ಪಾಕ್​ ಗಾಳಿಯಿಂದ ದೆಹಲಿ ಕಲುಷಿತವಾಗ್ತಿದೆ: ಸುಪ್ರೀಂ ಕೋರ್ಟ್​ ಮುಂದೆ ಯುಪಿ ಸರ್ಕಾರ

delhi
Published on

ನವದೆಹಲಿ: ಪಾಕಿಸ್ತಾನದಿಂದ ಬರುವ ಕಲುಷಿತ ಗಾಳಿಯು ದೆಹಲಿಯ ವಾಯು ಗುಣಮಟ್ಟವನ್ನು ಕೆಡಿಸುತ್ತಿದೆ ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿದೆ. ದೆಹಲಿ ವಾಯು ಮಾಲಿನ್ಯದ ಬಗೆಗಿನ ವಿಚಾರಣೆಯ ವೇಳೆ ಈ ಮಾತು ಹೇಳಿದ ಸರ್ಕಾರಿ ವಕೀಲರು, ತಮ್ಮ ರಾಜ್ಯದ ಕಾರ್ಖಾನೆಗಳು ರಾಷ್ಟ್ರ ರಾಜಧಾನಿಯ ಮಾಲಿನ್ಯಕ್ಕೆ ಕೊಡುಗೆ ನೀಡುತ್ತಿಲ್ಲ ಎಂದು ವಾದಿಸಿದರು.

ಯುಪಿ ಸರ್ಕಾರದ ವಕೀಲರಾದ ರಣಜಿತ್​ ಕುಮಾರ್​, ರಾಜ್ಯದ ಕಾರ್ಖಾನೆಗಳ ಹೊಗೆಯು ಡೌನ್​ವಿಂಡ್​ ಆಗಿ ಕೆಳಕ್ಕೆ ಸಂಚರಿಸುತ್ತವೆ. ದೆಹಲಿಯ ಕಡೆಗೆ ಹೋಗುವುದಿಲ್ಲ ಎಂದು ವಾದಿಸಿದರು. ದೆಹಲಿ ಎನ್​ಸಿಆರ್​ ಮತ್ತು ಸುತ್ತಮುತ್ತಲ ಪ್ರದೇಶಗಳ ಕೈಗಾರಿಕೆಗಳ ಮೇಲೆ ಎಂಟು ಗಂಟೆ ಮಾತ್ರ ಕಾರ್ಯನಿರ್ವಹಿಸಬೇಕೆಂಬ ನಿರ್ಬಂಧ ವಿಧಿಸಿ ಯುಪಿಯ ಸಕ್ಕರೆ ಮತ್ತು ಹಾಲಿನ ಕಾರ್ಖಾನೆಗಳಿಗೆ ತೊಂದರೆ ಉಂಟಾಗುತ್ತದೆ ಎಂದ ಅವರು, ಪಾಕಿಸ್ತಾನದ ಕಡೆಯಿಂದ ಬರುತ್ತಿರುವ ಕಲುಷಿತ ಗಾಳಿ ದೆಹಲಿಯ ಹವಾ ಹಾಳಾಗಲು ಕಾರಣವಾಗಿದೆ ಎಂದರು.

ಈ ವಾದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ಎನ್​.ವಿ.ರಮಣ, "ಹಾಗಿದ್ದರೆ, ನಾವು ಪಾಕಿಸ್ತಾನದ ಕಾರ್ಖಾನೆಗಳನ್ನು ನಿಷೇಧಿಸಬೇಕು ಎಂದು ಕೇಳುತ್ತಿದ್ದೀರಾ?" ಎಂದು ಕೇಳಿದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net