ಐಕಾನ್​ ಸ್ಟಾರ್​ ಜನ್ಮದಿನಕ್ಕೆ 'ಪುಷ್ಪ 2' ಟೀಸರ್​! ಬಹುನಿರೀಕ್ಷಿತ ಚಿತ್ರದ ಬಗ್ಗೆ ಇಲ್ಲಿದೆ ಮಾಹಿತಿ

WhatsApp Image 2024-04-07 at 3.01.51 PM
Published on

ಆಂಧ್ರಪ್ರದೇಶ: ರಾಷ್ಟ್ರಪ್ರಶಸ್ತಿ ವಿಜೇತ, ಟಾಲಿವುಡ್​ನ ಐಕಾನ್​ ಸ್ಟಾರ್​, ನಟ ಅಲ್ಲು ಅರ್ಜುನ್ ಮತ್ತು ನಟಿ ರಶ್ಮಿಕಾ ಮಂದಣ್ಣ ಅಭಿನಯದ ಬಹುನಿರೀಕ್ಷಿತ ಪ್ಯಾನ್​ ಇಂಡಿಯಾ 'ಪುಷ್ಪ 2' ಟೀಸರ್ ಬಗ್ಗೆ ಹೊಸ ಅಪ್ಡೇಟ್​ ಹೊರಬಿದ್ದಿದ್ದು, ಸ್ವತಃ ನಟನೇ ಚಿತ್ರದ ಕುರಿತಂತೆ ಹೊಸ ಪೋಸ್ಟ್​ ಹಂಚಿಕೊಂಡಿದ್ದಾರೆ. ಸಿನಿಮಾದ ಟೀಸರ್​ಗಾಗಿ ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಈಗ ಸಿಹಿ ಸುದ್ದಿ ಸಿಕ್ಕಿದೆ.

ಪುಷ್ಪಾ: ದಿ ರೂಲ್‌ನ ಬಹುನಿರೀಕ್ಷಿತ ಟೀಸರ್ ನಾಳೆ (ಏ.08) ಸ್ಟೈಲಿಶ್ ಸ್ಟಾರ್‌ನ 42ನೇ ಹುಟ್ಟುಹಬ್ಬದಂದೇ ಅನಾವರಣಗೊಳಿಸಲು ಚಿತ್ರತಂಡ ಸಜ್ಜಾಗಿದೆ. ಚಿತ್ರದ ಟೀಸರ್​ನ ಬಿಟಿಎಸ್​ನ ಫೋಟೋವೊಂದನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡ ಅಲ್ಲು ಅರ್ಜುನ್​ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದ್ದಾರೆ.

"ಆಲ್​ ಸೆಟ್" ಎಂಬ ಶೀರ್ಷಿಕೆಯೊಂದಿಗೆ ಟೀಸರ್ ಸಾರ್ವಜನಿಕ ವೀಕ್ಷಣೆಗೆ ಸಿದ್ಧವಾಗಿದೆ ಎಂದು ಬರೆದುಕೊಂಡಿದ್ದಾರೆ. ಈ ಹಿಂದೆ ಮೊದಲ ಭಾಗದ ಟೀಸರ್​ ಅನ್ನು 2021ರಲ್ಲಿ ಅಲ್ಲು ಅರ್ಜುನ್ ಅವರ ಜನ್ಮದಿನದಂದು ಅನಾವರಣಗೊಳಿಸಲಾಗಿತ್ತು. ಈ ಬಾರಿಯೂ ಕೂಡ ಅದೇ ರೀತಿ ಟೀಸರ್​ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ಚಿತ್ರದಲ್ಲಿ ಫಹದ್ ಫಾಸಿಲ್, ಸುನಿಲ್, ಅನಸೂಯಾ ಭಾರದ್ವಾಜ್ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದು, ನಿರ್ದೇಶಕ ಸುಕುಮಾರ್ ಚಿತ್ರವನ್ನು ನಿರ್ದೇಶಿಸಿದ್ದಾರೆ,(ಏಜೆನ್ಸೀಸ್). 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net