಂಟೆಗೆ ಹೋಗಿ ಎಂದರು. ಕನಿಷ್ಠ ಮಾನವೀಯತೆ, ಸೌಜನ್ಯವೂ ಇಲ್ಲದಂತೆ ರಾತ್ರಿ ಮಹಿಳೆಯರನ್ನು ಪೊಲೀಸರು ಬೀದಿಗೆ ಬಿಟ್ಟಿದ್ದರು ಎಂದು ಆರೋಪಿಸಿದರು.

    ಬೇಡಿಕೆಗಳು: ಪ್ರಕರಣದಲ್ಲಿ ಈಗೀರುವ ಪೊಲೀಸರನ್ನು ಸಸ್ಪೆಂಡ್ ಮಾಡಬೇಕು, ನಮ್ಮ ಮನೆ ಮೇಲೆ ಹಲ್ಲೆ ಪ್ರಕರಣದಲ್ಲಿ ದಿನೇಶ ದೊಡ್ಡಮನಿ, ಶ್ರೀನಿವಾಸ ದೊಡ್ಡಮನಿ ಇಬ್ಬರನ್ನು ಎ-೧, ಎ-೨ ಆರೋಪಿಗಳನ್ನಾಗಿ ಮಾಡಬೇಕು, ನಮ್ಮ ಕುಟುಂಬಕ್ಕೆ ರಕ್ಷಣೆ ಕೊಡಬೇಕು, ಸುಳ್ಳು ಪ್ರಕರಣದ ಸೂಕ್ತ ತನಿಖೆ ನಡೆಸಬೇಕು, ಹಲ್ಲೆ ಪ್ರಕರಣದಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು, ರಾಜ್ಯ ಮಹಿಳಾ ಆಯೋಗದವರು ನಮ್ಮ ಬೆಂಬಲಕ್ಕೆ ನಿಲ್ಲಬೇಕು ಎಂದು ಪ್ರಿಯಾಂಕಾ ಮಾಲಿ ಪಾಟೀಲ್, ರಾಜೇಶ್ವರಿ ಮಾಲಿ ಪಾಟೀಲ್, ಕವಿತಾ ಮಾಲಿ ಪಾಟೀಲ್ ಆಗ್ರಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts