

ಆಗ್ರಾ: ಆಸ್ತಿ ವಿವಾದಕ್ಕೆ (Property Dispute) ಸಂಬಂಧಿಸಿದಂತೆ ವ್ಯಕ್ತಿಯೋರ್ವ ತನ್ನ ಪತ್ನಿಯನ್ನು ರಾಡ್ನಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ಉತ್ತರಪ್ರದೇಶದ ಆಗ್ರಾದಲ್ಲಿ ನಡೆದಿದೆ. ಮೃತರನ್ನು ರಮಾದೇವಿ (50) ಎಂದು ಗುರುತಿಸಲಾಗಿದ್ದು, ಘಟನೆ ಬಳಿಕ ಆರೋಪಿಗಳು ತಲೆಮಾರಿಸಿಕೊಂಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಘಟನೆಯು ಯಮುನಾ ಪೊಲೀಸ್ ಠಾಣೆ ವ್ಯಾಪ್ತಿಯ ಶಂಭು ನಗರದಲ್ಲಿ ನಡೆದಿದ್ದು, ಪೊಲೀಸರು ಮೃತ ಮಹಿಳೆಯ ಪುತ್ರಿ ರಾಖಿ ನೀಡಿದ ದೂರನ್ನು ಆಧರಿಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆರೋಪಿಯ ಹೇಯ ಕೃತ್ಯಕ್ಕೆ ವ್ಯಾಪಕವಾಗಿ ಖಂಡಿಸಲಾಗುತ್ತಿದೆ.
ಈ ಬಗ್ಗೆ ಮಾತನಾಡಿರುವ ಮೃತ ಮಹಿಳೆಯ ಪುತ್ರಿ ರಾಖಿ, ನನ್ನ ತಂದೆ ದಧೀಚಿ ಹಾಗೂ ಸಹೋದರ ಮನೋಜ್ ಮನೆಯನ್ನು (Property) ಮಾರಾಟ ಮಾಡುವಂತೆ ನನ್ನ ತಾಯಿಗೆ ಹಿಂಸೆ ನೀಡುತ್ತಿದ್ದರು. ಈ ವಿಚಾರವಾಗಿ ಮನೆಯಲ್ಲಿ ಅನೇಕ ಬಾರಿ ಗಲಾಟೆಗಳು ನಡೆದಿದ್ದವು. ಈ ಸಂಬಂಧ ನನ್ನ ತಾಯಿ ಮಥುರಾದಲ್ಲಿ ಸಹೋದರ ಕೌಶಲ್ ಅವರೊಂದಿಗೆ ಬಾಡಿಗೆ ಮನೆ ಮಾಡಿಕೊಂಡು ವಾಸ ಮಾಡುತ್ತಿದ್ದರು. ಇದಾದ ಬಳಿಕ ರಮಾದೇವಿ ತಂದೆ ಬಳಿ ಬಂದು ಹಿರಿಯ ಮಗನಂತೆ ಕಿರಿಯ ಮಗನು ಬಾಡಿಗೆ ಮನೆಯಲ್ಲಿರಬೇಕು ಎಂದು ಹೇಳಿದ್ದರು.
ಡಿಸೆಂಬರ್ 08ರಂದು ಕೂಡ ಇದೇ ವಿಚಾರವಾಗಿ ಜಗಳ ನಡೆದಿದ್ದು, ನನ್ನ ತಂದೆ ರಾಡ್ನಿಂದ ತಾಯಿಯ ಮೇಲೆ ಹಲ್ಲೆ ಮಾಡಿದ್ದಾನೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರು ಗಂಭೀರವಾಗಿ ಗಾಯಗೊಂಡಿದ್ದ ನನ್ನ ತಾಯಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಆ ಬಳಿಕ ನನ್ನ ತಂದೆ, ಸಹೋದರ ಹಾಗೂ ಅತ್ತಿಗೆ ತಲೆಮಾರಿಸಿಕೊಂಡಿದ್ದು, ಈ ಸಂಬಂಧ ದೂರು ದಾಖಲಿಸಲಾಗಿದೆ ಎಂದು ಮೃತ ಮಹಿಳೆಯ ಪುತ್ರಿ ರಾಖಿ ತಿಳಿಸಿದ್ದಾರೆ.