ಪ್ರಿಯದರ್ಶಿನಿ ಮಹಿಳಾ ಸಹಕಾರ ಸಂಘದ ಮಹಾಸಭೆ

priyadarshini
ದರ್ಬೆ ಶ್ರೀರಾಮ ಸೌಧದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಿಯದರ್ಶಿನಿ ಮಹಿಳಾ ಸಹಕಾರ ಸಂಘದ ಮಹಾಸಭೆ ಶ್ರೀರಾಮ ಸೌಧದಲ್ಲಿರುವ ಸಭಾಂಗಣದಲ್ಲಿ ನಡೆಯಿತು.
Published on

ಪುತ್ತೂರು: ದರ್ಬೆ ಶ್ರೀರಾಮ ಸೌಧದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಿಯದರ್ಶಿನಿ ಮಹಿಳಾ ಸಹಕಾರ ಸಂಘದ ಮಹಾಸಭೆ ಶ್ರೀರಾಮ ಸೌಧದಲ್ಲಿರುವ ಸಭಾಂಗಣದಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷೆ ಡಾ.ದಿವ್ಯಪ್ರಭಾ ಗೌಡ ಚಿಲ್ತಡ್ಕ ಮಾತನಾಡಿ, ನಮ್ಮ ಸಹಕಾರಿ ಸಂಘವು ಹೆಣ್ಣು ಮಕ್ಕಳಿಂದ ಹೆಣ್ಣು ಮಕ್ಕಳಿಗಾಗಿ, ಹೆಣ್ಣು ಮಕ್ಕಳೇ ನಡೆಸಲ್ಪಡುವ ಸಹಕಾರಿ ಸಂಘವಾಗಿದೆ. ಬೇರೆ ಬೇರೆ ಸಂಘ ಸಂಸ್ಥೆ, ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಅನುಭವೀ ನಿರ್ದೇಶಕರು ನಮ್ಮ ಸಂಘದಲ್ಲಿದ್ದಾರೆ. ಮಹಿಳೆಯರ ಜೀವನದ ದಿನ ನಿತ್ಯದ ಆರ್ಥಿಕ ಸಮಸ್ಯೆಗಳನ್ನು ಎದುರಿಸಲು ಹಾಗೂ ಸಮಾಜದ ಆಧಾರವಾಗಿ ನಿಲ್ಲಲು ಸಹಕಾರಿ ಸಂಘ ಸ್ಥಾಪಿಸಲಾಗಿದೆ. ಸಂಘದ ಧ್ಯೇಯ-ಉದ್ದೇಶಗಳನ್ನು ಈಡೇರಿಸುತ್ತಾ ಸಂಘ 5 ವರ್ಷ ಉತ್ತಮವಾಗಿ ಬೆಳೆದು ಬಂದಿದೆ. ಮಹಿಳೆಯ ಆರ್ಥಿಕ ಸಬಲೀಕರಣಕ್ಕೆ ಸಂಘ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿದೆ. ಸದಸ್ಯರು ಸಂಘದ ಮುಖಾಂತರವೇ ವ್ಯವಹರಿಸಿ ಸಂಘದ ಬೆಳವಣಿಗೆಗೆ ಸಹಕರಿಸಿ ಎಂದರು.
ನಿರ್ದೇಶಕರಾದ ಜಾನಕಿ ಮುರ, ಸುಮತಿ, ಫಿಲೋಮಿನಾ ಲೋಬೋ ಹಾಗೂ ಜೊಹರಾ ಉಪಸ್ಥಿತರಿದ್ದರು.
ಉಪಾಧ್ಯಕ್ಷೆ ಸ್ವರ್ಣಲತಾ ಹೆಗ್ಡೆ ಸ್ವಾಗತಿಸಿದರು. ನಿರ್ದೇಶಕರಾದ ವನಜಾ ಪ್ರಾರ್ಥಿಸಿದರು. ಉಷಾ ಅಂಚನ್ ಕಾರ್ಯಕ್ರಮ ನಿರೂಪಿಸಿ, ನಳಿನಾಕ್ಷಿ ವಂದಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜೇಶ್ ಕೆ. ವರದಿ ಹಾಗೂ ಆಯ-ವ್ಯಯ ಮಂಡಿಸಿದರು. ಸಿಬಂದಿ ರೇಖಾ ಲೆಕ್ಕಪರಿಶೋಧನಾ ವರದಿ ಮಂಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net