ಸ್ಲಂ ನಿವಾಸಿಗಳಿಗೆ ನಿವೇಶನ ನೀಡಿ

Provide housing for slum dwellers
ಸಿಂದಗಿ ಪಟ್ಟಣದಲ್ಲಿ ಕೊಳಗೇರಿ ನಿವಾಸಿಗಳಿಗೆ ಬೇರೆ ಕಡೆಗಳಲ್ಲಿ ನಿವೇಶನ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಣಾ ವೇದಿಕೆ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
Published on

ವಿಜಯಪುರ: ಸಿಂದಗಿ ಪಟ್ಟಣದ ಕೊಳಗೇರಿಯಲ್ಲಿ 40 ವರ್ಷದಿಂದ ಕೊಳಗೇರಿಯಲ್ಲಿ ವಾಸವಾಗಿರುವ ನಿವಾಸಿಗಳಿಗೆ ಬೇರೆ ಕಡೆಗಳಲ್ಲಿ ನಿವೇಶನ ನೀಡಬೇಕು ಎಂದು ಕರ್ನಾಟಕ ರಣಾ ವೇದಿಕೆ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಉತ್ತರ ಕರ್ನಾಟಕದ ಅಧ್ಯ ಸಂತೋಷ ಡಂಬಳ ಮಾತನಾಡಿ, ಸಿಂದಗಿ ಪಟ್ಟಣದ 13ನೇ ವಾರ್ಡ್​ನಲ್ಲಿ ಹಿರಿಯ ನಾಗರಿಕರು, ಅಂಗವಿಕಲರು, ಬಡ ಜನರು, ದಲಿತರು, ಅಲ್ಪಸಂಖ್ಯಾತರು ದಿನಗೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಅವರಿಗೆ ಬೇರೆ ಕಡೆ ಜಾಗ ಕಲ್ಪಿಸಬೇಕು. ಅಲ್ಲಿವರೆಗೂ ಅವರನ್ನು ಅಲ್ಲಿಯೇ ಇರಲು ಅವಕಾಶ ಮಾಡಿ ಕೊಡಬೇಕೆಂದು ಮನವಿ ಮಾಡಿದರು.

ನಗರಾಧ್ಯ ಯಾಜ ಕಲಾದಗಿ, ಜಿಲ್ಲಾ ಸಂಚಾಲಕ ಮಹಾದೇವ ರಾವಜಿ, ಮಲ್ಲು ಬಗಲಿ, ಅಕ್ಕರಾಮ ಮಾಸುಳಕರ, ಅಮೀನಸಾಬ ಅಗಸಿಮನಿ, ಶಾಂತಮ್ಮ ಚಾಂದಕೋಟೆ, ಬಸಮ್ಮ ನಾಗರಾಳ, ರೇಣುಕಾ ಮಾದರ, ನಿಲಗಂಗಾ ಕುಂಬಾರ, ಪವಿತ್ರ ಹಡಪದ, ಅಂಬವ್ವ ಕುಂಬಾರ, ಸುಧಾರಾಣಿ ಹಡಪದ ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net