

ಹೈದರಾಬಾದ್: ಇದೇ ಡಿ.05ರಂದು ವಿಶ್ವಾದ್ಯಂತ ಬಿಡುಗಡೆಯಾಗಿರುವ ಪುಷ್ಪ-2(Pushpa-2) ಸಿನಿಮಾ ಭಾರೀ ಹಿಟ್ ಆಗಿದ್ದು, ಬಾಕ್ಸ್ ಆಫೀಸ್ನಲ್ಲಿ ಧೂಳ್ ಎಬ್ಬಿಸುತ್ತಿದೆ.
ಸಿನಿಮಾ ಮಾರುಕಟ್ಟೆ ಪ್ರಕಾರ, ' ಕಳೆದ 5 ದಿನಗಳಲ್ಲಿ ಪುಷ್ಪ-2 ಸಿನಿಮಾ ಬರೊಬ್ಬರಿ 900 ಕೋಟಿ ರೂ. ಕೆಲಕ್ಷನ್ ಮಾಡಿದೆ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ನಾಯಕ ನಟ ಅಲ್ಲು ಅರ್ಜುನ್, ನಾಯಕಿ ರಶ್ಮಿಕಾ ಮಂದಣ್ಣ ಮತ್ತು ನಿರ್ದೇಶಕ ಸುಕುಮಾರ್ ಪುಷ್ಪ(ಭಾಗ-1) ಚಿತ್ರಕ್ಕಿಂತ ದೊಡ್ಡ ಮಟ್ಟದ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.
ಪುಷ್ಪ-2 ಚಿತ್ರ ಬಾಕ್ಸ್ ಆಫೀಸ್ನಲ್ಲಿ ಓಟ ಮುಂದುವರೆಸುತ್ತಿದೆ.‘ಅಲ್ಲು ಕಾಲ್ಶಿಟ್ ಹಣವನ್ನೂ ಕೂಡ ಪಡೆದಿಕೊಂಡಿಲ್ಲ. ಈ ಹಿನ್ನೆಲೆ ಮುಂದಿನ(900 ಕೋಟಿ ರೂ. ಬಿಟ್ಟು) ಕಲೆಕ್ಷನ್ನ ಭಾಗದಲ್ಲಿ ಶೇ.40 ಹಣವನ್ನು ಪಡೆಯಲಿದ್ದಾರೆ. ಲಾಭ ಹಂಚಿಕೆಯ ಆಧಾರದ ಮಾದರಿಯನ್ನು ಆನುಕರಿಸುತ್ತಿದ್ದಾರೆ. ಈ ಮಾದರಿಯನ್ನು ಬಾಲಿವುಡ್ನಲ್ಲಿ ಆನೇಕ ನಟರು ಮಾಡುತ್ತಿದ್ದಾರೆ. ಇದೇ ಮಾದರಿಗೆ ಅಲ್ಲು ಸಹಿ ಮಾಡಿದ್ದರು ಎಂದು ವರದಿಗಳು ಉಲ್ಲೇಖಿಸಿವೆ.
ಮೊದಲಾರ್ಥ(ಪುಷ್ಪ) ಚಿತ್ರಕ್ಕಾಗಿ ನಟಿ ರಶ್ಮಿಕಾ ಮಂದಣ್ಣ ಮೂರು ಕೋಟಿ ರೂ. ಪಡೆದಿದ್ದರು. ಆದರೆ, ಪುಷ್ಪ-2 ಚಿತ್ರಕ್ಕಾಗಿ 8 ಕೋಟಿ ರೂ ಸಂಭಾವನೆ ಪಡೆದಿದ್ದಾರೆ. ಆದರೆ, ಗಲ್ಲಾಪೆಟ್ಟಿಯಲ್ಲಿ ಸಿನಿಮಾದ ಭರ್ಜರಿ ಕಲೆಕ್ಷನ್ ಹಿನ್ನೆಲೆ 11ರಿಂದ 12 ಕೋಟಿ ರೂ, ಪಡೆಯುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಪ್ಯಾನ್ ಇಂಡಿಯಾ ಅಭಿಮಾನಿಗಳನ್ನು ಹೊಂದಿದ್ದಾರೆ ಎಂಬ ಆಧಾರದ ಮೇಲೆ ಸಂಭಾವನೆ ಹೆಚ್ಚಿಸಲಾಗಿದೆ. ಇನ್ನು ಉಳಿದ ಮೊತ್ತವನ್ನು ಮೈತ್ರಿ ಮೂವಿ ಮೇಕರ್ಸ್ ಮತ್ತು ನಿರ್ದೇಶಕ ಸುಕುಮಾರ್ ಶೇ.60 ರಷ್ಟು ಭಾಗವನ್ನು ಹಂಚಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.
ಪುಷ್ಪ-2 ಸಿನಿಮಾ ಬರೊಬ್ಬರಿ ಒಂದು ಸಾವಿರ ಸ್ಕ್ರೀನ್ಗಳಲ್ಲಿ ಬಿಡುಗಡೆಯಾಗಿದ್ದು. ಮುಂದಿನ ಭಾಗ ಬರಿಲಿದೆ ಎಂದು ಚಿತ್ರದ ಕೊನೆಯಲ್ಲಿ ಅಭಿಮಾನಿಗಳಿಗೆ ತಿಳಿಸಲಾಗಿದೆ. ಆದರೆ, ಸಿನಿಮಾ ಯಾವಾಗ ತೆರೆಗೆ ಬರಲಿದೆ ಎಂದು ನಿರ್ಮಾಪರಾಗಲಿ ಅಥವಾ ನಿರ್ದೇಶಕರಾಗಲಿ ಹೇಳಿಲ್ಲ,(ಏಜೆನ್ಸೀಸ್).