More

    ಸೆಲೆಬ್ರಿಟಿಗಳ ಕಿಚನ್ ​ಕರಾಮತ್ತು

    ನಟಿಯರು ಬಗೆಬಗೆಯ ಆಹಾರ ಸವಿಯಬೇಕೆಂದಾಗ ಮಾಡಿಕೊಡಲು ಅಡುಗೆ ಭಟ್ಟರು ಅಥವಾ ಅಮ್ಮಂದಿರು ಇರುತ್ತಾರೆ ಎಂಬುದು ಎಲ್ಲರ ಸಾಮಾನ್ಯ ಭಾವನೆ. ಕೆಲ ನಟಿಯರ ಮನೆಯಲ್ಲಿ ಇದು ನಿಜ ಕೂಡ. ಆದರೆ ಇನ್ನು ಕೆಲ ನಟಿಯರಿಗೆ ತಾವು ಹೊಸ ರುಚಿ ಮಾಡಿ ಸವಿಯುವುದೆಂದರೆ ಎಲ್ಲಿಲ್ಲದ ಪ್ರೀತಿ. ಇಂತಹ ಅಡುಗೆ ಪ್ರೀತಿ ಇರುವ ಕೆಲ ನಟಿಯರು ವಿಜಯವಾಣಿ ಜತೆ ಸಂತಸ ಹಂಚಿಕೊಂಡಿದ್ದಾರೆ.

    ಬೆಂಗಳೂರು: ‘ಮೊದಲೆಲ್ಲ ಪಿಜ್ಜಾ, ನುಟೆಲ್ಲಾ ಬ್ರೆಡ್, ಗಾರ್ಲಿಕ್ ಚಿಲ್ಲಿ ಚೀಸ್ ಬ್ರೆಡ್ ಇಂತಹ ತಿನಿಸನ್ನು ಸಿದ್ಧ ಪಡಿಸುತ್ತಿದ್ದೆ. ಮನೆಯಲ್ಲಿ ಬೆಳ್ಳುಳ್ಳಿ ಬಳಕೆ ಕಡಿಮೆ. ಹಾಗಾಗಿ ಈ ತಿನಿಸುಗಳು ಅಜ್ಜಿಗೆ ರುಚಿಸುತ್ತಿರಲಿಲ್ಲ. ಲಾಕ್​ಡೌನ್ ಸಮಯದಲ್ಲಿ ಹೊಸದಾಗಿ ಜೀರೋ ವೇಸ್ಟ್ ಅಡುಗೆ ಮಾಡಿದ್ದೇನೆ. ಹೀರೇಕಾಯಿ ಪಲ್ಯ ಹಾಗೂ ಅದರ ಸಿಪ್ಪೆಯಿಂದ ಚಟ್ನಿ ಮಾಡಿದ್ದೆ. ಎಲ್ಲರಿಗೂ ಇಷ್ಟ ಆಯಿತು’ ಎಂದು ಹಿಗ್ಗುತ್ತಾರೆ ಪ್ರಣಿತಾ. ‘ಲಾಕ್​ಡೌನ್ ಸಮಯದಲ್ಲಿ ಸ್ನೇಹಿತರು ಸಾಕಷ್ಟು ಜನ ಹೊಸ ಹೊಸ ರುಚಿ ಮಾಡಿ ಪೋಸ್ಟ್ ಮಾಡುತ್ತಿದ್ದರು. ಅದನ್ನೆಲ್ಲ ನೋಡಿ ನನಗೂ ಆಸೆಯಾಗಿ ಡೋಕ್ಲಾ, ಚಾಕಲೇಟ್​ನಂತಹ ಕೆಲ ತಿನಿಸು ಮಾಡಿದ್ದಿದೆ. ನನ್ನ ಕೈ ರುಚಿ ಚೆನ್ನಾಗಿದೆ ಅಂತ ಮನೆಯವರೆಲ್ಲ ಹೇಳುತ್ತಾರೆ. ಇದಕ್ಕೆ ಕಾರಣ ಅಜ್ಜಿ ಮತ್ತು ಅಮ್ಮ’ ಎನ್ನುತ್ತಾರೆ.

    ಉತ್ತರ-ದಕ್ಷಿಣ ಎರಡಕ್ಕೂ ಸೈ: ‘ಕಾಲೇಜು ದಿನಗಳಲ್ಲಿ ಅಡುಗೆ ಕಲಿ ಎಂದು ಅಮ್ಮ ಸದಾ ಹೇಳುತ್ತಿದ್ದರು. ಆದರೆ ಆಗ ಅಷ್ಟೊಂದು ಆಸಕ್ತಿ ಇರಲಿಲ್ಲ. ವಿದ್ಯಾಭ್ಯಾಸ ಸಲುವಾಗಿ ಮನೆ ಬಿಟ್ಟು ಬಂದಾಗ ನಾನೇ ಅಡುಗೆ ಮಾಡಲು ಪ್ರಾರಂಭಿಸಿದೆ. ಆರಂಭದ ದಿನಗಳಲ್ಲಿ ಕೆಲ ಪದಾರ್ಥಗಳು ಹಾಳಾಗಿದ್ದೂ ಉಂಟು’ ಎಂದು ತಮ್ಮ ಅಡುಗೆ ಕಲಿಕೆ ಬಗ್ಗೆ ಹೇಳುತ್ತಾರೆ ಅಪೇಕ್ಷಾ ಪುರೋಹಿತ್. ನಿರ್ದೇಶಕ ಪವನ್ ಒಡೆಯರ್ ಪತ್ನಿ ಅಪೇಕ್ಷಾ ಮೂಲತಃ ಉತ್ತರ ಕರ್ನಾಟಕದವರು. ಪವನ್ ಒಡೆಯರ್ ಮೈಸೂರಿನವರು. ಅಪೇಕ್ಷಾಗೆ ಥಾಲಿ, ರೋಟಿ, ಪರೋಟಾ ಎಂದರೆ ಎಲ್ಲಿಲ್ಲದ ಒಲವು. ಪವನ್​ಗೆ ದಕ್ಷಿಣ ಭಾರತೀಯ ತಿನಿಸು ಮೇಲೆ ಒಲವು.

    ಡ್ರೖೆ ಕಾರ್ನ್ ಪಲ್ಯ: ಅಡುಗೆ ಮಾಡಲು ಪ್ರಾರಂಭಿಸಿದ ದಿನಗಳಲ್ಲಿ ಪಾಪ್​ಕಾರ್ನ್ ಮಾಡಲು ಬಳಸುವ ಒಣಗಿದ ಜೋಳ ಬಳಸಿ ಕ್ಯಾಪ್ಸಿಕಂ ಜತೆ ಪಲ್ಯ ಮಾಡಿದ್ದೆ. ಬಾಯಿಗಿಟ್ಟರೆ ಕಾರ್ನ್ ಗಟ್ಟಿಗಟ್ಟಿಯಾಗೆ ಇದೆ. ಡ್ರೖೆ ಕಾರ್ನ್ ಅನ್ನು ಪಾಪ್​ಕಾರ್ನ್ ಮಾಡಲು ಬಳಸುತ್ತಾರೆಂಬುದು ತಿಳಿದಿರಲಿಲ್ಲ. ಅದನ್ನು ಈಗಲೂ ನೆನೆದು ನಗುತ್ತಿರು ತ್ತೇನೆ.

    ಲಾಕ್​ಡೌನ್​ನಿಂದ ಅಡುಗೆ ಮೇಲೆ ಆಸಕ್ತಿ ಹೆಚ್ಚಾಯಿತು: ‘ಲಾಕ್​ಡೌನ್​ಗಿಂತ ಮುಂಚೆ ಸಮಯ ಸಿಕ್ಕಾಗಲೆಲ್ಲ ಅಡುಗೆ ಮಾಡುತ್ತಿದ್ದೆ. ಆಗ ಅಷ್ಟಾಗಿ ಪರ್ಫೆಕ್ಷನ್ ಇರ್ತಾ ಇರಲಿಲ್ಲ. ಈಗ ಪ್ರತಿ ದಿನ ಹೊಸ ರುಚಿ ಟ್ರೖೆ ಮಾಡ್ತಾ ಇರುವುದರಿಂದ, ಅಡುಗೆ ಮೇಲೆ ಆಸಕ್ತಿ ಜಾಸ್ತಿ ಆಗಿದೆ. ಅಷ್ಟೇ ಅಲ್ಲ, ಹೊರಗಿನ ಫುಡ್ ಸಿಗದ ಕಾರಣ, ಏನೇನು ತಿನ್ನಬೇಕೆನಿಸುತ್ತಿತ್ತೋ ಅದೆಲ್ಲವನ್ನು ಮನೆಯಲ್ಲೇ ಸಿದ್ಧ ಮಾಡುತ್ತಿದ್ದೇವೆ. ಬಿಸ್ಕೆಟ್, ಬ್ರೆಡ್, ಚಾಕಲೇಟ್, ಕೇಕ್… ಹೀಗೆ ಒಂದಲ್ಲ ಒಂದು ಹೊಸ ರುಚಿ ಪ್ರತಿ ದಿನ ಮಾಡ್ತಾ ಇದ್ದೇನೆ’ ಎನ್ನುತ್ತಾರೆ ಉತ್ತರದ ಬೆಡಗಿ ಶಾನ್ವಿ ಶ್ವೀವಾತ್ಸವ್.

