

ಬೆಂಗಳೂರು: ಭಾರತದ ಮೊದಲ ಒಮಿಕ್ರಾನ್ ಪ್ರಕರಣಗಳು ಕರ್ನಾಟಕದಲ್ಲೇ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅದಾಗಲೇ ರಾಜ್ಯದ ಜನರಲ್ಲಿ ಆತಂಕ ಮನೆಮಾಡಿದೆ. ಇದೀಗ ರಾಜಧಾನಿ ಬೆಂಗಳೂರಿನ ಜನತೆಗೆ ಮತ್ತಷ್ಟು ಕಳವಳ ಮೂಡಿಸುವ ವಿಷಯ ಹೊರಬಿದ್ದಿದೆ. ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಬಂದಿಳಿದಿರುವ ಕನಿಷ್ಠ 10 ಜನ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಟ್ರೇಸ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಬಿಬಿಎಂಪಿ ತಿಳಿಸಿದೆ.
ಬಿಬಿಎಂಪಿ ಮೂಲಗಳ ಪ್ರಕಾರ, ದಕ್ಷಿಣ ಆಫ್ರಿಕಾದಲ್ಲಿ ಒಮಿಕ್ರಾನ್ ರೂಪಾಂತರಿ ಪತ್ತೆಯಾದ ಬಳಿಕ ವಿಮಾನಗಳ ಮೂಲಕ 57 ಪ್ರಯಾಣಿಕರು ಬೆಂಗಳೂರಿಗೆ ಬಂದಿದ್ದಾರೆ. ಇವರಲ್ಲಿ 10 ಜನರು ನೀಡಿರುವ ವಿಳಾಸದಲ್ಲಿ ಲಭ್ಯವಾಗುತ್ತಿಲ್ಲ. ಅವರ ಮೊಬೈಲ್ ಫೋನುಗಳೂ ಸ್ವಿಚ್ಡ್ ಆಫ್ ಬರುತ್ತಿದೆ ಎನ್ನಲಾಗಿದೆ.
ಬಿಬಿಎಂಪಿ ಆರೋಗ್ಯ ಅಧಿಕಾರಿಗಳು ಅವರನ್ನು ಟ್ರ್ಯಾಕ್ ಮತ್ತು ಟ್ರೇಸ್ ಮಾಡುವ ಪ್ರಯತ್ನದಲ್ಲಿದ್ದಾರೆ. ಫೋನಿಗೆ ಉತ್ತರ ನೀಡದಿರುವವರ ಬಗ್ಗೆ ಕ್ರಮ ತೆಗೆದುಕೊಳ್ಳಲು ಪ್ರೊಟೋಕಾಲನ್ನು ಅನುಸರಿಸುತ್ತಿದ್ದೇವೆ. ಜನರು ಎಚ್ಚರವಾಗಿದ್ದು, ಕರೊನಾ ಮುನ್ನೆಚ್ಚರಿಕೆಗಳನ್ನು ಮುಂದುವರಿಸಬೇಕು ಎಂದು ಬಿಬಿಎಂಪಿ ಕಮಿಷನರ್ ಗೌರವ್ ಗುಪ್ತ ಹೇಳಿದ್ದಾರೆ. (ಏಜೆನ್ಸೀಸ್)