ನಟಿ ರಮ್ಯಾ ಕೃಷ್ಣನ್​ ಕಾರಿನಲ್ಲಿ ಪತ್ತೆಯಾಯ್ತು ನೂರಕ್ಕೂ ಹೆಚ್ಚು ಮದ್ಯದ ಬಾಟಲ್​ಗಳು...!

Ramya
Published on

ಚೆನ್ನೈ: ಬಹುಭಾಷ ನಟಿ ಹಾಗೂ ಬಾಹುಬಲಿ ಚಿತ್ರದ ಶಿವಗಾಮಿ ಖ್ಯಾತಿಯ ರಮ್ಯಾ ಕೃಷ್ಣನ್ ಅವರ ಕಾರಿನಲ್ಲಿ ಶನಿವಾರ ಸುಮಾರು 100ಕ್ಕೂ ಹೆಚ್ಚು ಮದ್ಯದ ಬಾಟಲ್​ಗಳು ಪತ್ತೆಯಾಗಿದ್ದು, ಚೆನ್ನೈ ಪೊಲೀಸರು ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಮಮ್ಮಲಪುರಂನಿಂದ ಚೆನ್ನೈಗೆ ತೆರಳುವಾಗ ಮಾರ್ಗ ಮಧ್ಯದ ಕನಥೂರಿನ ಚೆಂಕಲ್​ಪೇಟೆಯ ಚೆಕ್​ಪೋಸ್ಟ್​ನಲ್ಲಿ ಕಾರು ತಪಾಸಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಮೂಲಗಳ ಪ್ರಕಾರ 96 ಬಿಯರ್​ ಮತ್ತು 8 ವೈನ್​ ಬಾಟಲ್​ಗಳನ್ನು ಕಾರು ಸಮೇತ ವಶಕ್ಕೆ ಪಡೆಯಲಾಗಿದೆ. ಇದನ್ನೂ ಓದಿ: ಸೆಲೆಬ್ರಿಟಿಗಳ ಕಿಚನ್ ​ಕರಾಮತ್ತು

ಚಾಲಕನನ್ನು ಬಂಧಿಸಲಾಗಿದ್ದು, ಕನಥೂರ್​ ಪೊಲೀಸ್​ ಠಾಣೆಗೆ ಕರೆದೊಯ್ಯಲಾಗಿದೆ. ಅಲ್ಲದೆ ರಮ್ಯಾ ಕೃಷ್ಣನ್​ ಹಾಗೂ ಆಕೆಯ ಸಹೋದರಿ ವಿನಯ ಕೃಷ್ಣನ್​ ಅವರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ತಕ್ಷಣವೇ ಚಾಲಕನಿಗೆ ಜಾಮೀನು ಪಡೆದಿದ್ದಾರೆ ಎಂಬ ಮಾಹಿತಿಯು ಇದೆ.

ಸಿನಿಮಾ ವಿಚಾರಕ್ಕೆ ಬಂದರೆ ಬಾಹುಬಲಿಯ ನಂತರ ಇಡೀ ಭಾರತ ಚಿತ್ರರಂಗದಲ್ಲಿ ಶಿವಗಾಮಿ ಎಂದೇ ಖ್ಯಾತಿಯಾದ ರಮ್ಯಾ ಕೃಷ್ಣನ್​ ಅವರು ಅನೇಕ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಜೀವನಾಧಾರಿತ ವೆಬ್​ಸರಣಿ ಕ್ವೀನ್​ ಚಿತ್ರದಲ್ಲಿ ನಟಿಸಿದ್ದು, ಬಿಡುಗಡೆಯಾಗಬೇಕಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net