More

    ಬರೋಬ್ಬರಿ 2.15 ಕೋಟಿ ರೂ. ಸಂಬಳ! ಐಐಟಿ ವಿದ್ಯಾರ್ಥಿಗೆ ಬಂಪರ್​ ಆಫರ್​​

    ರೂರ್ಕಿ: ಐಐಟಿಯ ವಿದ್ಯಾರ್ಥಿಯೊಬ್ಬನಿಗೆ ಕ್ಯಾಂಪಸ್​ ಸೆಲೆಕ್ಷನ್​ನಲ್ಲಿ ವರ್ಷಕ್ಕೆ 2.15 ಕೋಟಿ ರೂಪಾಯಿ ಸಂಬಳದ ಆಫರ್​ ಸಿಕ್ಕಿರುವುದು ವರದಿಯಾಗಿದೆ. ಇದು ಈವರೆಗೆ ಭಾರತದ ಎಲ್ಲಾ ಐಐಟಿಗಳ ಇತಿಹಾಸದಲ್ಲೇ ಅತ್ಯಧಿಕ ಮೊತ್ತದ ಉದ್ಯೋಗಾವಕಾಶವಾಗಿದೆ ಎಂದು ವರದಿ ತಿಳಿಸಿದೆ.

    ಉತ್ತರಾಖಂಡದ ರೂರ್ಕಿಯಲ್ಲಿ ಮತ್ತು ಇತರ ಐಐಟಿಗಳಲ್ಲಿ ಡಿಸೆಂಬರ್​ 1 ರಿಂದ 15 ರವರೆಗೆ ವರ್ಚುವಲ್​ ಆಗಿ ಪ್ಲೇಸ್​ಮೆಂಟ್​ ಡ್ರೈವ್​ ನಡೆಯುತ್ತಿದೆ. ಮೊದಲ ದಿನವೇ ರೂರ್ಕಿ ಐಐಟಿಯ ಕಂಪ್ಯೂಟರ್​ ಸೈನ್ಸ್​​ ವಿದ್ಯಾರ್ಥಿಗೆ ಕಂಪೆನಿಯೊಂದು ಈ ಭಾರೀ ಮೊತ್ತದ ಸಿಟಿಸಿಯ ಭರವಸೆ ನೀಡಿದೆ. ಈ ಮೂಲಕ ಈವರೆಗೆ ಇನ್​ಸ್ಟಿಟ್ಯೂಟ್​ನ ವಿದ್ಯಾರ್ಥಿಯೊಬ್ಬ ವರ್ಷಕ್ಕೆ 1.5 ಕೋಟಿ ರೂ. ಪ್ಯಾಕೇಜ್​ ಪಡೆದಿದ್ದ ದಾಖಲೆಯನ್ನು ಮುರಿದಂತಾಗಿದೆ. ಈ ಮಾಹಿತಿಯನ್ನು ನೀಡಿರುವ ಐಐಟಿ ಆಡಳಿತ ಮಂಡಳಿ, ವಿದ್ಯಾರ್ಥಿಯ ಗುರುತನ್ನು ಬಹಿರಂಗಪಡಿಸಿಲ್ಲ ಹಾಗೂ ಉದ್ಯೋಗದಾತ ಕಂಪೆನಿಯ ವಿವರಗಳನ್ನೂ ನೀಡಿಲ್ಲ.

    ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಮುಗಿಯದ ಕರೊನಾತಂಕ: ಮತ್ತೆ 3 ಶಾಲೆಗಳಲ್ಲಿ ಸೋಂಕು ಪತ್ತೆ

    ಈ ಆಫರ್​ನ ನಂತರದ ಸ್ಥಾನಗಳಲ್ಲಿ ಬಾಂಬೆ ಐಐಟಿಯ ವಿದ್ಯಾರ್ಥಿಯೊಬ್ಬನಿಗೆ 2.05 ಕೋಟಿ ರೂ. ಪ್ಯಾಕೇಜ್​ ಸಿಕ್ಕಿದ್ದು, ಗೌಹಾಟಿ ಐಐಟಿಯ ವಿದ್ಯಾರ್ಥಿಗೆ 2 ಕೋಟಿ ಪ್ಯಾಕೇಜ್​ನ ಆಫರ್ ಸಿಕ್ಕಿದೆ ಎನ್ನಲಾಗಿದೆ. ಕರೊನಾ ತಳಮಳದಿಂದ ಆರ್ಥಿಕ ವಲಯದಲ್ಲಿ ಮಂದಗತಿ ಮೂಡಿದೆ ಎಂಬ ವರದಿಗಳ ನಡುವೆಯೇ ಈ ರೀತಿಯ ಉದ್ಯೋಗಾವಕಾಶಗಳು ಸಿಗುತ್ತಿರುವುದು ಇಂಜಿನಿಯರಿಂಗ್​ ವಿದ್ಯಾರ್ಥಿಗಳಲ್ಲಿ ತಲ್ಲಣ ಮೂಡಿಸಿದೆ. (ಏಜೆನ್ಸೀಸ್)

    ವಿಕಿ-ಕತ್ರೀನಾ ಮದುವೆಗಾಗಿ ಸಿದ್ಧತಾ ಸಭೆ; ವೈರಲ್​ ಆಗಿದೆ ಜಿಲ್ಲಾಧಿಕಾರಿಯ ನೋಟೀಸ್​​

    ಪಾಕ್​ ಗಾಳಿಯಿಂದ ದೆಹಲಿ ಕಲುಷಿತವಾಗ್ತಿದೆ: ಸುಪ್ರೀಂ ಕೋರ್ಟ್​ ಮುಂದೆ ಯುಪಿ ಸರ್ಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts