7 ತಿಂಗಳಲ್ಲಿ ಪಬ್​ಜಿ ಆದಾಯ 22,403 ಕೋಟಿ ರೂ.ಗೆ ಏರಿಕೆ...!

PUBG_image_7_1
Published on

ನವದೆಹಲಿ: ಲಾಕ್​ಡೌನ್​ ಸಮಯದಲ್ಲಿ ಆರ್ಥಿಕತೆ ಕುಸಿಯುವ ಹಂತಕ್ಕೆ ತಲುಪಿದ್ದರೆ, ಕೆಲವು ಕ್ಷೇತ್ರಗಳಿಗಂತೂ ಇದು ಹಬ್ಬವೇ ಆಗಿತ್ತು. ಅದರಲ್ಲೂ ಚೀನಾದ ಪಬ್​ಜಿ ಮೊಬೈಲ್​ ಗೇಮ್​ ಆದಾಯ ಗಳಿಕೆಯಲ್ಲಿ ಜೀವಮಾನದ ದಾಖಲೆ ಮಾಡಿದೆ.

ಟೆನ್ಸೆಂಟ್​ ಗೇಮ್ಸ್​​ ಪ್ಲೇಯರ್ಸ್​ ಅನ್​ನೌನ್​ ಬ್ಯಾಟಲ್​ ಗ್ರೌಂಡ್​ (ಪಬ್​ಜಿ) ಜಾಗತಿಕವಾಗಿ ಏಳು ತಿಂಗಳಲ್ಲಿ 22,403 ಕೋಟಿ ರೂ. ಆದಾಯ ಗಳಿಸಿದೆ. ಮೊಬೈಲ್​ ಆ್ಯಪ್​ಗಳ ಟ್ರೆಂಡ್​ ಗುರುತಿಸುವ ಸೆನ್ಸರ್​ ಟವರ್​ ಈ ಮಾಹಿತಿಯನ್ನು ಬಹಿರಂಗಗೊಳಿಸಿದೆ.

ಮಾರ್ಚ್​ ತಿಂಗಳೊಂದರಲ್ಲಿಯೇ 270 ಮಿಲಿಯನ್​ ಡಾಲರ್​ ಗಳಿಸಿದ್ದರೆ, ಈ ವರ್ಷದಲ್ಲಿ ಇದರ ಒಟ್ಟಾರೆ ಗಳಿಕೆ 1.3 ಬಿಲಿಯನ್​ ಆಗಿತ್ತು. ಇನ್ನೊಂದು ಜನಪ್ರಿಯ ಮೊಬೈಲ್​ ಶೂಟರ್​ ಗೇಮ್​ಗೆ ಹೋಲಿಸಿದರೆ ಇದರ ಆದಾಯ ನಾಲ್ಕು ಪಟ್ಟು ಹೆಚ್ಚಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಈ ಗೇಮ್​ಗಳಷ್ಟೇ ಇನ್ನೂ ಹಲವು ಗೇಮ್​ಗಳಿಗೂ ಭಾರಿ ಬೇಡಿಕೆ ವ್ಯಕ್ತವಾಗಿದೆ. ನೈವ್ಸ್​ ಓಟ್​ ಫ್ರಾಮ್​ ನೆಟ್​ಈಸ್​ ಗೇಮ್​ 260 ಮಿಲಿಯನ್​ ಡಾಲರ್​, ಕಾಲ್​ ಫಾರ್​ ಡ್ಯೂಟಿ 220 ಮಿಲಿಯನ್ ಗಳಿಸಿದೆ.

ಹೆಚ್ಚಿನ ಆದಾಯ ಚೀನಾದಿಂದಲೇ ಬಂದಿದ್ದರೆ, ನಂತರದ್ದು ಅಮೆರಿಕದಿಂದ, ಬಳಿಕ ಜಪಾನ್​ನಿಂದ ಹೆಚ್ಚಿನ ಆದಾಯ ಬಂದಿದೆ ಎಂದು ಸೆನ್ಸರ್​ ಟವರ್​ ಮಾಹಿತಿ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net