

ಯಳಂದೂರು: ಸ್ವಚ್ಛತೆ ಕೇವಲ ಪೌರಕಾರ್ಮಿಕರು ಹಾಗೂ ಪಂಚಾಯಿತಿ ಕೆಲಸ ಮಾತ್ರವಲ್ಲ, ಅದರಲ್ಲಿ ಸಾರ್ವಜನಿಕರ ಸಹಭಾಗಿತ್ವವೂ ಮುಖ್ಯವಾಗಿರಬೇಕು ಎಂದು ಹೊನ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್.ಶಂಕರ್ ರೂಪೇಶ್ ಅಭಿಪ್ರಾಯಪಟ್ಟರು.
ಹೊನ್ನೂರು ಗ್ರಾಮ ಪಂಚಾಯಿತಿ ವತಿಯಿಂದ ಭಾನುವಾರ ಏರ್ಪಡಿಸಿದ್ದ ಸ್ವಚ್ಛತೆಯೇ ಸೇವೆ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರತಿಯೊಬ್ಬರೂ ವಾಸಿಸುವ ಮನೆ ಮಾತ್ರವಲ್ಲದೆ ಕೆಲಸ ಮಾಡುವ ಸ್ಥಳ ಸುತ್ತಲಿನ ಪ್ರದೇಶದಲ್ಲಿ ಶುಚಿತ್ವ ಕಾಪಾಡಿಕೊಳ್ಳಬೇಕು, ಮರ, ಗಿಡಗಳನ್ನು ಬೆಳೆಸುವುದರಿಂದ ಆರೋಗ್ಯಕರ ಸಮಾಜ ನಿರ್ಮಾಣ ಮಾಡಬಹುದು ಎಂದರು.
ಗ್ರಾಮದ ಅಂಬೇಡ್ಕರ್ ಪುತ್ಥಳಿ ಸುತ್ತಮುತ್ತ, ಸಮುದಾಯ ಭವನ, ಶಾಲೆಗಳ ಸುತ್ತಮುತ್ತಲ್ಲಿನ ಪ್ರದೇಶವನ್ನು ಸ್ವಚ್ಛ ಮಾಡುವ ಜತೆಗೆ ಸ್ವಚ್ಛತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಯಿತು.
ಗ್ರಾಪಂ ಸದಸ್ಯರಾದ ಆರ್.ಪುಟ್ಟಬಸವಯ್ಯ, ಎಚ್.ಆರ್.ಕುಮಾರ್, ರಾಧಾ, ಇಂದ್ರ, ಅನಿತಾ, ಚಿನ್ನಸ್ವಾಮಿ, ಪಿಡಿಒ ನಿರಂಜನ್, ಕಾರ್ಯದರ್ಶಿ ಲಕ್ಷ್ಮೀ, ಆಶಾ ಕಾರ್ಯಕರ್ತಯರು ಹಾಗೂ ಸಿಬ್ಬಂದಿ ಹಾಜರಿದ್ದರು.