ರಿಲೀಸ್​ ಆಗಿ ಐದು ದಿನಕ್ಕೆ ದಾಖಲೆಯ ಕಲೆಕ್ಷನ್​ ಮಾಡಿದ Pushpa 2; ಈವರೆಗೂ ಚಿತ್ರ ಗಳಿಸಿದ್ದೆಷ್ಟು ಗೊತ್ತಾ?

pushpa 2
Published on

ಹೈದರಾಬಾದ್​: ಅಲ್ಲು ಅರ್ಜುನ್​-ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ-2 (Pushpa 2) ಚಿತ್ರವು ಡಿಸೆಂಬರ್​ 05ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದ್ದು, ಮಿಶ್ರ ಪ್ರತಿಕ್ರಿಯೆಯ ಹೊರತಾಗಿಯೂ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್​ ದೊರೆತಿದೆ. ಬಿಡುಗಡೆಯಾದ ದಿನದಿಂದಲೇ ಬಾಕ್ಸ್​​ಆಫೀಸ್​ನಲ್ಲಿ ಧೂಳೆಬ್ಬಿಸುತ್ತಿರುವ ಪುಷ್ಪ-2 ಚಿತ್ರವು ದಾಖಲೆಯ ಗಳಿಕೆ ಕಾಣುತ್ತಿದ್ದು, ಸಾವಿರ ಕೋಟಿ ಕ್ಲಬ್​ ಸೇರುವ ಎಲ್ಲಾ ಮುನ್ಸೂಚನೆಯನ್ನು ನೀಡಿದೆ.

ಸದ್ಯ ತಿಳಿದು ಬಂದಿರುವ ಮಾಹಿತಿ ಪ್ರಕಾರ ಪೈರಸಿ ಕಾಟದ ಹೊರತಾಗಿಯೂ ಚಿತ್ರವು ವಿಶ್ವದಾದ್ಯಂತ 920 ಕೋಟಿಗೂ ಅಧಿಕ ಗಳಿಕೆ ಕಂಡಿದ್ದು, ಈ ಬಗ್ಗೆ ಚಿತ್ರತಂಡವೇ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿದೆ. ಕರ್ನಾಟಕ ಸೇರಿದಂತೆ ಅನೇಕ ಕಡೆ ಚಿತ್ರ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದ್ದು, ಚಿತ್ರ ಸಕ್ಸಸ್​ ಮೀಟ್​ ನಡೆಸುವುದಕ್ಕೆ ತಯಾರಿ ನಡೆಸುತ್ತಿದೆ.

ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಪುಷ್ಪ-2 ಚಿತ್ರಕ್ಕೆ ಸಾವಿರಾರು ಶೋಗಳನ್ನು ಮೀಸಲಿಡಲಾಗಿದ್ದು, ಟಿಕೆಟ್​ ದರ ಹೆಚ್ಚಳ ಕೂಡ ಚಿತ್ರದ ಕೆಲಕ್ಷನ್​ ಜಾಸ್ತಿ ಆಗಲು ಕಾರಣ ಎಂದು ಹೇಳಲಾಗಿದೆ. ಟಿಕೆಟ್​ ದರ ಹೆಚ್ಚಳದ ಫಲವಾಗಿ ಚಿತ್ರವು ಬಿಡುಗಡೆಯಾದ ಐದು ದಿನಕ್ಕೆ 922 ಕೋಟಿ ರೂಪಾಯಿ ಗಳಿಸಿದ್ದು, ವಾರದ ಮಧ್ಯದಲ್ಲೇ ವೇಳೆ 1,000ಕೋಟಿ ಕ್ಲಬ್​ ಸೇರಬಹುದು ಎಂದು ಬಾಕ್ಸ್​​ಆಫೀಸ್​ ಪಂಡಿತರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net