ಫ್ರೀ ಬಸ್ ಲಾಭ ಪಡೆದ ವಿವಾಹಿತೆ; 11 ತಿಂಗಳ ಕಂದಮ್ಮನನ್ನು ಬಿಟ್ಟು ಪ್ರಿಯಕರನ ಭೇಟಿಗೆ 300 ಕಿ.ಮೀ ಪ್ರಯಾಣ!

Puttur
Published on

ಪುತ್ತೂರು(ದಕ್ಷಿಣ ಕನ್ನಡ): ರಾಜ್ಯದಲ್ಲಿ ಮಹಿಳೆಯರಿಗೆ ಸರ್ಕಾರಿ ಬಸ್ಸಿನಲ್ಲಿ ಉಚಿತ ಪ್ರಯಾಣಕ್ಕೆ ಕಾಂಗ್ರೆಸ್ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಇದೀಗ ಶಕ್ತಿ ಯೋಜನೆಯ ಲಾಭ ಪಡೆದ ವಿವಾಹಿತೆಯೊಬ್ಬಳು ತನ್ನ 11 ತಿಂಗಳ ಮಗುವನ್ನು ಬಿಟ್ಟು 300 ಕಿ.ಮೀ ದೂರದಲ್ಲಿರುವ ಪ್ರಿಯಕರನನ್ನು ಭೇಟಿಯಾಗಲು ಬಂದಿದ್ದಾಳೆ. ಇದನ್ನೂ ಓದಿ: ದಿನಸಿ ಖರೀದಿಸುವ ಮಜವೇ ಬೇರೆ! ಖುದ್ದಾಗಿ ಹೋಗಿ ಶಾಪಿಂಗ್ ಮಾಡಿದ ಸ್ಯಾಂಡಲ್​ವುಡ್ ನಟ ಯಾರು? ಗೆಸ್ ಮಾಡಿ...

ಹುಬ್ಬಳಿಯ ವಿವಾಹಿತ ಮಹಿಳೆಗೆ, ಅದೆ ಊರಿನ ಯುವಕನನ್ನು ಪ್ರೀತಿಸುತ್ತಿದ್ದಳು. ಆತ ಪುತ್ತೂರು ತಾಲೂಕು ಕೋಡಿಂಬಾಡಿ ಗ್ರಾಮದ ತೋಟವೊಂದರಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ. ದೂರದ ಊರಿನಲ್ಲಿ ಕೆಲಸ ಮಾಡುತ್ತಿದ್ದುದರಿಂದ ಒಬ್ಬರಿಗೊಬ್ಬರು ಭೇಟಿಯಾಗದೆ ತಿಂಗಳುಗಳೇ ಕಳೆದಿತ್ತು. ಇದೇ ಸಮಯದಲ್ಲಿ ಶಕ್ತಿ ಯೋಜನೆ ಜಾರಿಯಾಗಿದೆ. ತಡಮಾಡದ ವಿವಾಹಿತೆ ತನ್ನ 11 ತಿಂಗಳ ಕಂದಮ್ಮನನ್ನು ತವರು ಮನೆಯಲ್ಲಿ ಬಿಟ್ಟು ಪ್ರಿಯಕರನ ಭೇಟಿಗೆ ಬಸ್ಸು ಹತ್ತಿದ್ದಾಳೆ.

ಇವರಿಬ್ಬರ ಪ್ರೀತಿಯ ವಿಷಯ ಮಹಿಳೆಯ ಮನೆಯವರಿಗೆ ಗೊತ್ತಿತ್ತು . ಹೀಗಾಗಿ ಮಹಿಳೆ ಕಾಣೆಯಾಗಿದ್ದಾಳೆ ಎಂಬುದು ಗೊತ್ತಾಗುತ್ತಿದ್ದಂತೆ ಅವರು ಪುತ್ತೂರಿಗೆ ಬಂದಿದ್ದಾರೆ. ತಡ ರಾತ್ರಿ ಕೋಡಿಂಬಾಡಿಗೆ ಬಂದು, ಮಹಿಳೆ ಹಾಗೂ ಆಕೆಯ ಪ್ರಿಯಕರನಿಗಾಗಿ ಹುಡುಕಾಡಿದ್ದಾರೆ. ಈ ಬಗ್ಗೆ ಸಾರ್ವಜನಿಕರಿಂದ ಪುತ್ತೂರು ಪೊಲೀಸರಿಗೆ ಮಾಹಿತಿ ಸಿಕ್ಕಿದೆ.

ಪುತ್ತೂರು ಪೊಲೀಸರು ಹುಡುಕಾಟಕ್ಕೆ ನೆರವಾಗಿದ್ದಾರೆ. ಈ ವೇಳೆ ಪ್ರಿಯಕರ ಕೋಡಿಂಬಾಡಿಯಿಂದ ಪರಾರಿಯಾಗಿರುವುದು ಬೆಳಕಿಗೆ ಬಂದಿದೆ. ಮಹಿಳೆ ಕೋಡಿಂಬಾಡಿ ತಲುಪುತ್ತಲೇ ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ ಎನ್ನಲಾಗಿದೆ. ಇದೀಗ ಪೊಲೀಸರು ಮೊಬೈಲ್ ಟವರ್ ಲೊಕೇಶನ್ ಅಧಾರದಲ್ಲಿ ಇಬ್ಬರ ಪತ್ತೆಗೆ ಮುಂದಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net