ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ

puc
Published on

ಬೆಂಗಳೂರು: ಕರೊನಾತಂಕದ ನಡುವೆಯೂ ದ್ವಿತೀಯ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಇಂದು ಮಹತ್ವದ ದಿನ. ಸುಮಾರು 7 ಲಕ್ಷ ವಿದ್ಯಾರ್ಥಿಗಳ ಫಲಿತಾಂಶ ಈಗಾಗಲೇ ಇಲಾಖೆಯ ಅಧಿಕೃತ ವೆಬ್​ಸೈಟ್​ನಲ್ಲಿ ಪ್ರಕಟವಾಗಿದೆ.

ಬೆಳಗ್ಗೆ 11.30ಕ್ಕೆ ಎಲ್ಲ ವಿದ್ಯಾರ್ಥಿಗಳ ಮೊಬೈಲ್​ಗೆ ಎಸ್​ಎಂಎಸ್​ ಮುಖಾಂತರ ಫಲಿತಾಂಶ ರವಾನೆಯಾಗಿದೆ. ಇಲಾಖೆ ವೆಬ್​ಸೈಟ್​ www.karresults.nic.in ನಲ್ಲಿ ಫಲಿತಾಂಶ ವೀಕ್ಷಿಸಬಹುದು. ಇದನ್ನೂ ಓದಿರಿ ಈಶ್ವರಪ್ಪ ಮನೆಗೂ ಕಾಲಿಟ್ಟ ಕರೊನಾ, ಸೋಂಕಿನ ಭೀತಿಯಲ್ಲಿ ಕುಟುಂಬಸ್ಥರು

ಕಳೆದ ಮಾರ್ಚ್​ 4ರಿಂದ 21ನೇ ತಾರೀಖಿನವರೆಗೂ ದ್ವಿತೀಯ ಪಿಯು ಎಕ್ಸಾಂ ನಡೆದಿತ್ತು. ಮಾರ್ಚ್ 23ರಂದು ಕೊನೆಯದಾಗಿ ಇಂಗ್ಲಿಷ್​ ಪರೀಕ್ಷೆ ನಡೆಯಬೇಕಿತ್ತು. ಅಷ್ಟರಲ್ಲಿ ಕರೊನಾ ಭೀತಿ ಆವರಿಸಿದ್ದರಿಂದ ಈ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಕಳೆದ ತಿಂಗಳು ಅಂದರೆ ಜೂನ್​ 18ರಂದು ಇಂಗ್ಲಿಷ್​ ಎಕ್ಸಾಂ ನಡೆದಿತ್ತು. ಇಂದು ಫಲಿತಾಂಶ ಪ್ರಕಟ ಆಗಿದೆ.

ಮಧ್ಯಾಹ್ನ 12 ಗಂಟೆ ನಂತರ ಇಲಾಖೆ ವೆಬ್​ಸೈಟ್​ನಲ್ಲಿ ಫಲಿತಾಂಶ ಪ್ರಕಟ ಆಗಲಿದೆ ಎಂದು ನಿನ್ನೆ ಶಿಕ್ಷಣ ಸಚಿವ ಸುರೇಶ್​ ಕುಮಾರ್​ ತಿಳಿಸಿದ್ದರು. ಆದರೆ, ನಿಗದಿತ ಸಮಯಕ್ಕೂ 1 ತಾಸು ಮೊದಲೇ ವೆಬ್​ಸೈಟ್​ನಲ್ಲಿ ಫಲಿತಾಂಶ ಪ್ರಕಟವಾಗಿದೆ. ಎಲ್ಲ ವಿದ್ಯಾರ್ಥಿಗಳು ಮನೆಯಲ್ಲೇ ಕುಳಿತು ಮೊಬೈಲ್​, ಕಂಪ್ಯೂಟರ್​ನಲ್ಲಿ ಫಲಿತಾಂಶ ವೀಕ್ಷಿಸುತ್ತಿದ್ದಾರೆ. ಇಲಾಖೆಯಿಂದಲೇ ಎಲ್ಲ ವಿದ್ಯಾರ್ಥಿಗಳ ಮೊಬೈಲ್​ಗೆ ಎಸ್​ಎಂಎಸ್​ ಮುಖಾಂತರ ಫಲಿತಾಂಶ ರವಾನೆಯಾಗಿದೆ.

ವಿದ್ಯಾರ್ಥಿಗಳೇ ಫಲಿತಾಂಶ ಏನೇ ಬರಲಿ ನಿಶ್ಚಿಂತವಾಗಿರಿ. ಅನೂತೀರ್ಣಗೊಂಡರೆ ಪೂರಕ ಪರೀಕ್ಷೆ ಬರೆಯಬಹುದು. ಕಡಿಮೆ ಅಂಕ ಬಂದರೆ ಮುಂದಿನ ತರಗತಿಯಲ್ಲಿ ಹೆಚ್ಚು ಅಂಕ ಗಳಿಸಲು ಪ್ರಯತ್ನಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net