ನಟಿ ಕಂಗನಾ ಕಾರನ್ನು ಘೇರಾವ್ ಮಾಡಿದ ರೈತರ ಗುಂಪು

kanganacar
Published on

ಚಂಡೀಗಡ: ಪಂಜಾಬ್​ನ ಕೀರತ್​ಪುರದಲ್ಲಿ ರೈತ ನಾಯಕರು ಇಂದು ಬಾಲಿವುಡ್​ ನಟಿ ಕಂಗನಾ ರಣಾವತ್​ ಕಾರನ್ನು ಸುತ್ತುವರೆದು ಘೋಷಣೆಗಳನ್ನು ಕೂಗಿದರು. ಘೇರಾವ್​ ಮಾಡಿದ ದೊಡ್ಡ ಗುಂಪನ್ನು ಚದುರಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರವುದಕ್ಕಾಗಿ ಪೊಲೀಸ್​ ಸಿಬ್ಬಂದಿ ಶ್ರಮಿಸಬೇಕಾಯಿತು ಎಂದು ವರದಿ ತಿಳಿಸಿದೆ.

ಚಂಡೀಗಡ-ಉನ ಹೈವೇನಲ್ಲಿ ರೋಪರ್​ ನಗರದ ಬಂಗಾ ಸಾಹಿಬ್​, ಕೀರತ್​ಪುರ್​ ಸಾಹಿಬ್ ಬಳಿ ಈ ಘಟನೆ ನಡೆಯಿತು ಎಂದು ಕಂಗನಾ ಆರೋಪಿಸಿದ್ದಾರೆ. ಈ ಸಂದರ್ಭದ ಚಿತ್ರಗಳು ಜಾಲತಾಣದಲ್ಲಿ ವೈರಲ್​ ಆಗಿವೆ. ರೈತ ಮುಖಂಡ ರಾಕೇಶ್ ತಿಕಾಯತ್​ ಈ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ. ಘಟನೆಯ ವಿವರ ತಿಳಿದ ನಂತರವೇ ಪ್ರತಿಕ್ರಿಯಿಸುತ್ತೇನೆ ಎಂದಿದ್ದಾರೆ.

ತಮ್ಮ ವಿವಾದಾತ್ಮಕ ಸೋಷಿಯಲ್ ಮೀಡಿಯ ಪೋಸ್ಟ್​ಗಳಿಗೆ ಹೆಸರಾಗಿರುವ ಕಂಗನಾ, ರೈತರ ಪ್ರತಿಭಟನೆಯ ಬಗ್ಗೆ ಮಾಡಿದ ಇನ್​ಸ್ಟಾಗ್ರಾಂ ಪೋಸ್ಟ್​ ಹಿನ್ನೆಲೆಯಲ್ಲಿ ಬೆದರಿಕೆ ಕರೆಗಳು ಬರುತ್ತಿವೆ ಎಂದು ಕಳೆದ ಮಂಗಳವಾರ ಎಫ್​ಐಆರ್​ ಸಲ್ಲಿಸಿದ್ದರು ಎಂದು ವರದಿ ತಿಳಿಸಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net