    ಹೊರಗಡೆ ಆರ್ಡರ್ ಕ್ಯಾನ್ಸಲ್: ಶಾನ್ವಿಗೆ ಅಡುಗೆ ಮಾಡಲು ಬಂದರೂ ಅಮ್ಮ ಮಾಡಿದ ಬಾತಿ ಚೌಕ, ಚಿಕನ್ ಕರಿ ಆಲ್​ಟೈಮ್ ಫೇವರೆಟ್ ಅಂತೆ. ಅಷ್ಟೇ ಅಲ್ಲದೇ ಕರ್ನಾಟಕದ ಮುದ್ದೆ, ಸಾರು, ಕಾಲುಸೂಪು ನೆನೆಸಿಕೊಂಡರೆ ಬಾಯಲ್ಲಿ ನೀರು ಬರುತ್ತದೆಯಂತೆ. ‘ಒಂದು ದಿನ ತಂದೂರಿ ಮಾಡಿದ್ದೆ. ಇದು ಎಲ್ಲರಿಗೂ ಇಷ್ಟ ಆಯಿತು. ತಂದೂರಿ ತಿನ್ನ ಬೇಕೆಂದಾಗಲೆಲ್ಲ ನೀನೆ ಸಿದ್ಧಪಡಿಸು, ಹೊರಗಿಂದ ತರುವುದು ಬೇಡ ಎಂದರು’ ಎಂದು ನೆನಪಿಸಿಕೊಳ್ಳುತ್ತಾರೆ ಶಾನ್ವಿ.. ತಂದೂರಿ ಮಾತ್ರವಲ್ಲದೇ ಚೈನೀಸ್ ಚಿಕನ್, ಚಿಕನ್ ಲಾಲಿಪಪ್​ನಂತಹ ವಿವಿಧ ಮಾಂಸಹಾರಿ ಖಾದ್ಯಗಳನ್ನು ಶಾನ್ವಿ ಸಿದ್ಧಪಡಿಸಿದ್ದರಂತೆ.

    ಲಾಕ್​ಡೌನ್ ಸಮಯದಲ್ಲಿ ಗೊತ್ತಾದ ಸತ್ಯ!: ಹೆಚ್ಚಾಗಿ ಹೊರಗೆ ಆಹಾರ ಸವಿಯುವವರಿಗೆ ಲಾಕ್​ಡೌನ್ ಬಾಯಿಗೆ ಬೀಗ ಹಾಕಿದ ಹಾಗೆ ಆಗಿತ್ತು. ಒಂದು ವಾರದ ನಂತರ ಮನೆಯಲ್ಲಿ ಹೊಸ ರುಚಿಗಳ ಪ್ರಯೋಗ ಆರಂಭಿಸಿದೆ. ಪಾನಿಪುರಿ ಇಂದ ಹಿಡಿದು ಗೋಬಿ, ಸೂಪ್, ಚೈನೀಸ್ ಖಾದ್ಯ ಎಲ್ಲವನ್ನು ಮನೆಯಲ್ಲೇ ಮಾಡಿದೆವು. ಪ್ರತಿದಿನ ಪವನ್ ಸಹಾಯಕ್ಕೆ ನಿಲ್ಲುತ್ತಿದ್ದರು. ಮದುವೆ ಆದ ಹೊಸತರಲ್ಲಿ ಪವನ್​ಗೆ ನೀವು ಇವತ್ತು ಏನಾದರು ಮಾಡಿ ಎಂದಾಗ, ‘ನನಗೆ ಅಡುಗೆ ಬರುವುದಿಲ್ಲ’ ಎಂದಿದ್ದರು. ಆದರೆ, ಲಾಕ್​ಡೌನ್ ಸಮಯದಲ್ಲಿ ಅಚ್ಚುಕಟ್ಟಾದ ಚಿತ್ರಾನ್ನ ಮಾಡಿದ್ದರು. ಅಡುಗೆ ಮಾಡಲು ಬರದವರು ಮಾಡಿದ ಹಾಗೆ ಚಿತ್ರಾನ್ನ ಇಲ್ಲವಲ್ಲ ಎಂದರೆ, ‘ಅಡುಗೆ ಮಾಡಲು ಬರುತ್ತದೆ ಎಂದರೆ, ದಿನಾ ಮಾಡಲು ಹೇಳಿದ್ರೆ ಕಷ್ಟ ಎಂಬ ಕಾರಣಕ್ಕೆ ಬರಲ್ಲ ಎಂದಿದ್ದೆ’ ಎಂದು ಪವನ್ ಹೇಳಿದ್ದರು. ಪವನ್ ಚಿತ್ರಾನ್ನ ಮಾಡಿದ ದಿನ ನಾನು ಬೇರೆ ಏನೂ ತಿನ್ನುವುದಿಲ್ಲ’ ಎನ್ನುತ್ತಾರೆ ಅಪೇಕ್ಷಾ.

    ಬನಾನಾ ವಾಲ್ನಟ್ ಕೇಕ್: ಮಾಡಿರುವ ಸಾಕಷ್ಟು ಅಡುಗೆಯಲ್ಲಿ ಸದಾ ನೆನಪಿನಲ್ಲಿ ಇರುವಂತಹದು ಎಂದರೆ ಬನನಾ ವಾಲ್ನಟ್ ಕೇಕ್. ‘ಅದು ನಾನು ಮಾಡಿದ ಮೊದಲ ಹೊಸ ರುಚಿ. ಕೇಕ್ ಯಾವಾಗಲೂ ಮಾಡುತ್ತಿರುತ್ತೇನೆ. ಆದರೆ, ಬನನಾ ಕೇಕ್ ಸ್ಪೆಷಲ್ ಆಗಿತ್ತು’ ಎನ್ನುತ್ತಾರೆ ಶಾನ್ವಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts