ಈಶ್ವರಪ್ಪ ಮನೆಗೂ ಕಾಲಿಟ್ಟ ಕರೊನಾ, ಸೋಂಕಿನ ಭೀತಿಯಲ್ಲಿ ಕುಟುಂಬಸ್ಥರು

k s eshwar (1)
Published on

ಶಿವಮೊಗ್ಗ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರ ಮನೆ ಮೇಲೂ ಕರೊನಾ ಕಾರ್ಮೋಡ ಕವಿದಿದೆ.

ಈಶ್ವರಪ್ಪರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರಿಗೆ ಸೋಂಕು ಇರುವುದು ದೃಢಪಟ್ಟಿದೆ. ನಾಲ್ಕು ದಿನಗಳಿಂದ ಜ್ವರ ಮತ್ತು ಕೆಮ್ಮಿನಿಂದ ಬಳಲುತ್ತಿದ್ದ ಸಿಬ್ಬಂದಿಗೆ ಕರೊನಾ ಪರೀಕ್ಷೆ ಮಾಡಿಸಲಾಗಿದ್ದು, ನಿನ್ನೆ ಬಂದ ವರದಿಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ.

ಈಶ್ವರಪ್ಪರ ಮನೆಯಲ್ಲಿ ಕೆಲಸಗಾರನಿಗೆ ಕರೊನಾ ಪಾಸಿಟಿವ್​ ಬರುತ್ತಿದ್ದಂತೆ ಮನೆಯ ಸದಸ್ಯರಿಗೆ ಗಂಟಲು ದ್ರವ ಪರೀಕ್ಷೆ ನಡೆಸಲಾಗಿದೆ. ವರದಿ ಇನ್ನಷ್ಟೇ ಬರಬೇಕಿದೆ.

ಈ ಪೈಕಿ ಈಶ್ವರಪ್ಪ ಅವರು ಕರೊನಾ ಪರೀಕ್ಷೆಗೆ ಒಳಪಟ್ಟಿದ್ದಾರೆಯೇ ಎಂಬುದು ಇನ್ನಷ್ಟೆ ತಿಳಿಯಬೇಕಿದೆ. ಅಲ್ಲದೆ ಈ ಮೊದಲೇ ನಿಗದಿಯಾಗಿದ್ದ ಈಶ್ವರಪ್ಪರ ಸುದ್ದಿಗೋಷ್ಠಿ ಕಡೇ ಕ್ಷಣದಲ್ಲಿ ರದ್ದಾಗಿದೆ. ಇಂದು ಬೆಳಗ್ಗೆ 10.30ಕ್ಕೆ ಸಚಿವರು ಸುದ್ದಿಗೋಷ್ಠಿ ನಡೆಸಬೇಕಿತ್ತು. ಇತ್ತೀಚಿಗಷ್ಟೇ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿಗೂ ಕರೊನಾ ಪಾಸಿಟಿವ್​ ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net