ಧಾರವಾಡ: ಭಾರತ ಶತಮಾನಗಳ ಹಿಂದೆ ವಿಶ್ವಕ್ಕೆ ಮಾದರಿಯÁಗಿತ್ತು. ಇಂದು ವಿಜ್ಞಾನ- ತಂತ್ರಜ್ಞಾನ, ಆರ್ಥಿಕತೆಯಲ್ಲಿ ಉತ್ತಮ ಪ್ರಗತಿ ಸಾಽಸುತ್ತಿದ್ದು,೨೦೪೭ಕ್ಕೆ ಅಭಿವೃದ್ಧಿಯಲ್ಲಿ ವಿಶ್ವದ ನಂ. 1 ರಾಷ್ಟçವಾಗಲಿದೆ ಎಂದು ಉಪ ರಾಷ್ಟçಪತಿ ಜಗದೀಪ ಧನಕರ್ ಹೇಳಿದರು.
ಧಾರವಾಡ ಐಐಟಿಯಲ್ಲಿ ನಿರ್ಮಿಸಿದ ಜ್ಞಾನ ಸಂಪನ್ಮೂಲ ಮತ್ತು ದತ್ತಾಂಶ ಕೇಂದ್ರ ಹಾಗೂ ಸೆಂಟ್ರಲ್ ಲರ್ನಿಂಗ್ ಥಿಯೇಟರ್ ಮತ್ತು ಶಾಶ್ವತ ಕಟ್ಟಡದಲ್ಲಿನ ೨ ನೂತನ ಪ್ರವೇಶ ದ್ವಾರಗಳು ಸೇರಿ ವಿವಿಧ ಸೌಲಭ್ಯಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವದ ರಾಷ್ಟçಗಳ ದೃಷ್ಟಿ ಭಾರತದತ್ತ ನೆಟ್ಟಿದೆ. ಇಡೀ ವಿಶ್ವ ಭಾರತೀಯ ತಾಂತ್ರಿಕತೆಯತ್ತ ಗಮನ ಹರಿಸಿವೆ. ಚಂದ್ರಯÁನ- ೩ರ ಯಶಸ್ಸು ಜಾಗತಿಕ ಇತಿಹಾಸದಲ್ಲಿ ದಾಖಲಾಗಿದೆ. ಭಾರತದ ಆರ್ಥಿಕತೆ ಜಾಗತಿಕ ಮಟ್ಟದಲ್ಲಿ ೫ನೇ ಸ್ಥಾನದಲ್ಲಿದ್ದು, ೨೦೩೦ಕ್ಕೆ ಮೊದಲ ೩ ರಾಷ್ಟçಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಳ್ಳಲಿದೆ. ಐಐಟಿ, ಐಐಐಟಿ ಪದವೀಧರಿಗೆ ಇಸ್ತೋ, ಇತರ ಉನ್ನತ ಸಂಸ್ಥೆಗಳಲ್ಲಿ ಅವಕಾಶಗಳ ಬಾಗಿಲು ತೆರೆದಿದೆ. ಗಗನಯÁನಕ್ಕೆ ನಾಲ್ವರನ್ನು ಸಜ್ಜು ಮÁಡಿದ್ದು, ವಿಶ್ವದ ದೃಷ್ಟಿ ಭಾರತದತ್ತ ನೆಟ್ಟಿದೆ ಎಂದರು.
ಇತ್ತೀಚಿನ ದಶಕದಲ್ಲಿ ಭಾರತ ರಕ್ಷಣೆ, ಬಾಹ್ಯಾಕಾಶ, ಮಹಿಳಾ ಸಬಲೀಕರಣ, ತಂತ್ರಜ್ಞಾನದ ಅವಿಷ್ಕಾರಗಳಲ್ಲಿ ಸ್ವತಂತ್ರ ಸಾಧನೆಗೈದಿದೆ. ಸುಸ್ಥಿರ ಅಭಿವೃದ್ಧಿಯತ್ತ ನೆಗೆಯುತ್ತಿರುವ ಭಾರತ ೨೦೪೭ರ ಸ್ವಾತಂತ್ರ‍್ಯದ ಶತಮÁನೋತ್ಸವಕ್ಕೆ ವಿಶ್ವದ ನಂ. ೧ ರಾಷ್ಟçವಾಗುವುದು ಖಚಿತ ಎಂದರು.
ಕೇAದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ದೇಶದಲ್ಲಿ ಐಐಟಿ, ಏಮ್ಸ್ಗಳನ್ನು ನಿರ್ಮಿಸಿರುವುದು ಬಿಜೆಪಿ ಸರ್ಕಾರದ ಟ್ರ‍್ಯಾಕ್ ರೆಕಾರ್ಡ್. ಧಾರವಾಡದಲ್ಲಿ ವಿಶ್ವವಿದ್ಯಾಲಯ, ಕೃಷಿ ವಿಶ್ವವಿದ್ಯಾಲಯ, ಐಐಟಿ, ಐಐಐಟಿ, ಕಾನೂನು ವಿಶ್ವವಿದ್ಯಾಲಯ, ೨ ಡೀಮ್ಡ್ ವಿಶ್ವವಿದ್ಯಾಲಯಗಳಿವೆ. ಒಂದು ಶುಭ ಸಂದರ್ಭದಲ್ಲಿ ಧಾರವಾಡಕ್ಕೆ ಬರುವ ವಾಗ್ದಾನ ನೀಡಿದ್ದ ಉಪ ರಾಷ್ಟçಪತಿ, ಇದೀಗ ಐಐಟಿಯ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆಗೆ ಆಗಮಿಸಿರುವುದು ಧಾರವಾಡದ ಹೆಮ್ಮೆ ಎಂದರು.
ಐಐಟಿ ನಿರ್ದೇಶಕ ಡಾ. ವೆಂಕಪ್ಪಯ್ಯ ದೇಸಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ರಾಜ್ಯಪಾಲ ಥಾವರಚಂದ್ ಗೆಹಲೋತ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಡಾ. ಸುದೇಶ ಧನಕರ್ ವೇದಿಕೆಯಲ್ಲಿದ್ದರು.
ಉಪ ರಾಷ್ಟçಪತಿ ಜಗದೀಪ ಧನಕರ್ ವಿಶ್ವಾಸದ ನುಡಿ; ಭಾರತ ೨೦೪೭ಕ್ಕೆ ಜಗತ್ತಿನ ನಂ. ೧ ರಾಷ್ಟçವಾಗಲಿದೆ
You Might Also Like
ಚಳಿಗಾಲದಲ್ಲಿ ಹಸಿ ಶುಂಠಿಯ ಪ್ರಯೋಜನಗಳು ನಿಮಗೆ ತಿಳಿದಿದೆಯೇ? Health Benefits of Ginger
Health Benefits of Ginger : ಶುಂಠಿಯು ಅನೇಕ ಆರೋಗ್ಯಕಾರಿ ಪ್ರಯೋಜನಗಳನ್ನು ಹೊಂದಿದೆ ಎಂದು ನಮಗೆಲ್ಲರಿಗೂ…
ವೆಜ್ ಪ್ರಿಯರಿಗಾಗಿ ಸ್ಟ್ರೀಟ್ ಸ್ಟೈಲ್ ಮೊಮೊಸ್; ಮನೆಯಲ್ಲೆ ಮಾಡಲು ಇಲ್ಲಿದೆ ಸಿಂಪಲ್ ವಿಧಾನ Recipe
ಸ್ಟ್ರೀಟ್ ಫುಡ್ ಯಾರಿಗೆ ಇಷ್ಟ ಇರುವುದಿಲ್ಲ ಹೇಳಿ, ಸಂಜೆಯಾದರೆ ಸಾಕು ಸ್ಟ್ರೀಟ್ ಫುಡ್ ತಿನ್ನಬೇಕು ಎನ್ನಿಸುತ್ತದೆ.…
ಹೀಲ್ಸ್ ಧರಿಸುವುದು ಎಷ್ಟು ಅಪಾಯಕಾರಿ ಗೊತ್ತೆ?; ತಪ್ಪದೆ ಈ ಮಾಹಿತಿ ತಿಳಿದುಕೊಳ್ಳಿ | Health Tips
ಹೈಹೀಲ್ಸ್ ಬೂಟುಗಳನ್ನು ಧರಿಸುವುದು ಪರಿಪೂರ್ಣ ಭಂಗಿಯನ್ನು ನೀಡುತ್ತದೆ, ಎತ್ತರವಾಗಿ ಕಾಣುತ್ತದೆ ಮತ್ತು ಸ್ಟೈಲಿಶ್ ಆಗಿ ಕಾಣುತ್ತದೆ.…