ಮುದ ನೀಡುತ್ತದೆ ಎಂದು ಇಬ್ಬರು ಬಾಲಕರ ಕೊಂದ, ಇನ್ನೂ 3 ಜನರ ಕೊಲೆಗೂ ಮುನ್ನ ಸಿಕ್ಕಿಬಿದ್ದ!

psycho killer
Published on

ಆಗ್ರಾ: ಮಾನಸಿಕ ನೆಮ್ಮದಿಯ ಜತೆಗೆ ಮುದ ನೀಡುತ್ತದೆ ಎಂದು ಸಾಲು ಕೊಲೆಗಳಿಗೆ ಯೋಜಿಸುತ್ತಿದ್ದ ಮಾನಸಿಕ ವಿಕೃತನನ್ನು ಆಗ್ರಾ ಪೊಲೀಸರು ಬಂಧಿಸಿದ್ದಾರೆ.

ಇಟಾ ಬಳಿಯ ಧರ್ಮಪುರ್​ ಗ್ರಾಮದ ನಿವಾಸಿ ರಾಧೇ ಶ್ಯಾಂ (30) ಬಂಧಿತ. ಈತ ತನ್ನ ಸಹೋದರ ಸಂಬಂಧಿಗಳಾದ ಇಬ್ಬರು ಬಾಲಕರನ್ನು ಹತ್ಯೆ ಮಾಡಿದ್ದ. ಕೊಡಲಿಯಿಂದ ಕೊಚ್ಚಿ ತನ್ನ ಅಣ್ಣನನ್ನೇ ಕೊಲ್ಲಲು ಯತ್ನಿಸುತ್ತಿದ್ದಾಗ ಸಂಬಂಧಿಕರ ಕೈಗೆ ಸಿಕ್ಕಿಬಿದ್ದಿದ್ದಾಗಿ ಸಕ್ರೌಲಿ ಪೊಲೀಸ್​ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.

ಈತ ಈ ವರ್ಷದ ಫೆಬ್ರವರಿ 4ರಂದು ಸತ್ಯೇಂದ್ರ ಎಂಬ ಬಾಲಕನನ್ನು ಹಾಗೂ ಜೂನ್​ 9ರಂದು ಪ್ರಶಾಂತ್​ ಎಂಬ ಬಾಲಕನನ್ನು ಕೊಂದಿದ್ದ. ಶನಿವಾರ ರಾತ್ರಿ ಗಾಢ ನಿದ್ದೆಯಲ್ಲಿದ್ದ ತನ್ನ ಅಣ್ಣ ವಿಶ್ವನಾಥ್​ ಸಿಂಗ್​ನನ್ನು ಕೊಡಲಿಯಿಂದ ಕೊಚ್ಚಿ ಕೊಲ್ಲಲು ಯತ್ನಿಸುತ್ತಿದ್ದಾಗ ಸಂಬಂಧಿಕರು ಆತನನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದರು ಎಂದು ಹೇಳಿದ್ದಾರೆ.

ನನಗೆ ಜನರು ಸಾಯುವುದನ್ನು ನೋಡಲು ತುಂಬಾ ಸಂತೋಷವಾಗುತ್ತಿತ್ತು. ನಾನು ಕೊಂದಾಗ ಅವರು ಪ್ರಾಣಬಿಡುತ್ತಿದ್ದ ರೀತಿಯನ್ನು ಕಂಡು ಮನಸ್ಸಿಗೆ ಮುದವಾಗುತ್ತಿತ್ತು. ಹಾಗಾಗಿ ನಾನು ಕೊಲೆಗಳನ್ನು ಮಾಡಿದ್ದೇನೆ. ಅಲ್ಲದೆ, ಇನ್ನೂ ಮೂರು ಜನರನ್ನು ಕೊಲ್ಲಲು ಯೋಜನೆ ಹಾಕಿಕೊಂಡಿದ್ದೆ ಎಂದು ವಿಚಾರಣೆ ವೇಳೆ ತಪ್ಪೊಪ್ಪಿಗೆಯಲ್ಲಿ ಹೇಳಿರುವುದಾಗಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net