ಮಿಶ್ರ ಪ್ರತಿಕ್ರಿಯೆಯ ಹೊರತಾಗಿಯೂ ಭರ್ಜರಿ ಕಲೆಕ್ಷನ್​ ಮಾಡಿದ Pushpa 2; ಕರ್ನಾಟಕದಲ್ಲಿ ಇತಿಹಾಸ ಸೃಷ್ಟಿ

Pushpa 2
Published on

ಬೆಂಗಳೂರು: ಅಲ್ಲು ಅರ್ಜುನ್​-ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ-2 (Pushpa 2) ಚಿತ್ರವು ಡಿಸೆಂಬರ್​ 05ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದ್ದು, ಮಿಶ್ರ ಪ್ರತಿಕ್ರಿಯೆಯ ಹೊರತಾಗಿ ಭರ್ಜರಿ ಓಪನಿಂಗ್​​ ಪಡೆದುಕೊಂಡಿದೆ. ಬಿಡುಗಡೆಯಾದ ದಿನವೇ ಬಾಕ್ಸ್​ಆಫೀಸ್​ನಲ್ಲಿ ಧೂಳೆಬ್ಬಿಸಿರುವ ಪುಷ್ಪ-2 (Pushpa 2) ಚಿತ್ರವು ದಾಖಲೆಯ ಗಳಿಕೆ ಕಾಣುತ್ತಿದ್ದು, ಸಾವಿರ ಕೋಟಿ ಕ್ಲಬ್​ ಸೇರಿದರೂ ಅಚ್ಚರಿ ಇಲ್ಲ ಎಂದು ಬಾಕ್ಸ್​​ಆಫೀಸ್​ ಪಂಡಿತರು ಭವಿಷ್ಯ ನುಡಿದಿದ್ದಾರೆ. ಇನ್ನೂ ಚಿತ್ರಕ್ಕೆ ಕರ್ನಾಟಕದಲ್ಲಿ ಭರ್ಜರಿ ಓಪನಿಂಗ್​ ಸಿಕ್ಕಿದ್ದು, ರಾಜ್ಯದಲ್ಲೂ ದಾಖಲೆಯ ಕಲೆಕ್ಷನ್​ ಮಾಡುವ ಮೂಲಕ ಸದ್ದು ಮಾಡಿದೆ. ಈ ಬಗ್ಗೆ ಸಿನಿಮಾ ತಂಡದಿಂದಲೇ ಅಧಿಕೃತ ಮಾಹಿತಿಯನ್ನು ಬಿಡುಗಡೆ ಮಾಡಲಾಗಿದೆ.

ಬಿಡುಗಡೆಗೂ ಮುನ್ನ ಚಿತ್ರಕ್ಕೆ ಸಿಕ್ಕ ಹೈಪ್​ ಹಾಗೂ ಅಪ್ಡೇಟ್​ಗಳಿಂದ ಪುಷ್ಪ 2 (Pushpa 2) ಚಿತ್ರವನ್ನು ವೀಕ್ಷಿಸಲು ಸಿನಿರಸಿಕರು ಕಾತುರದಿಂದ ಕಾಯುತ್ತಿದ್ದರು. ಪೈರಸಿ ಹಾಗೂ ಮಿಶ್ರ ಪ್ರತಿಕ್ರಿಯೆಯ ಹೊರತಾಗಿ ಚಿತ್ರ ಬಹುತೇಕ ಕಡೆ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದ್ದು, ಕರ್ನಾಟಕದಲ್ಲಿ ಪ್ರಮೋಶನ್​ ಹೊರತಾಗಿ ಭರ್ಜರಿ ರೆಸ್ಪಾನ್ಸ್​ ದೊರೆತಿದೆ. ಈ ಬಗ್ಗೆ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್​ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಕರ್ನಾಟದಲ್ಲಿ ಚಿತ್ರವು ಮೊದಲ ದಿನ 23.7 ಕೋಟಿ ರೂಪಾಯಿ ಗಳಿಸಿದ್ದು, ತೆಲುಗು ವರ್ಷನ್​ಗೆ ಜನ ಹೆಚ್ಚು ಮನ್ನಣೆ ಹಾಕಿದ್ದಾರೆ. ತೆಲುಗು ಚಿತ್ರವೊಂದು ಕರ್ನಾಟಕದಲ್ಲಿ ಮೊದಲ ದಿನ ಇಷ್ಟು ದೊಡ್ಡ ಮೊತ್ತದ ಗಳಿಕೆ ಮಾಡಿರೋದು ಇದೇ ಮೊದಲು ಎಂದು ಹೇಳಲಾಗಿದ್ದು, ಈ ವಿಚಾರವಾಗಿ ಪುಷ್ಪ 2 ದಾಖಲೆ ಬರೆದಿದೆ.

ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಪುಷ್ಪ-2 ಚಿತ್ರಕ್ಕೆ ಸಾವಿರಾರು ಶೋಗಳನ್ನು ಮೀಸಲಿಡಲಾಗಿದ್ದು, ಟಿಕೆಟ್​ ದರ ಹೆಚ್ಚಳ ಕೂಡ ಚಿತ್ರದ ಕೆಲಕ್ಷನ್​ ಜಾಸ್ತಿ ಆಗಲು ಕಾರಣ ಎಂದು ಹೇಳಲಾಗಿದೆ. ಟಿಕೆಟ್​ ದರ ಹೆಚ್ಚಳದ ಫಲವಾಗಿ ಚಿತ್ರವು ಮೊದಲ ದಿನ 175 ಕೋಟಿ ರೂಪಾಯಿ ಗಳಿಸಿದ್ದು, ವಾರಾಂತ್ಯದ ವೇಳೆ 500ಕೋಟಿ ಕ್ಲಬ್​ ಸೇರಬಹುದು ಎಂದು ಬಾಕ್ಸ್​​ಆಫೀಸ್​ ಪಂಡಿತರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net