

ಲಾಹೋರ್: ಕರೊನಾ ಲಾಕ್ಡೌನ್ ಕಾರಣದಿಂದಾಗಿ ಭಾರತದಲ್ಲಿ ಸಿಲುಕಿದ್ದ ಸುಮಾರು 200 ಪಾಕಿಸ್ತಾನಿ ಮಂದಿ ಸೆಪ್ಟೆಂಬರ್ 3ರಂದು ವಾಪಸ್ ತಮ್ಮ ದೇಶಕ್ಕೆ ಮರಳಲಿದ್ದಾರೆ.
ಮಾರ್ಚ್ಗೂ ಮೊದಲು ಭಾರತಕ್ಕೆ ಆಗಮಿಸಿದ್ದ ಇವರೆಲ್ಲ ನಂತರ ವಾಪಸ್ ಹೋಗಲಾಗದೆ ಉಳಿದಿದ್ದರು. ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ದೆಹಲಿಗಳಲ್ಲಿ ಬೀಡುಬಿಟ್ಟಿರುವ ಪಾಕಿಸ್ತಾನಿ ಪ್ರಜೆಗಳಿಗಾಗಿಯೇ ಸೆಪ್ಟೆಂಬರ್ 3ರಂದು ವಾಘಾ-ಅತ್ತಾರಿ ಗಡಿ ದ್ವಾರವನ್ನು ತೆರೆಯಲಾಗುವುದು ಎಂದು ಮೂಲಗಳು ತಿಳಿಸಿವೆ.
ಇಲ್ಲಿ ಸಿಲುಕಿರುವ ಪಾಕಿಸ್ತಾನಿ ಪ್ರಜೆಗಳನ್ನು ವಾಪಸ್ ಕಳಿಸುವಲ್ಲಿ ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್ ವಿಶೇಷ ಪ್ರಯತ್ನ ಮಾಡಿದೆ ಎಂದು ಹೇಳಲಾಗಿದೆ. ಸದ್ಯ ಆ ದೇಶದಲ್ಲಿ 2,95,636 ಕರೊನಾ ಸೋಂಕಿತರು ಇದ್ದು, 6288 ಮಂದಿ ಮೃತಪಟ್ಟಿದ್ದಾರೆ.