ವಿದ್ಯಾರ್ಥಿಗಳಿಗೆ ಮುಗಿಯದ ಕರೊನಾತಂಕ: ಮತ್ತೆ 3 ಶಾಲೆಗಳಲ್ಲಿ ಸೋಂಕು ಪತ್ತೆ

schools
Published on

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯಲ್ಲಿ ಇನ್ನೂ ಐವರು ಶಾಲಾ ವಿದ್ಯಾರ್ಥಿಗಳಿಗೆ ಕರೊನಾ ಸೋಂಕು ತಗುಲಿದೆ. ಸೋಂಕಿತರು ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಮೊರಾರ್ಜಿ ದೇಸಾಯಿ ಶಾಲೆ, ಅಕ್ಕಲಪುರ ಸ.ಹಿ.ಪ್ರಾ.ಶಾಲೆ ಮತ್ತು ಗುಂಡ್ಲುಪೇಟೆ ಹೆಣ್ಣುಮಕ್ಕಳ ಸರ್ಕಾರಿ ಪ್ರೌಢಶಾಲೆಗಳಿಗೆ ಸೇರಿದವರು ಎನ್ನಲಾಗಿದೆ.

ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಮೂರೂ ಶಾಲೆಗಳ ಎಲ್ಲಾ ವಿದ್ಯಾರ್ಥಿಗಳಿಗೆ ಆರ್.ಟಿ.ಪಿ.ಸಿ.ಆರ್ ಟೆಸ್ಟ್ ಮಾಡಿಸಲಾಗುತ್ತಿದೆ. ಈ ಶಾಲೆಗಳಿಗೆ ಎರಡು ದಿನ ರಜೆ ಘೋಷಿಸಲಾಗಿದ್ದು, ಶಾಲಾ ಆವರಣಗಳನ್ನು ಸ್ಯಾನಿಟೈಸ್​ ಮಾಡಲಾಗಿದೆ.

ಈ ಮುನ್ನ, ಮಂಗಳವಾರದಂದು, ಗುಂಡ್ಲುಪೇಟೆ ತಾಲೂಕಿನ ಕೊಡಗಾಪುರ ಶಾಲೆಯ ಇಬ್ಬರು ಮಕ್ಕಳಿಗೆ ಸೋಂಕು ತಗುಲಿತ್ತು, ಚಾಮರಾಜನಗರ ಸರ್ಕಾರಿ ಮೆಡಿಕಲ್ ಕಾಲೇಜಿನ ಆರು ಮಂದಿ ವಿದ್ಯಾರ್ಥಿಗಳಿಗೆ ಮತ್ತು ಒಬ್ಬ ಇಂಟರ್ನಿಗೆ ಕರೊನಾ ಪಾಸಿಟಿವ್ ಬಂದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net