ಪಿಎಸ್​ಸಿಯಲ್ಲಿ 77ನೇ ರ‍್ಯಾಂಕ್ ಪಡೆದಿದ್ದರೂ ಆತ್ಮಹತ್ಯೆ ಮಾಡಿಕೊಂಡ...

hang
Published on

ತಿರುವನಂತಪುರ: ಸಾರ್ವಜನಿಕ ಸೇವಾ ಆಯೋಗ (ಪಿಎಸ್​ಸಿ)ದ ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆದಿದ್ದ 28ವರ್ಷದ ಯುವಕ ತನ್ನ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೇರಳದ ಕರಕೋಣಂನಲ್ಲಿ ನಡೆದಿದೆ. ಅನು ಮೃತ ಯುವಕ.

ಪಿಎಸ್​ಸಿಯಲ್ಲಿ ಅಷ್ಟೊಳ್ಳೆ ರ‍್ಯಾಂಕ್ ಬಂದಿದ್ದರೂ ಈತನಿಗೆ ಉದ್ಯೋಗ ಸಿಕ್ಕಿರಲಿಲ್ಲ. ಜಾಬ್​ಗಾಗಿ ಪ್ರಯತ್ನಿಸಿ, ಸೋತಿದ್ದ. ಸೂಸೈಡ್​ ನೋಟ್​​ನಲ್ಲೂ ಅನು ಇದನ್ನು ನಮೂದಿಸಿದ್ದಾನೆ. ಉದ್ಯೋಗಕ್ಕಾಗಿ ಏನೆಲ್ಲ ಪ್ರಯತ್ನ ಮಾಡಿದರೂ ಸಿಗುತ್ತಿಲ್ಲ. ಹಾಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಡೆತ್​​ನೋಟ್​​ನಲ್ಲಿ ಬರೆದಿಟ್ಟಿದ್ದಾನೆ.

ಸರ್ಕಾರ ಪಿಎಸ್​ಸಿ ಶ್ರೇಣಿಯನ್ನು ಲೆಕ್ಕಿಸದೆ ಬೇಕಾಬಿಟ್ಟಿ ನೇಮಕಾತಿ ಮಾಡಿದ್ದರಿಂದಲೇ ಈ ಪರಿಸ್ಥಿತಿ ಉಂಟಾಗಿದೆ ಎಂದು ಕಾಂಗ್ರೆಸ್​ ಮತ್ತು ಬಿಜೆಪಿ ನಾಯಕರು ಅಸಮಾಧಾನ ಹೊರಹಾಕಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net