

ಆಂಧ್ರಪ್ರದೇಶ: ಟಾಲಿವುಡ್ನ ಸೈಲಿಶ್ ಸ್ಟಾರ್, ಐಕಾನ್ ಸ್ಟಾರ್, ನಟ ಅಲ್ಲು ಅರ್ಜುನ್ ಅಭಿನಯದ ಬಹುನಿರೀಕ್ಷಿತ 'ಪುಷ್ಪಾ 2' ಚಿತ್ರದ ಐಟಂ ಸಾಂಗ್ಗೆ ನಟಿಯ ಹುಡುಕಾಟಲ್ಲಿ ಇದೀಗ ಚಿತ್ರತಂಡ ತೊಡಗಿದ್ದು, ಮಾಹಿತಿಯ ಪ್ರಕಾರ ಚಿತ್ರ ತಯಾರಕರು ಈ ಹಾಡಿಗೆ ನಾಯಕಿಯನ್ನು ತರುವಲ್ಲಿ ಪದೇ ಪದೇ ವಿಫಲರಾಗುತ್ತಿದ್ದಾರೆ ಎಂದು ಹೇಳಲಾಗಿದೆ.
ಈ ಹಿಂದೆ 'ಪುಷ್ಪಾ 1' ರಲ್ಲಿ ಉಂ ಅಂಟವಾ ಐಟಂ ಸಾಂಗ್ನಲ್ಲಿ ನಟಿ ಸಮಂತಾ ಮಿಂಚಿದ್ದರು. ಈ ಹಾಡು ಬ್ಲಾಕ್ಬಸ್ಟರ್ ಹಿಟ್ ಆಗಿತ್ತು. ಇದೀಗ ಅದೇ ರೀತಿ ಚಿತ್ರದ ಎರಡನೇ ಭಾಗದ ಐಟಂ ಸಾಂಗ್ಗೆ ಹೊಸ ನಾಯಕಿಯನ್ನು ಚಿತ್ರತಂಡ ಹುಡುಕುತ್ತಿದ್ದು, ಚಿತ್ರದ ನಿರ್ಮಾಪಕರು ಈ ಪ್ರಯತ್ನದಲ್ಲಿ ಪರದಾಡುತ್ತಿದ್ದಾರೆ.
ಸ್ಯಾಂಡಲ್ವುಡ್ನ 'ಕಿಸ್' ಬೆಡಗಿ, ನಟಿ ಶ್ರೀಲೀಲಾ ಅವರನ್ನು ಐಟಂ ಸಾಂಗ್ಗಾಗಿ ಸಂಪರ್ಕಿಸಲಾಗಿದೆ. ಆದ್ರೆ, ಈ ಆಫರ್ ಅನ್ನು ಶ್ರೀಲೀಲಾ ನಿರಾಕರಿಸಿದ್ದಾರೆ. ಸದ್ಯ ಇತರ ನಾಯಕಿಯರ ಬಗ್ಗೆ ಚರ್ಚೆ ನಡೆಯುತ್ತಿದ್ದು, ಹಾಡಿನಲ್ಲಿ ಯುವ ನಾಯಕಿಯೊಬ್ಬರು ಮಿಂಚಬೇಕೆಂದು ನಿರ್ದೇಶಕ ಸುಕುಮಾರ್ ಬಯಸಿದ್ದಾರೆ ಎಂದು ಹೇಳಲಾಗಿದೆ. ಸಾಂಗ್ನಲ್ಲಿ ಯಾವ ನಟಿ ಆಯ್ಕೆಯಾಗಲಿದ್ದಾರೆ? ಸಿನಿಪ್ರೇಕ್ಷಕರನ್ನು ಮನರಂಜಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
'ಪುಷ್ಪ 2' ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳು ವ್ಯಕ್ತವಾಗಿದ್ದು, ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ಫಹದ್ ಫಾಸಿಲ್, ವಿಜಯ್ ಸೇತುಪತಿ, ಅನುಸೂಯಾ ಭಾರಧ್ವಾಜ್, ಧನಂಜಯ್ ಸೇರಿದಂತೆ ಮುಂತಾದ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ,(ಏಜೆನ್ಸೀಸ್).