ನೇರವಾಗಿ ಬಡವರ ಕೈಗೆ ಹಣ ನೀಡುವಂತೆ ರಾಹುಲ್​ ಗಾಂಧಿ ಆಗ್ರಹ

rahul gandi
Published on

ನವದೆಹಲಿ: ಕರೊನಾ ವೈರಸ್​ ಲಾಕ್​ಡೌನ್​ನಿಂದ ಸಂಕಷ್ಟಕ್ಕೆ ಸಿಲುಕಿರುವ ವಲಸೆ ಕಾರ್ಮಿಕರು ಹಾಗೂ ರೈತರ ಬ್ಯಾಂಕ್​ ಖಾತೆಗಳಿಗೆ ನೇರವಾಗಿ ಹಣವನ್ನು ವರ್ಗಾವಣೆ ಮಾಡುವಂತೆ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಸರ್ಕಾರವು ಕಾರ್ಮಿಕರು, ರೈತರು ಹಾಗೂ ಸಂಕಷ್ಟದಲ್ಲಿರುವ ಇತರರಿಗೆ ನೇರವಾಗಿ ಅವರ ಖಾತೆಗಳಿಗೆ ಹಣವನ್ನು ಜಮೆ ಮಾಡಬೇಕು. ಇಂತಹ ಸಮಯದಲ್ಲಿ ಬಡವರ ಕೈಗೆ ನೇರವಾಗಿ ಹಣ ನೀಡುವುದು ತುಂಬಾ ಅವಶ್ಯಕವೆಂದರು.

ಬಡವರಿಗೆ ಸಹಾಯ ಮಾಡದೇ ದೇಶದ ಆರ್ಥಿಕತೆ ಆರಂಭವಾಗದು. ಈ ಕ್ಷಣವೇ ವಲಸೆ ಕಾರ್ಮಿಕರಿಗೆ ನೆರವು ನೀಡುವುದು ತುಂಬಾ ಮುಖ್ಯ. ತಕ್ಷಣವೇ ಕೇಂದ್ರ ಸರ್ಕಾರ ನೇರವಾಗಿ ಹಣ ಒದಗಿಸದೇ ಇದ್ದರೆ, ಸರ್ಕಾರದ ಮಹಾದುರಂತಕ್ಕೆ ಸಾಕ್ಷಿಯಾಗಲಿದೆ ಎಂದು ಎಚ್ಚರಿಸಿದರು.

ಲಕ್ಷಾಂತರ ವಲಸೆ ಕಾರ್ಮಿಕರು ಆಹಾರ ಮತ್ತು ಹಣವಿಲ್ಲದೇ ಹೆದ್ದಾರಿಗಳಲ್ಲಿ ಸಾಗುತ್ತಿರುವುದನ್ನು ನೋಡಿದರೆ ಹೃದಯ ಬಿರಿಯುತ್ತದೆ ಎಂದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net